
ಲಕ್ಷ್ಮೇಶ್ವರ,ಮಾ13: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ಮಾ.16ರಂದು ಲಕ್ಷ್ಮೇಶ್ವರಕ್ಕೆ ಆಗಮಿಸಲಿದ್ದು ಕೇಂದ್ರ ಸಚಿವೆ ಸ್ಮøತಿ ಇರಾನಿ ಸೇರಿ ಅನೇಕ ಕೇಂದ್ರ ಮತ್ತು ರಾಜ್ಯದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಮಾ.16 ರಂದು ಮಧ್ಯಾಹ್ನ ಪಟ್ಟಣಕ್ಕೆ ಆಗಮಿಸುವ ಸಂಕಲ್ಪ ಯಾತ್ರೆಯ ರೋಡ್ ಶೋ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸಾಗಿ ಸೋಮೇಶ್ವರ ತೇರಿನ ಮನೆ ಬಯಲಿನಲ್ಲಿ ಸಮಾವೇಶಗೊಳ್ಳಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆ, ಸಾಧನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಶಿರಹಟ್ಟಿ ಮತಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿ ನಡೆಯುತ್ತಿರುವ ಬಿಜೆಪಿ ಸಂಕಲ್ಪ ಯಾತ್ರೆಗೆ ಕ್ಷೇತ್ರದ ಮತದಾರರು, ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಕಲ್ಪಯಾತ್ರೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಸಂಚಾಲಕ ಶಶಿಧರ ದಿಂಡೂರ ಮಾತನಾಡಿ, ಮಾ.16 ರಂದು ಬೆಳಿಗ್ಗೆ ಗದಗನಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆದು ಮಧ್ಯಾಹ್ನ ಲಕ್ಷ್ಮೇಶ್ವರಕ್ಕೆ ಆಗಮಿಸಲಿದೆ. ಕೇಂದ್ರ ಸಚಿವೆ ಸ್ಮøತಿ ಇರಾನಿ ಅವರೊಂದಿಗೆ ಗೋವಿಂದ ಕಾರಜೋಳ, ಸಚಿವ ಸಿ.ಸಿ ಪಾಟೀಲ, ಸಿದ್ದು ಸವದಿ, ರಮೇಶ ಜಾರಕಿಹೊಳಿ,ಕಳಕಪ್ಪ ಬಂಡಿ ಸೇರಿ ಜಿಲ್ಲಾ, ತಾಲೂಕು ಪದಾಧಿಕಾರಿಗಳು ಭಾಗವಹಿಸಲಿದ್ದು ಶಾಸಕ ರಾಮಣ್ಣ ಲಮಾಣಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮ 2023 ರ ಚುನಾವಣೆಯ ಗೆಲುವಿಗೆ ದಿಕ್ಸೂಚಿಯಾಗುವಂತೆ 25 ಸಾವಿರಕ್ಕೂ ಹೆಚ್ಚು ಜನರು ಸೇರಲಿದ್ದಾರೆ ಎಂದರು.
ಜಿಲ್ಲಾ ಎಸ್‍ಸಿ/ಎಸ್/ಒಬಿಸಿ ಸಂಚಾಲಕ ಸಂತೋಷ ಅಕ್ಕಿ ಮಾತನಾಡಿ, ವಿಜಯ ಸಂಕಲ್ಪ ಯಾತ್ರೆಯ ಬಳಿಕ ಮಾ.19 ರಂದು ಶಿರಹಟ್ಟಿಯಲ್ಲಿ ಜಿಲ್ಲಾ ಎಸ್‍ಸಿ/ಎಸ್/ಒಬಿಸಿ ಮೋರ್ಚಾ ಜಿಲ್ಲಾ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದು ಅಂದು ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿರುವ ಯೋಜನೆಗಳ ಬಗ್ಗೆ ತಿಳಿಸಿ ಈ ವರ್ಗದಲ್ಲಿನ ವಿಶೇಷ ಸಾಧಕರ ಸನ್ಮಾನ, ಮಿಸ್ಡ್‍ಕಾಲ್ ಮೂಲಕ ಪಕ್ಷ ಸೇರ್ಪಡೆ, ಮೋದಿ ಸೆಲ್ಪಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 50 ಸಾವಿರ ಜನಸಂಖ್ಯೆ ಸೇರುವ ನಿರೀಕ್ಷೆಯಿರುವ ಈ ಸಮಾವೇಶದ ಯಶಸ್ವಿಗಾಗಿ 3 ಮೋರ್ಚಾ ಮತ್ತು9 ಮಂಡಲಗಳ ಪದಾಧಿಕಾರಿಗಳು, ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದರು.
ಶಿರಹಟ್ಟಿ ಮಂಡಲ ಅಧ್ಯಕ್ಷ ಫಕ್ಕಿರೇಶ ರಟ್ಟಿಹಳ್ಳಿ ಮಾತನಾಡಿದರು. ಈ ವೇಳೆ ಪಿ.ಬಿ ಖರಾಟೆ, ಚಂಬಣ್ಣ ಬಾಳಿಕಾಯಿ, ಭೀಮಸಿಂಗ್ ರಾಠೋಡ, ನಿಂಗಪ್ಪ ಬನ್ನಿ, ಸುನೀಲ ಮಹಾಂತಶೆಟ್ಟರ, ನಾಗರಾಜ ಕುಲಕರ್ಣಿ, ಗುರುನಾಥ ದಾನಪ್ಪನವರ, ಡಾ. ಚಂದ್ರು ಲಮಾಣಿ, ಡಾ.ಪ್ರಕಾಶ ಹೊಸಮನಿ, ಸುಭಾಸ್ ಗುಡಿಮನಿ, ಜಾನು ಲಮಾಣಿ, ಎಂ.ಆರ್ ಪಾಟೀಲ, ರಮೇಶ ಹಾಳದೋಟದ,ಮಾಂತೇಶ ಹಳ್ಳೆಪ್ಪನವರ, ಅನಿಲ ಮುಳಗುಂದ, ನೀಲಪ್ಪ ಹತ್ತಿ, ನಿಂಬಣ್ಣ ಮಡಿವಾಳರ, ಉಮೇಶ ಬೆಳವಗಿ, ದುಂಡೇಶ ಕೊಟಗಿ, ಪ್ರವೀಣ ಬೋಮಲೆ, ಸಂತೊಷ ಜಾವೂರ, ಉಳವೇಶ ಪಾಟೀಲ, ಪ್ರಕಾಶ ಮಾದನೂರ ಸೇರಿ ಹಲವರಿದ್ದರು, ಗಂಗಾಧರ ಮೆಣಸಿನಕಾಯಿ ನಿರ್ವಹಿಸಿದರು.