ಮಾ,18, 19 ವಿಜಯನಗರ ಬಳ್ಳಾರಿ ಜಿಲ್ಲೆಯಲ್ಲಿ ಪ್ರಜಾಧ್ವನಿ ಯಾತ್ರೆ ಸಿದ್ದರಾಮಯ್ಯ ಭಾಗಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.8: ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಕೆಪಿಸಿಸಿಯಿಂದ ಹಮ್ಮಿಕೊಂಡಿರುವ ಪ್ರಜಾ ಧ್ವನಿ  ನಾಲ್ಕನೇ ಹಂತದ ಯಾತ್ರೆ ಮಾರ್ಚ್ 18 ಹಾಗು 19 ರಂದು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ನಡೆಯಲಿದ್ದು. ಇದರಲ್ಲಿ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ.
ಮಾ, 18 ರಂದು ಬೆಳಿಗ್ಗೆ 11 ಕ್ಕೆ ಹಡಗಲಿ, ಮಧ್ಯಾಹ್ನ 3 ಕ್ಕೆ ಹರಪನಹಳ್ಳಿ ನಂತರ ಸಂಜೆ 6 ಕ್ಕೆ ಕೂಡ್ಲಿಗಿಯಲ್ಲಿ ಸಭೆಗಳನ್ನು ಆಯೋಜಿಸಿದೆ. ಇದರಲ್ಲಿ ಪಾಲ್ಗೊಳ್ಳುವ ಸಿದ್ದರಾಮಯ್ಯ ಅವರು ಅಂದು ರಾತ್ರಿ ಹೊಸಪೇಟೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಮಾ,19 ರಂದು ಬೆಳಿಗ್ಗೆ 11.30 ಕ್ಕೆ ಕಂಪ್ಲಿಯಲ್ಲಿ, ಮಧ್ಯಾಹ್ನ 3 ಕ್ಕೆ ಸಂಡೂರು ನಂತರ ಸಂಜೆ 6.30 ಕ್ಕೆ ಬಳ್ಳಾರಿಯಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.