ಮಾ. 4 ರಂದು ರೇಣುಕಾ ಜಯಂತಿ ಪೂರ್ವಭಾವಿ ಸಭೆ


ಸಂಜೆವಾಣಿ ವಾರ್ತೆ
ಕುಕನೂರು, ಫೆ.28: ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ನಿಮಿತ್ತ ಮಾರ್ಚ 4 ರಂದು ಕುಕನೂರು ಪಟ್ಟಣದ ಹರಿಶಂಕರ ಬಂಡಿ ರಸ್ತೆಯ ಸಿದ್ದಲಿಂಗೇಶ್ವರ ನಗರದಲ್ಲಿರುವ ಸಮಾಜದ ಸಮುದಾಯ ಭವನದ ಜಾಗೆಯಲ್ಲಿ ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ಹರಗುರುಚರಮೂರ್ತಿಗಳ ಸಾನಿದ್ಯದಲ್ಲಿ ಬೆಳಗ್ಗೆ 10.30 ಗಂಟೆಗೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಂಡಿದ್ದು ಈ ಸಭೆಯಲ್ಲಿ ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ಸಮಾಜದ ಬಾಂದವರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿಬೇಕೆಂದು  ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆಗಳ ಒಕ್ಕೂಟಕದ ತಾಲೂಕಾಧ್ಯಕ್ಷ ಸಿದ್ದಯ್ಯ ಕಳ್ಳಿಮಠ ಕೋರಿದ್ದಾರೆ.