ಮಾ. 9&10 ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಭಿತ್ತಿ ಪತ್ರ ಬಿಡುಗಡೆ

ಸಂಜೆವಾಣಿ ವಾರ್ತೆ
ಔರಾದ್ :ಮಾ.7: ಮಾ. 9&10 ರಂದು ಬೀದರ್ ಡಾ. ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯಲಿರುವ 21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಾರ್ಥ ಇಂದು ಪಟ್ಟಣದ ಕನ್ನಡಾಂಬೆ ವೃತ್ರದಲ್ಲಿ ಬಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಶಾಲಿವಾನ ಉದಗಿರೆ, ನಿಕಟ ಪೂರ್ವ ಅಧ್ಯಕ್ಷ ಜಗನ್ನಾಥ ಮೂಲಗೆ, ಅಮೃತರಾವ ಬಿರಾದಾರ, ಡಾ. ಧನರಾಜ ರಾಗಾ, ಧನರಾಜ ನಿಟ್ಟೂರೆ, ಜಗನ್ನಾಥ ದೇಶಮುಖ, ಮಲ್ಲಿಕಾರ್ಜುನ ಟಂಕಸಾಲೆ, ಸಂತೋಷ ಚಾಂಡೇಶ್ವರೆ, ಅಂಬಾದಾಸ ಸೇರಿದಂತೆ ಇನ್ನಿತರರಿದ್ದರು.