ಮಿಂಚಿನ ಅಬಕಾರಿ ದಾಳಿ: ಒಂದು ಲಕ್ಷ ರೂ.ಗಳ ಮೌಲ್ಯದ ಮದ್ಯ ವಶ

ಕಲಬುರಗಿ,ಮೇ.1:ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಮದ್ಯ ಮಾರಾಟ ಕುರಿತಂತೆ ವಿವಿಧೆಡೆ ಅಬಕಾರಿ ದಾಳಿ ಕೈಗೊಂಡು ಸುಮಾರು ಒಂದು ಲಕ್ಷ ರೂ.ಗಳ ಮೌಲ್ಯದ ಮದ್ಯವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಅಧೀಕ್ಷಕರು ತಿಳಿಸಿದ್ದಾರೆ.
ಬೆಳಗಾವಿ ಅಬಕಾರಿ ಅಪರ ಆಯುಕ್ತ ಎಸ್.ಕೆ. ಕುಮಾರ್, ವಿಭಾಗದ ಜಂಟಿ ಆಯುಕ್ತೆ ರ್ಶರೀಮತಿ ಶಶಿಕಲಾ ಎಸ್. ಒಡೆಯರ್ ಅವರ ಆದೇಶದನ್ವಯ ಅಬಕಾರಿ ಉಪ ಅಧೀಕ್ಷಕ ಮೊಹ್ಮದ್ ಇಸ್ಮಾಯಿಲ್ ಅವರ ನೇತೃತ್ವದಲ್ಲಿ ಕೋವಿಡ್-19 ವೈರಾಣು 2 ನೇ ಅಲೆ ಹರಡುವಿಕೆಯನ್ನು ತಡೆಗಟ್ಟಿ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸನ್ನದು ಮದ್ಯ ವಹಿವಾಟು ಸಮಯ ನಿಗದಿಪಡಿಸಿ ಆದೇಶಿಸಿದ ಪ್ರಯುಕ್ತ ಈಗಾಗಲೇ ಜಿಲ್ಲೆಯ ಎಲ್ಲಾ ಮದ್ಯದ ಸನ್ನದುದಾರರಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡಬಾರದೆಂದು ಎಲ್ಲಾ ಸನ್ನದುದಾರರ ಸಭೆ ಕರೆದು ಸೂಚಿಸಲಾಗಿತ್ತು.
ಕಳೆದ 30ರಂದು ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಅಂಬರಖೇಡ್ ಗ್ರಾಮದ ಆಂಜನೇಯ ದೇವಸ್ಥಾನದ ಪಾಳು ಬಿದ್ದಿರುವ ಮನೆಯ ಮೇಲೆ ದಾಳಿ ಮಾಡಿ ಮಾರಾಟಕ್ಕೆಂದು ಸಂಗ್ರಹಿಸಿಟ್ಟಿದ್ದ ಒಟ್ಟು 8 ಪೆಟ್ಟಿಗೆಗಳು ಒಟ್ಟು 69.120 ಲೀಟರ್ ಸ್ವದೇಶಿ ಮದ್ಯ ಮುದ್ದೇ ಮಾಲನ್ನು ಜಪ್ತಿ ಮಾಡಿಕೊಂಡು ಜೇವರ್ಗಿ ವಲಯ ಅಬಕಾರಿ ನಿರೀಕ್ಷಕಿ ಶ್ರೀಮತಿ ವನಿತಾ ಸೀತಾಳೆ ಅವರು ಘೋರ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಳೆದ 30ರಂದು ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಉಮರಗಾ ಗ್ರಾಮದ ಲಕ್ಷ್ಮಿಕಾಂತ್ ತಂದೆ ಸಂಗಣ್ಣ ಎಂಬುವವರ ಕಿರಾಣಿ ಅಂಗಡಿಯ ಮೇಲೆ ಅಬಕಾರಿ ದಾಳಿ ಮಾಡಿದಾಗ, 2 ಪೆಟ್ಟಿಗೆ (17.280 ಲೀಟರ್) ಓರಿಜನಲ್ ಚೊಯಿಸ ವಿಸ್ಕಿ ಮದ್ಯ ಹಾಗೂ 15.720 ಲೀಟರ್ ಬೀರ್ ಜಪ್ತಿಪಡಿಸಿಕೊಂಡು ಪರಾರಿಯಾಗಿದ್ದ ಆರೋಪಿ ಉಪ ಅಧೀಕ್ಷಕ ಅಶೋಕ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಸದರಿ ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ್ಷರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಶ್ರೀಮತಿ ವನಿತಾ ಸೀತಾಳೆ, ಶ್ರೀಶೈಲ್ ಅವಜಿ, ಆಶೋಕ್, ಸಿಬ್ಬಂಧಿಗಳಾದ ಅಬಕಾರಿ ಪೇದೆ ಸಿಬ್ಬಂದಿಯವರು ಪಾಲ್ಗೊಂಡಿದ್ದರು.