ಮಿಗ್-೨೧ ಪತತ ಇಬ್ಬರು ಪೈಲೆಟ್‌ಗಳು ದುರ್ಮರಣ

ಜೈಪುರ(ರಾಜಸ್ಥಾನ),ಜು.೨೯-ರಾಜ್ಯದ ಬಾರ್ಮರ್ ಬಳಿ ಭಾರತೀಯ ವಾಯುಸೇನೆಯ ಮಿಗ್-೨೧ ಲಘು ವಿಮಾನ ಪತನವಾಗಿ ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ.
ಭಾರತೀಯ ವಾಯುಸೇನೆಯ ಮಿಗ್-೨೧ ಲಘು ಐಎಎಫ್ ವಿಮಾನವು ಬಾರ್ಮರ್ ಬಳಿಯ ಬೇಟೂನ ಭೀಮಡಾ ಗ್ರಾಮದ ಬಳಿ ಪತನಗೊಂಡಿದೆ’ ಎಂದು ಬಾರ್ಮರ್ ಜಿಲ್ಲಾಧಿಕಾರಿ ಲೋಕ್ ಬಂಡು ತಿಳಿಸಿದ್ದಾರೆ.
ಉತ್ತರ ವಾಯುನೆಲೆಯಿಂದ ಟೇಕಾಫ್ ಆಗಿದ್ದ ಅವಳಿ ಆಸನದ ಮಿಗ್-೨೧ ರಾತ್ರಿ ೯.೧೦ ರ ಸುಮಾರಿಗೆ ರಾತ್ರಿ ಹಾರಾಟದ ಸಮಯದಲ್ಲಿ ಭೀಮಡಾ ಗ್ರಾಮದ ಬಳಿ ಅಪಘಾತಕ್ಕೀಡಾಯಿತು. ಇಬ್ಬರೂ ಪೈಲಟ್‌ಗಳಿಗೆ ಮಾರಣಾಂತಿಕ ಗಾಯಗಳಾಗಿ ಅವರು ಸಾವನ್ನಪ್ಪಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅವರೊಂದಿಗೆ ಅಪಘಾತದ ಬಗ್ಗೆ ವಿಚಾರಿಸಿದ್ದು, ಅಪಘಾತದ ಹಿಂದಿನ ನಿಖರವಾದ ಕಾರಣದ ಕುರಿತು ಐಎಎಫ್ ತನಿಖಾ ಕೋರ್ಟ್‌ಗೆ ಆದೇಶಿಸಿದ್ದಾರೆ.
೨೦೨೧ ರಲ್ಲಿ, ಐದು ಮಿಗ್ -೨೧ ಗಳು ಭಾರತದಲ್ಲಿ ಪತನಗೊಂಡಿದ್ದವು. ಇದರ ಪರಿಣಾಮವಾಗಿ ಮೂವರು ಪೈಲಟ್‌ಗಳು ಸಾವನ್ನಪ್ಪಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಐಎಎಫ್ ಪೈಲಟ್, ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಅವರು ಮಿಗ್ -೨೧ ಯುದ್ಧ ವಿಮಾನವು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತರಬೇತಿಯ ಸಮಯದಲ್ಲಿ ಪತನಗೊಂಡ ದುರ್ಘಟನೆಯಲ್ಲಿ ಸಾವನ್ನಪ್ಪಿದರು.
ಒಟ್ಟಾರೆ, ಕಳೆದ ಐದು ವರ್ಷಗಳಲ್ಲಿ ಸಶಸ್ತ್ರ ಪಡೆಗಳಲ್ಲಿ ೪೬ ವಿಮಾನಗಳು ಮತ್ತು ಹೆಲಿಕಾಪ್ಟರ್ ಅಪಘಾತಗಳಲ್ಲಿ ಕನಿಷ್ಠ ೪೪ ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಳೆಯ ಸೋವಿಯತ್ ಮೂಲದ ಮಿಗ್ -೨೧ಎಸ್ ೧೯೬೩ ರಲ್ಲಿ ಐಎಎಫ್ ನಿಂದ ಸೇರ್ಪಡೆಗೊಂಡ ಮೊದಲ ನಿಜವಾದ ಸೂಪರ್ಸಾನಿಕ್ ಯುದ್ಧವಿಮಾನಗಳು, ನಿರ್ದಿಷ್ಟವಾಗಿ ವರ್ಷಗಳಲ್ಲಿ ಹೆಚ್ಚಿನ ಪತನಗೊಂಡಿವೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.