
ಸಂಜೆವಾಣಿ ವಾರ್ತೆ
ಹೊಸಪೇಟೆ, ಫೆ.25: ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಚತುಷ್ಕೊನ ಸ್ಪರ್ಧೆಯಲ್ಲಿ ನಡೆಯಲಿದೆ ಎಂದು ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ, ಕಾಂಗ್ರೆಸ್ ಹಾಗೂ ಸ್ಥಳೀಯವೂ ಅಲ್ಲ ರಾಷ್ಟ್ರೀಯವೂ ಅಲ್ಲದ ಜೆಡಿಎಸ್ ಪಕ್ಷವನ್ನು ಜನ ನೋಡಿಯಾಗಿದೆ ಚುನಾವಣಾ ಪೂರ್ವ ಹೇಳಿಕೆ ಅಧಿಕಾರಕ್ಕೆ ಬಂದನಂತರ ಮಾಡಿದ ಕಾರ್ಯಗಳನ್ನು ನೋಡಿದ್ದಾರೆ ಇಂತಹ ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಣ ಮಾಡುವ ಕಾರ್ಯ ಆಮ್ ಆದ್ಮಿ ಮಾಡಲಿದೆ.
ರಾಜ್ಯದಲ್ಲಿ ರಾಜಕೀಯವಾಗಿ ಶುದ್ಧೀಕರಣ ಮಾಡುವ ಕಾರ್ಯ ಆರಂಭವಾಗಿದೆ ತೆರೆಮರಿಯಲ್ಲಿ ಕೆಲಸ ನಡೆದಿದೆ.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಕಾಂಕ್ಷಿಗಳು, ಬದಲಾವಣೆ ಬಯಸುವ ಮನಸ್ಸು ಮಾರ್ಚ್4 ರಂದು ದಾವಣಗೆರೆಯಲ್ಲಿ ಸಮಾವೇಶಗೊಂಡು ಚುನಾವಣಾ ರಣಕಹಳೆ ಮೊಳಗಿಸಲಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜರಿವಾಲ್ ಚಾಲನೆ ನೀಡಲಿದ್ದಾರೆ ಎಂದರು.
ಅನೇಕ ಪ್ರಭಾವಿ ಹಾಗೂ ಪ್ರಾಮಾಣಿಕ ವ್ಯಕ್ತಿಗಳು ಪಕ್ಷದ ಸಂಪರ್ಕದಲ್ಲಿದ್ದು ಮಾರ್ಚ್ ನಲ್ಲಿ ತೆರೆಯ ಮುಂದೆ ಬರಲಿದ್ದಾರೆ. ಒಟ್ಟಾರೆ ರಾಜಕೀಯ ಶುದ್ಧೀಕರಣ ಆರಂಭವಾಗಲಿದೆ ಎಂದರು. ವಿಜಯನಗರ ಸೇರಿದಂತೆ ಎಲ್ಲೆಡೆ ಸರ್ಕಾರ ಮಾಡಬಹುದಾದ ಕೆಲಸವನ್ನು ಜನರಿಗೆ ಮನವರಿಕೆ ಮಾಡಲಿದೆ ಎಂದರು.
ಕಾರ್ಯಾಧ್ಯಕ್ಷ ಶಿವರಾಯಪ್ಪ ಜೋಗಿನ್,
ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ್, ವಿಜಯನಗರ ಜಿಲ್ಲಾಧ್ಯಕ್ಷ ಜೆ ಎನ್ ಕಾಳಿದಾಸ್, ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ ಬೆಣ್ಣೆಹಳ್ಳಿ, ಸಂಘಟನಾ ಕಾರ್ಯದರ್ಶಿ ಎಂ ಡಿ ಮದೀನ್ ಹಾಜರಿದ್ದರು.
ಈಗಾಗಲೇ ವಿಜಯನಗರ ಜಿಲ್ಲೆಯ ರಾಜ್ಯ ಹರಪನಹಳ್ಳಿ ಹೆಚ್ ನಾಗರಾಜ, ಕೂಡ್ಲಿಗಿ ನಾರಿ ಶ್ರೀನಿವಾಸ್, ಹಗರಿಬೊಮ್ಮನಹಳ್ಳಿ ಡಾ.ಹನುಮಂತಪ್ಪ, ಹೂವಿನ ಹಡಗಲಿ ಶ್ರೀಧರ್ ನಾಯ್ಕ್, ಹೊಸಪೇಟೆಯಲ್ಲಿ ಶಂಕರದಾಸ್ ಆಕಾಂಕ್ಷಿಗಳಾಗಿದ್ದಾರೆ.