ಮಾ. 5 ರಂದು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅರ್ಥಪೂರ್ಣ ಆಚರಿಸಲು ನಿರ್ಧಾರ

ಕಲಬುರಗಿ.ಮಾ.02: ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸªದÀ ಪ್ರಪಥಮಭಾರಿಗೆ ಆಚರಿಸುತ್ತಿರುವುದರಿಂದ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ತಹಶೀಲ್ದಾರರು ಸೈಯದ್ ನಿಸಾರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮಂಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾರ್ಚ 5 ರಂದು ಬೆಳಿಗ್ಗೆ 11.30 ಗಂಟೆಗೆ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಮಾಜದ ಮುಖಂಡರು ಸರಿಯಾದ ಸಮಯಕ್ಕೆ ಹಾಜರಿದ್ದು, ಜಯಂತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು. ಕುಡಿಯುವ ನೀರು ರಂಗಮಂದಿರದ ಸುತ್ತಮುತ್ತ ಸ್ವಚ್ಪಗೊಳಿಸಬೇಕೆಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಅಂದು ಬೆಳಿಗ್ಗೆ ಶಾಲಾ ಕಾಲೇಜುಗಳು ಸರ್ಕಾರಿ ಅರೆ ಸರ್ಕಾರಿ ತಾಲೂಕು ಮಟ್ಟದಲ್ಲಿ ಸಹ ಭಾವಚಿತ್ರಕ್ಕೆ ಬೆಳಿಗ್ಗೆ 9 ಗಂಟೆಗೆ ಪೂಜೆ ಸಲ್ಲಿಸಬೇಕೆಂದರು.
ವೇದಿಕೆ ಅಲಂಕಾರ ಹಾಗೂ ಪೂಜೆಗೆ ಬೇಕಾದ ಸಾಮಾನುಗಳನ್ನು ತರುವುದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ರಂಗಾಯಣದ ಉಪ ನಿರ್ದೇಶಕಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕಿ ಜಗಧೀಶ್ವರಿ ಶಿವಕೇರಿ ಅವರು ಮಾತನಾಡಿ, ರೇಣುಕಾಚಾರ್ಯ ಅವರ ಜಯಂತೋತ್ಸವದಂದು ನಾಡಗೀತೆ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು, ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸುವುದು. ಒಬ್ಬ ವೇದಿಕೆ ಹೆಸರನ್ನು ಸೂಚಿಸಲು ಹಾಗೂ ಉಪನ್ಯಾಸಕರನ್ನು ಕರೆ ತರುವ ವ್ಯವಸ್ಥೆಯನ್ನು ಸಮಾಜದ ಮುಖಂಡರು ಮಾಡಬೇಕೆಂದರು.
ಸಮಾಜ ಮುಖಂಡರು ಮಾತನಾಡಿ, ಮೆರವಣೆಗೆ ಮಾಡಲು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಸಮಾಜದ ಅಖಿಲ ಭಾರತ ವೀರಶೈವ ಮಹಾಸಭಾ ಲಿಂಗಾಯತ ಜಿಲ್ಲಾ ಅಧ್ಯಕ್ಷ ಡಾ. ಶರಣುಕುಮಾರ ಮೋದಿ ಸಮಿತಿ ಅದ್ಯಕ್ಷರಾದ ಅಣವೀರಯ್ಯ ಪ್ಯಾಟಿಮನಿ ಅಧ್ಯಕ್ಷರು, ಶಶಿಕಾಂತ ಮಹಾಜನ್ ಜಯಂತಿ ಗುರುಬಾಯಿ.ವಿ.ವಸ್ತದ್ ಮಹಿಳಾ ಘಟಕ ಅಧ್ಯಕ್ಷರು, ಸೋಮಶೇಖರ್ ಹಿರೇಮಠ ಜಯಂತೋತ್ಸವದ ಸಂಚಾಲಕರು, ಸಮಾಜದ ಮುಖಂಡರುಗಳಾದ ಪಿಂಟೂ ಸ್ವಾಮಿ, ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.