ಮಿಕ್ಸ್ಡ್ ದಾಲ್ ಫ್ರೈ

ಬೇಕಾಗುವ ಸಾಮಗ್ರಿಗಳು

*ಕಡಲೆಬೇಳೆ – ಎರಡೂವರೆ ಚಮಚ
*ಅಲಸಂದೆ ಕಾಳು – ೨ ಚಮಚ
*ಹೆಸರು ಕಾಳು – ೨ ಚಮಚ
*ಶುಂಠಿ ಬೆಳುಳ್ಳಿ ಪೇಸ್ಟ್ – ೧ ಚಮಚ
*ಈರುಳ್ಳಿ – ೨
*ಟೊಮೆಟೊ – ೨
*ಹಸಿ ಮೆಣಸಿನಕಾಯಿ – ೨
*ಕರಿಬೇವು – ೫ ಎಲೆ
*ಅರಿಶಿಣ – ೧ ಚಮಚ
*ಗರಂ ಮಸಾಲ – ೧ ಚಮಚ
*ಅಚ್ಚಖಾರದ ಪುಡಿ – ೧ ಚಮಚ
*ಜೀರಿಗೆ ಪುಡಿ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಕಸೂರಿ ಮೇಥಿ – ೧ ಚಮಚ
*ಹಾಲು – ೧/೪ ಲೀಟರ್
*ಬೆಣ್ಣೆ – ೧ ಚಮಚ
*ಕೊತ್ತಂಬರಿ ಸೊಪ್ಪು –
*ತುಪ್ಪ – ೧ ಚಮಚ
*ನಿಂಬೆರಸ –
*ಉಪ್ಪು – ೧ ಚಮಚ
*ಎಣ್ಣೆ – ೧೦೦ ಮಿ.ಲೀ

ಮಾಡುವ ವಿಧಾನ :

ಕುಕ್ಕರ್‌ಗೆ ನೆನೆಸಿದ ಕಡಲೆಬೇಳೆ, ಅಲಸಂದೆಕಾಳು, ಹೆಸರುಕಾಳಿನೊಂದಿಗೆ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಒಂದು ವಿಷಲ್ ಕೂಗಿಸಿ. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಹಸಿರು ಮೆಣಸಿನಕಾಯಿ, ಈರುಳ್ಳಿ, ಟೊಮೆಟೊವನ್ನು ಹುರಿಯಿರಿ. ನಂತರ ಕರಿಬೇವು, ಅರಿಶಿಣ, ಗರಂ ಮಸಾಲ, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಕಸೂರಿ ಮೇಢಿ ಹಾಖಿ ಫ್ರೈ ಮಾಡಿ. ಹಾಲುಹಾಕಿ ಮಿಕ್ಸ್ ಮಾಡಿ. ಇದಕ್ಕೆ ಬೆಂದ ಬೇಳೆ, ಕಾಳು, ಬೆಣ್ಣೆ, ಕೊತ್ತಂಬರಿಬ ಸೊಪು, ತುಪ್ಪ , ನಿಂಬೆರಸ ಹಾಕಿ ಚೆನ್ನಾಗಿ ಕುದಿಸಿದರೆ ಮಿಕ್ಸ್ಡ್ ದಾಲ್ ಫ್ರೈ ರೆಡಿ.