ಮಾ25 ರಂದು ಚುಟುಕು ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಿಗೆ ಸನ್ಮಾನ

ಕುಂದಗೋಳ,ಮಾ19: ಇದೆ ಮಾರ್ಚ 25 ಶನಿವಾರದಂದು ತಾಲ್ಲೂಕು 5ನೇ ಚುಟುಕು ಸಾಹಿತ್ಯ ಸಮ್ಮೇಳನವು ಪಟ್ಟಣದ ಕಲ್ಯಾಣಪುರ ಬಸವಣ್ಣಜ್ಜನವರ ಶ್ರೀಮಠದ ಸಭಾಭವನದಲ್ಲಿ ಜರುಗುತ್ತಿದ್ದು, ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ಜಿ.ಡಿ.ಘೋರ್ಪಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಸಾಪ ಹಾಗೂ ತಾಲ್ಲೂಕು ಪತ್ರಕರ್ತರಿಂದ ಸನ್ಮಾನ ಸ್ವೀಕರಿಸಿದ ಘೋರ್ಪಡೆ ಅವರು ಮಾತನಾಡಿ ನನ್ನನ್ನು ಆಯ್ಕೆ ಮಾಡಿದಕ್ಕೆ ಅಭಾರಿಯಾಗಿದ್ದೇನೆ, ಇನ್ನೂ ಹೆಚ್ಚಿನ ಸಾಹಿತ್ಯಿಕ, ಸಾಮಾಜಿಕ ಕಾರ್ಯಗಳನ್ನು ಮಾಡಲು ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದರು.
ಸಾಹಿತಿ ಯಲ್ಲಪ್ಪ ಕರೆಕನ್ನಮ್ಮನವರ ಮಾತನಾಡಿ ತಾಲ್ಲೂಕಿನ ಮಣ್ಣಿನಲ್ಲಿ ಸಾಹಿತ್ಯ, ಸಂಗೀತ, ಕಲೆ ನೆಲೆಗೊಂಡಿದ್ದು ಘೋರ್ಪಡೆಯವರು ಈ ಎಲ್ಲ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ನೂತನ ತಾಲ್ಲೂಕು ಘಟಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ರಾಘವೇಂದ್ರ ನರ್ತಿ, ಉಪಾಧ್ಯಕ್ಷ ಬಿ.ಬಿ.ಹರ್ತಿ, ಮಹಿಳಾ ಉಪಾಧ್ಯಕ್ಷ ಶಾಂತಾ ಹೂಗಾರ, ಪ್ರಧಾನ ಕಾಯದರ್ಶಿ ಬಸವರಾಜ ಗುಡ್ಡದಕೇರಿ, ಖಜಾಂಚಿಯಾಗಿ ಮೃತ್ಯುಂಜಯ ಹಡಪದ, ಕಾರ್ಯದರ್ಶಿಯಾಗಿ ಜಗದೇವಯ್ಯ ಮಠದ, ಸಹ ಕಾರ್ಯದರ್ಶಿ ಗಣೇಶ ಏಸುಗಡೆ, ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ ಬಡಿಗೇರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಚುಸಾಪ ಅಧ್ಯಕ್ಷ ವಾಯ್. ಡಿ.ಹೂಸೂರ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ರವಿ.ಕಮಡೊಳ್ಳಿ, ಗಿರೀಶ ಘಾಟಗೆ, ಗಂಗಾಧರ ಡಾಂಗೆ, ಬಸವರಾಜ ದೀಪಾವಳಿ, ಸುನೀಲ ಕರೋಗಲ್, ಸಾಹಿತಿ ಎಚ್.ಎನ್.ಕರೇಕನ್ನಮ್ಮನವರ ಮುಂತಾದವರು ಉಪಸ್ಥಿತರಿದ್ದರು.