ಮಾ.9 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ

ಹುಬ್ಬಳ್ಳಿ,ಮಾ6: ಸ್ವ ಕುಳಸಾಳಿ (ದೈವಕಿ) ಸಮಾಜ, ಶ್ರೀ ವಿಠ್ಠಲ ಹರಿ ಮಂದಿರ ಸೇವಾ ಸಮಿತಿ ವತಿಯಿಂದ ಶ್ರೀ ವಿಠ್ಠಲ ರುಕ್ಮಿಣಿ ಸತ್ಯಭಾಮಾ ಮೂರ್ತಿಯ ಪ್ರತಿಷ್ಠಾಪನೆಯ 50 ನೇ ವರ್ಷದ ಸುವರ್ಣ ಮಹೋತ್ಸವ, ಹಾಗೂ ಸ್ಥಿರ ಪ್ರಾಣಾ ಪ್ರತಿಷ್ಠಾಪನೆ ಹಿನ್ನೆಲೆ ಮಾ.9 ರಿಂದ ಮಾ. 19 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ರಮೇಶ ದಿವಟೆ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ತಿಯ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಬೆಳ್ಳಿಯ ಉತ್ಸವ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಗಣೇಶ ಖಂಡಾಟೆ ಅವರ ನೇತೃತ್ವದಲ್ಲಿ ಮಾ.9 ರಿಂದ ಮಾ.19 ರವರೆಗೆ ಪ್ರತಿನಿತ್ಯ ಬೆಳಿಗ್ಗೆ 7 ರಿಂದ 9 ವರೆಗೆ ಅಖಂಡ ಹರಿನಾಮ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದರು.
ಮಾ.9 ರಂದು ಬೆಳಿಗ್ಗೆ 11 ಕ್ಕೆ ಶ್ರೀ ಸಂತ ತುಕಾರಾಮ ಬೀಜ ನಿಮಿತ್ಯ ಭಜನೆ ಮತ್ತು ಗುಲಾಲ್, ಮಾ.12 ರಂದು ನೂತನ ಮೂರ್ತಿಗಳ ಮೆರವಣಿಗೆ ಮಾಡಲಾಗುವುದು. ಕುಂಭ ಮೇಳ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಾ.13 ರಂದು ಕಾಕಡಾರತಿ, ಮೂರ್ತಿ ಕಳಸಾರೋಹಣ ಜರುಗಲಿದ್ದು, ಅಂದು ಪಂಢರಾಪುರದ ಗೋಪಾಲ ಮಹಾರಾಜ, ದೇವರ ಹುಬ್ಬಳ್ಳಿಯ ಸಿದ್ದಶಿವಯೋಗಿ ಮಹಾಸ್ವಾಮಿಗಳು ಉಪಸ್ಥಿತರಿರುವರು ಎಂದು ತಿಳಿಸಿದರು.
ಮಾ.14, 15, 16, 17 ರಂದು ಭಜನೆ, ಪ್ರವಚನ, ನಾಮ ಜಪ, ಕೀರ್ತನೆ ನಡೆಯಲಿವೆ. ಮಾ. 18 ರಂದು ದಿಂಡಿ ಉತ್ಸವ ಫಲ್ಲಕ್ಕಿ ಮೆರವಣಿಗೆ ಜರುಗಲಿದೆ. ಮಾ.19 ರಂದು ಶಾಂತಿಬ್ರಹ್ಮ ಏಕನಾಥ್ ಮಹಾರಾಜರ 14 ನೇ ವಂಶಸ್ಥ ಯೋಗಿರಾಜ ಮಹಾರಾಜ ಗೋಸಾವಿ ಇವರಿಂದ ಕೀರ್ತನೆ ನಡೆಯಲಿದೆ. ಬಳಿಕ ಭಜನೆಯೊಂದಿಗೆ ಉತ್ಸವ ಸಮಾಪ್ತಿಯಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಸಂತ ದಗೆ, ದೀಪಾ ದಿವಟೆ, ಗಣೇಶ ಖನಾಟೆ, ಅರುಣ ಏಕಬೋಟೆ, ವಿರೂಪಾಕ್ಷಪ್ಪ ಏಕಬೋಟೆ, ಹನುಮಂತಪ್ಪ ದಿವಟೆ, ರವಿ ಕಾಂಬ್ಳೇ, ಮಂಜುನಾಥ ಏಕಬೋಟೆ ಇದ್ದರು.