ಮಾ.9 ರಿಂದ 20ರವರೆಗೆ ವಿದ್ಯುತ್ ಗ್ರಾಹಕರ ಸಂವಾದ ಸಭೆ

ಕಲಬುರಗಿ.ಮಾ.07:ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ನಿರ್ದೆಶನದಂತೆ ಕಾರ್ಯ ಮತ್ತು ಪಾಲನಾ ಉಪ-ವಿಭಾಗಗಳಲ್ಲಿ ಇದೇ ಮಾರ್ಚ್ 9 ರಿಂದ 20 ರವರೆಗೆ “ಗ್ರಾಹಕರ ಸಂವಾದ ಸಭೆ”/ಎಸ್‍ಒಪಿ ಯನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

ವಿದ್ಯುತ್ ಗ್ರಾಹಕರ ಸಂವಾದ ಸಭೆ ನಡೆಯುವ ದಿನಾಂಕ ಹಾಗೂ ಸ್ಥಳದ ವಿವರ ಇಂತಿದೆ. ಕಲಬುರಗಿ ನಗರ ವಿಭಾಗ: ಮಾರ್ಚ್ 9 ರಂದು ಸಿ.ಎಸ್.ಡಿ.-1ರ ಜೆಸ್ಕಾಂ ಉಪವಿಭಾಗ ಕಚೇರಿ, ಮಾರ್ಚ್ 10 ರಂದು ಸಿ.ಎಸ್.ಡಿ.-3ರ ಉಪವಿಭಾಗ ಕಚೇರಿ, ಮಾರ್ಚ್ 13 ರಂದು ಸಿ.ಎಸ್.ಡಿ.-2ರ ಉಪವಿಭಾಗ ಕಚೇರಿ ಹಾಗೂ ಮಾರ್ಚ್ 14 ರಂದು ಸಿ.ಎಸ್.ಡಿ. 4ರ ಉಪವಿಭಾಗ ಕಚೇರಿಗಳಲ್ಲಿ ಜರುಗಲಿದೆ.

ಕಲಬುರಗಿ ವಿಭಾಗ-1: ಮಾರ್ಚ್ 15 ರಂದು ಕಲಬುರಗಿ ಗ್ರಾಮೀಣ ಉಪವಿಭಾಗದ ಕಚೇರಿ, ಮಾರ್ಚ್ 16 ರಂದು ಆಳಂದ ಉಪವಿಭಾಗ ಕಚೇರಿ, ಮಾರ್ಚ್ 17 ರಂದು ಕಡಗಂಚಿ ಉಪವಿಭಾಗ ಕಚೇರಿ, ಮಾರ್ಚ್ 20 ರಂದು ಅಫಜಲಪುರ ಉಪವಿಭಾಗ ಕಚೇರಿ ಹಾಗೂ ಮಾರ್ಚ್ 9 ರಂದು ಚೌಡಾಪುರ ಉಪವಿಭಾಗದ ಜೆಸ್ಕಾಂ ಕಚೇರಿಗಳಲ್ಲಿ ಜರುಗಲಿದೆ.

ಕಲಬುರಗಿ ವಿಭಾಗ-2: ಮಾರ್ಚ್ 10 ರಂದು ಜೇವರ್ಗಿ ಜೆಸ್ಕಾಂ ಉಪವಿಭಾಗ ಕಚೇರಿ, ಮಾರ್ಚ್ 13 ರಂದು ಯಡ್ರಾಮಿ ಜೆಸ್ಕಾಂ ಉಪವಿಭಾಗ ಕಚೇರಿ, ಮಾರ್ಚ್ 14 ರಂದು ಶಹಾಬಾದ ಉಪವಿಭಾಗ ಕಚೇರಿ, ಮಾರ್ಚ್ 15 ರಂದು ಚಿತ್ತಾಪುರ ಉಪವಿಭಾಗ ಕಚೇರಿ ಹಾಗೂ ಮಾರ್ಚ್ 16 ರಂದು ಕಾಳಗಿ ಜೆಸ್ಕಾಂ ಉಪವಿಭಾಗದ ಕಚೇರಿಯಲ್ಲಿ ಜರುಗಲಿದೆ.

ಸೇಡಂ ವಿಭಾಗ: ಇದೇ ಮಾರ್ಚ್ 17 ರಂದು ಸೇಡಂ ಜೆಸ್ಕಾಂ ಉಪವಿಭಾಗ ಕಚೇರಿ ಹಾಗೂ ಮಾರ್ಚ್ 20 ರಂದು ಚಿಂಚೋಳಿ ಜೆಸ್ಕಾಂ ಉಪವಿಭಾಗದ ಕಚೇರಿಗಳಲ್ಲಿ ಜರುಗಲಿದೆ.

ಮೇಲ್ಕಂಡ ಯಾವುದಾದರೂ ದಿನಾಂಕದಂದು ರಜೆ ಘೋಷಿತವಾಗಿದ್ದಲ್ಲಿ ಮುಂದಿನ ಕೆಲಸದ ದಿನದಲ್ಲಿ ಸಭೆ ನಡೆಸಲಾಗುವುದು. ಆಸಕ್ತರು ಈ ಸಭೆಗೆ ಹಾಜರಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.