ಮಾ.7ರಂದು ಕೋಲಾರದಲ್ಲಿ ಯೋಗಿನಾರೇಯಣ ಯತೀಂದ್ರರ ಜಯಂತೋತ್ಸವ

ಕೋಲಾರ,ಮಾ,೬- ಶ್ರೀಯೋಗಿನಾರೇಯಣ ಯತೀಂದ್ರರ ೨೯೭ ನೇ ಜಯಂತೋತ್ಸವ ನಗರದಲ್ಲಿ ಮಾ.೭ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಕರ್ನಾಟಕ ಪ್ರದೇಶ ಬಲಿಜ ಸಂಘದ ನಿರ್ದೇಶಕ ವೆಂಕಟಸ್ವಾಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ಕಳೆದ ವರ್ಷದಿಂದ ಶ್ರೀ ಕೈವಾರ ತಾತಯ್ಯನವರ ಜಯಂತಿಗೆ ಸರ್ಕಾರದಿಂದ ಆಚರಣೆ ಮಾಡಲು ಆದೇಶ ನೀಡಿದೆ. ಕಳೆದ ಕೆಲವು ದಿನಗಳ ಹಿಂದೆ ಕುಲ ಬಾಂದವರೆಲ್ಲ ಸೇರಿ ಫಲ್ಗುಣ ಹುಣ್ಣಿಮೆ ಮಾ.೭ರಂದು ಬಂದಿರುವುದರಿಂದ ಜಯಂತಿ ಆಚರಿಸಲು ತೀರ್ಮಾನ ಮಾಡಿದ್ದೇವೆ. ಸರ್ಕಾರದ ಸಹಕಾರ ಜೊತೆಗೆ ಬಲಿಜ ಸಂಘದಿಂದ ಎಲ್ಲಾ ಸಮುದಾಯಗಳು ಜೊತೆಗೂಡಿ ಅದ್ದೂರಿಯಾಗಿ ಮರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮ ರಂಗಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಮೆರವಣಿಗೆಯನ್ನು ಟೇಕಲ್ ಕ್ರಾಸ್ ಶ್ರೀ ಕೈವಾರನಾರೇಯೇಣ ವೃತ್ತದಲ್ಲಿ ಚಾಲನೆ ನೀಡಲಾಗುವುದು, ಡೊಮ್‌ಲೈಟ್ ವೃತ್ತ, ಕೆ.ಇ.ಬಿ.ಮುಂಭಾಗದಿಂದ ಎಂ.ಜಿ.ರಸ್ತೆ, ಅಮ್ಮವಾರಿ ಪೇಟೆ ವೃತ್ತ, ಮೆಕ್ಕೆ ವೃತ್ತ ಮೂಲಕ ರಂಗಮಂದಿರದ ಬಳಿ ಅಂತ್ಯಗೊಳಿಸಲಾಗುವುದು, ರಂಗಮಂದಿರದಲ್ಲಿ
ಮಧ್ಯಾಹ್ನ ೨ ಗಂಟೆಗೆ ವೇದಿಕೆ ಕಾರ್ಯಕ್ರಮದ ಉದ್ಘಾಟನೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮುನಿರತ್ನ ನೆರವೇರಿಸುವರು. ಶಾಸಕ ಕೆ.ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರುಗಳು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು ಜಿಲ್ಲೆಯ ೧೫ ರಿಂದ ೨೦ ಕಲಾತಂಡಗಳು ತಾತಯ್ಯನವರ ತತ್ವಪದಗಳನ್ನು ಹಾಗೂ ಸಂಗೀತೋತ್ಸವ ಹಾಡುವ ಮೂಲಕ ಗುರುವಂದನೆ ಸಲ್ಲಿಸಲಿದ್ದಾರೆ.
ಶ್ರೀ ಯೋಗಿನಾರೇಯಣ ನೌಕರರ ಟ್ರಸ್ಟ್ ಅಧ್ಯಕ್ಷ ಆರ್.ಪ್ರಸಾದ್ ಮಾತನಾಡಿ, ಟೇಕಲ್ ವೃತ್ತದಲ್ಲಿರುವ ತಾತಯ್ಯರ ಪುತ್ಥಳಿಗೆ ೧೦.೩೦ಕ್ಕೆ ಮಾಲಾರ್ಪಣೆ ಮಾಡಿ, ತಾತಯ್ಯರ ಕನಿಷ್ಠ ೪೦ ರಿಂದ ೫೦ ಪಲ್ಲಕ್ಕಿಗಳು ಭಾಗವಹಿಸುವ ನಿರೀಕ್ಷೆಯಿದೆಯೆಂದು ತಿಳಿಸಿದರು.
ಮೆರವಣಿಗೆಯನ್ನು ಇದೇ ಸಂದರ್ಭ ದಲ್ಲಿ ೨೦೨೧-೨೨ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಶೇ.೮೦ರಷ್ಷು ಹಾಗೂ ಅದಕ್ಕಿಂತ ಹೆಚ್ಚು ಅಂಕ ಪಡೆದ ಜನಾಂಗದ ೯೧ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜನಾಂಗದ ಹಿರಿಯರನ್ನು ಗೌರವಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಕೆ.ಎನ್. ರವೀಂದ್ರ ಕುಮಾರ್ ಮಾತನಾಡಿ ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸ ಬೇಕೆಂದು ಮನವಿ ಮಾಡಿದರು,
ಜಯಂತೋತ್ಸವ ಆಚರಣೆಯ ಅಧ್ಯಕ್ಷ ರಘು(ಚಿಟ್ಟಿ),ಮಂಜುನಾಥ್, ಮಹೇಶ್, ಸುರೇಶ್, ಸಾ.ಮಾ.ಅನಿಲ್ ಬಾಬು, ರಾಜೇಶ್, ಚಂದ್ರಶೇಖರ್ ಇದ್ದರು,

.