ಮಾ:25:ಮಾಣಶಿವಣಗಿ ಗ್ರಾಮದಲ್ಲಿ ಅದ್ದೂರಿ ರೇಣುಕಾ ಯಲ್ಲಮ್ಮನ ಜಾತ್ರೆ

ಯಡ್ರಾಮಿ:ಮಾ.17:ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಾಣಶಿವಣಗಿ ಗ್ರಾಮದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಜಾತ್ರಾಮಹೋತ್ಸವ ಅದ್ದೂರಿಯಾಗಿ ಜರಗುವುದು ಎಂದು ಜಾತ್ರಾಮಹೋತ್ಸವ ಕಮೀಟಿಯ ಸದಸ್ಯರು ತಿಳಿಸಿದ್ದಾರೆ.

ಜಾತ್ರಾ ಮಹೋತ್ಸವದ ಅಂಗವಾಗಿ ಮಾ:24 ವರೆಗೂ ಪ್ರತಿದಿನ ಸಾಯಂಕಾಲ 7 ಘಂಟೆಗೆ ಪೂಜ್ಯ ಶಿವಲಿಂಗಯ್ಯ ಶಾಸ್ತ್ರಿಗಳು ಪುರಾಣ ಮಠ ಗರೂರ.ಬಿ.ಇವರ ಅಮೃತವಾಣಿಯಲ್ಲಿ.

ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾರಾಜರ ಐತಿಹಾಸಿಕ ಮಹಾಪುರಾಣದಲ್ಲಿ ಸಂಗೀತ ಸೇವೆ ಕಲ್ಲಯ್ಯ ಹಿರೇಮಠ ಹಾಗೂ ಪ್ರಾಣೇಶ ಯಡ್ರಾಮಿ ಅವರ ಸಮ್ಮುಖದಲ್ಲಿ ನಡೆಯುತ್ತಿದ್ದು.

ಧರ್ಮಸಭೆಯೂ ಮಾ:24 ರಂದು ರವಿವಾರದ ರಾತ್ರಿ 8 ಘಂಟೆಗೆ ಡಾ.ರುದ್ರಮುನಿ ಶಿವಾಚಾರ್ಯರ ಕಡಕೋಳ ಅವರ ಸಾನಿಧ್ಯದಲ್ಲಿ.ಮಾ:25 ಸೋಮವಾರ ಜಾತ್ರಾ ಮಹೋತ್ಸವ ದಿನದಂದು ರೇಣುಕಾ ಯಲ್ಲಮ್ಮ ದೇವಿಗೆ ಉಡಿ ತುಂಬುವ ಜೋತೆಗೆ ಗ್ರಾಮದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುವದು.

ಅದೇ ದಿನ ದೇವಿಂದ್ರಪ್ಪ ಪೂಜಾರಿ ಅವರಿಂದ ದೇವಿಯ ಪಲ್ಲಕ್ಕಿ ಮಹೋತ್ಸವ ಸುಮಂಗಲಿಯರ ಕುಂಭ ಕಳಸದೊಂದಿಗೆ ಹಲವಾರು ವಾಧ್ಯಗಳೊಂದಿಗೆ ಗ್ರಾಮದ ಬೀದಿಗಳ ಮೂಲಕ ಮೆರವಣಿಗೆ ನಡೆಯುವದು.

ನಾಡಿನ ದೇವಿಯ ಭಕ್ತಾದಿಗಳು ದೇವಿಯ ದರ್ಶನ ಪಡೆದು ಪುನೀತರಾಗಬೇಕು ಎಂದು ಜಾತ್ರಾ ಸೇವಾ ಸಮಿತಿಯ ಅಧ್ಯಕ್ಷರು ಸದಸ್ಯರು ಊರಿನ ಹಿರಿಯರು ಗಣ್ಯ ವ್ಯಕ್ತಿಗಳು ಹಾಗೂ ಬಿಜಾಪುರ ಹಾಗೂ ಕಲಬುರಗಿ ದೇವಿಯ ಭಕ್ತಾಧಿಗಳು ಬಂದು ದೇವಿಯ ದರ್ಶನ ಪಡೆದು ಪುನೀತರಾಗಬೇಕು ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅಧ್ಯಕ್ಷರಾದ ಡಾ.ಅಜಯಸಿಂಗ್ ಹಾಗೂ ಹಾಲಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಬೋಳ ಅವರು ಭಾಗವಹಿಸುವರು ಎಂದು ಕಮೀಟಿಯ ಸದಸ್ಯರಾದ ಮಲ್ಲಯ್ಯ ಕರಬಸಯ್ಯ ಹಿರೇಮಠ, ಶಂಕರಲಿಂಗಯ್ಯ ಸುಬೇದಾರ,ಸಿದ್ದಣ್ಣ ನಾಯ್ಕೊಡಿ, ಅಪ್ಪಾಸಾಬ್ ಕುಡಿ,ದೇವಣ್ಣ ನಾಯ್ಕೊಡಿ,ಕಾಂತಪ್ಪ ವಾಲಿಕಾರ,ಮಾಹಾಂತಪ್ಪ ನಾಯ್ಕೊಡಿ ತಿಳಿಸಿದ್ದಾರೆ.