
ಕೋಲಾರ,ಮಾ,೨-ಗಡಿನಾಡ ಜಾಗೃತಿ ವೇದಿಕೆವತಿಯಿಂದ ಮಾ ೫ರಂದು ಭಾನುವಾರ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಗಡಿ ಕನ್ನಡಿಗರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಕೆ.ಮಂಜುನಾಥ್ (ದೇವ) ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಜಿಲ್ಲಾ ಕೇಂದ್ರದಲ್ಲಿ ಇದೊಂದು ಐತಿಹಾಸಕ ಕಾರ್ಯಕ್ರಮವಾಗಲಿದೆ. ಅಂದು ಬೆಳಿಗ್ಗೆ ೧೦.೩೦ಕ್ಕೆ ಬೆಳ್ಳಿರಥದಲ್ಲಿ ಕೋಲಾರದ ಅದಿದೇವತೆ ಕೋಲಾರಮ್ಮ ವಿಗ್ರಹದೊಂದಿಗೆ ಮಂಗಳಕಾರ ವಾದ್ಯಗಳು ೫೦ ಮಂದಿ ಮಹಿಳೆಯರು ಪೂರ್ಣಕುಂಭದ ಮೆರವಣಿಗೆ, ತಮಟೆ ವಾದ್ಯಗಳು, ಅಲಂಕಾರಿತ ಎತ್ತಿನ ಬಂಡಿಗಳು, ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ೨೫ ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ನಗರದ ಎಸ್.ಎನ್.ಆರ್. ವೃತ್ತರಿಂದ ಕ್ಲಾಕ್ ಟವರ್ ಮೂಲಕ ಬಸ್ ನಿಲ್ದಾಣ ವೃತ್ತದ ಹಾದು ಮೆಕ್ಕೆ ಸರ್ಕಲ್ ನಂತರ ಟಿ.ಚೆನ್ನಯ್ಯ ರಂಗ ಮಂದಿರವನ್ನು ತಲುಪಲಿದೆ ಎಂದರು,
ಜಾನಪದ ಕಲಾ ತಂಡಗಳ ಮೆರವಣಿಗೆಗೆ ರಾಜ್ಯ ತೋಟಗಾರಿಕೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ.ಮುನಿರತ್ನ ಹಾಗೂ ಲೋಕಸಭಾಸದಸ್ಯ ಎಸ್.ಮುನಿಸ್ವಾಮಿ ಚಾಲನೆ ನೀಡಲಿದ್ದಾರೆ. ದಲಿತ ಪರಚಿಂತಕ ಹಾಗೂ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರಿಂದ ಡಾ,ಬಿ,ಆರ್,ಅಂಬೇಡ್ಕರ್ ಪುತ್ಥಳಿಕೆಗೆ ಮಾಲಾರ್ಪಣೆ ಮಾಡಲಿದ್ದಾರೆ. ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಕೆ.ಆರ್,ರಮೇಶ್ ಕುಮಾರ್, ಹಾಗೂ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಅಂತರಾಷ್ಟ್ರೀಯ ಕ್ರೀಡಾಪಟ ಮಂಜುನಾಥ್‌ಗೌಡ(ವಾಲೆ) ಜ್ಯೋತಿ ಬೆಳಗಿಸುವರು, ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾ ಶಶಿಧರ್, ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ನಸ್ಸೀರ್ ಆಹಮದ್, ಎಂ.ಎಲ್.ಅನಿಲ್ ಕುಮಾರ್, ಮುಂತಾದವರು ಭಾಗವಹಿಸಲಿದ್ದಾರೆ ಎಂದರು,
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ನ್ಯಾಯಮೂರ್ತಿ ಕುಮಾರಿ ಗಾಯಿತ್ರಿ, ಕನ್ನಡ ಪರ ಹೋರಾಟಗಾರರಾದಅ,ಕೃ,ಸೋಮಶೇಖರ್, ನಾಗನಂದಕೆಂಪರಾಜ್,ರಾಮಪ್ರಸಾದ್,ಭಾ.ಹ ಶೇಖರಪ್ಪ, ದಲಿತ ಪರ ಹೋರಾಟಗಾರ,ಟಿ.ವಿಜಯಕುಮಾರ್, ಜಾನಪದ ಕಲಾವಿಧ ಪಿಚ್ಚಹಳ್ಳಿ ಶ್ರೀನಿವಾಸ್ ಮಾಜಿ ಯೋಧ ಜಗನ್ನಾಥ್, ರೈತ ಹೋರಾಟಗಾರ ಅಬ್ಬಣಿಶಿವಪ್ಪ, ಅಮತರಾಷ್ಟ್ರೀಯ ಕ್ರೀಡಾ ಪಟು ಗೌಸ್ ಖಾನ್, ಸೇರಿದಂತೆ ವಿವಿಧ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದರು.