ಮಾ. 4 ದಾವಣಗೆರೆಗೆ ಕ್ರೇಜಿವಾಲ್, ಭಗವಂತ್ ಮಾನ್: ಕಿರಣ್ ಕುಮಾರ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.27: ಆಮ್ ಆದ್ಮಿ ಪಕ್ಷದ ದೆಹಲಿ ಮುಖ್ಯ ಮಂತ್ರಿ  ಅರವಿಂದ ಕ್ರೇಜಿವಾಲ್, ಪಂಜಾಬ್ ಮುಖ್ಯ ಮಂತ್ರಿ ಭಗವಂತ್ ಮಾನ್ ಅವರು ಮಾ 4 ರಂದು ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ಪಕ್ಷದ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸಲಿದ್ದಾರೆಂದು ಪಕ್ಷದ ಜಿಲ್ಲಾ ಅಧ್ಯಕ್ಷ ಟಿ.ಕಿರಣ್ ಕುಮಾರ್ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಅವರು.
 ಸಮಾವೇಶದಲ್ಲಿ ಭಾಗವಹಿಸಿ ಮತದಾರರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಪ್ರಮಾಣ ಬೋಧಿಸಲಿದ್ದಾರೆ. ಈ ಸಮಾವೇಶದಲ್ಲಿ ಬಳ್ಳಾರಿ ಜಿಲ್ಲೆ, ವಿವಿಧ ತಾಲೂಕು, ಬ್ಲಾಕ್, ಹೋಬಳಿ, ಸರ್ಕಲ್ ಮತ್ತು ಬೂತ್ ಮಟ್ಟದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದೆ.
ರಾಜ್ಯ ಮತ್ತು ಕೇಂದ್ರದ ಬಿ.ಜೆ.ಪಿ ಸರ್ಕಾರ ಐದು ವರ್ಷಗಳ ಕಾಲ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿ ಚುನಾವಣಾ ಕಾಲದಲ್ಲಿ ಮತದಾರರಿಗೆ ಹಣ ಮತ್ತು ಇತರೆ ವಸ್ತುಗಳನ್ನು ನೀಡುವ ಮೂಲಕ ಆಮಿಷವೊಡ್ಡುತ್ತಿದ್ದಾರೆ, ಇದರಿಂದ ಮತ್ತೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ. ಅದು ಸಾಧ್ಯವಿಲ್ಲದ ಮಾತು. ರಾಜ್ಯದ ಮತದಾರರು ದೆಹಲಿ ಮತ್ತು ಪಂಜಾಬ್‌ನಲ್ಲಿ ಆಪ್ ಸರ್ಕಾರ ತಂದಿರುವ ಜನಪರ ಯೋಜನೆಗಳು, ಸುಧಾರಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಶೇಖಡ 40 ಸರ್ಕಾರ ಗಳಿಂದ ಸಾರ್ವಜನಿಕರಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು.  ಇದಕ್ಕನುಗುಣವಾಗಿ ಪರ್ಯಾಯ ಪಕ್ಷ ಮತ್ತು ಸರ್ಕಾರವನ್ನು ನೋಡಲು ಬಯಸುತ್ತಿದ್ದಾರೆ. ಆ ಪರ್ಯಾಯ ಪಕ್ಷ ಆಮ್ ಆದ್ಮ ಪಕ್ಷವಾಗಿದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ದೆಹಲಿ ಮಾದರಿ ಭಷ್ಟಾಚಾರ ರಹಿತ ಅಭಿವೃದ್ಧಿಯ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು. ದೆಹಲಿಯಲ್ಲಿ ಪ್ರತಿ ಮನೆಗೆ 200 ಯೂನಿಟ್‌ ಕರೆಂಟ್‌, ಇಪ್ಪತ್ತು ಸಾವಿರ ಲೀಟರ್ ಶುದ್ಧ ಕುಡಿಯುವ ನೀರು, ಉಚಿತ ಶಿಕ್ಷಣ, ಆರೋಗ್ಯ ಸೇವೆ, ಮಹಿಳೆಯರಿಗೆ ಉಚಿತ ಬಸ್ ಪ್ರಾಣ ಸೇರಿದಂತೆ ಹಲವಾರು ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದೆಂದರು.
ಆಮ್ ಆದಿ ಪಕ್ಷದ ದೇಹಲಿಯಲ್ಲಿ ಜಾರಿಗೊಳಿಸಿದ ಮೇಲಿನ ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಮತ್ತು ಬಿ.ಜೆ.ಪಿ ಸರ್ಕಾರಗಳು ನಕಲು ಮಾಡುತ್ತಿವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅಸಲಿ ಮತ್ತು ನಕಲಿಗಳ ನಡುವೆ ಹೋರಾಟ ನಡೆಯಲಿದೆ, ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಭ್ರಷ್ಟಾಚಾರ, ಅಕ್ರಮ ಚಟುವಟಿಕೆಗಳು, ಅಧಿಕಾರದ ದುರ್ಬಳಕೆ, ಕೋಮುದ್ವೇಷ, ಕೀಳುಮಟ್ಟದ ಟೀಕೆಗಳು, ಸುಳ್ಳು ಆಶ್ವಾಸನೆಗಳು, ಸ್ವಜನ ಪಕ್ಷಪಾತ, ಹಣ ಹಾಗೂ ತೋಳ್ಳಲದ ರಾಜಕೀಯವನ್ನು ಕೊನೆಯಸಗಲಿದೆ. ಸಿ.ಎಂ. ಬೊಮ್ಮಾಯಿಯವರಿಗೆ ಚುನಾವಣೆ ಸಮಯದಲ್ಲಿ ದಿಢೀರೆಂದು ಶಾಲಾ ಕೊಠಡಿಗಳು, ಮಠ ಮಂದಿರಗಳು ನೆನಪಾಗಿವೆ. ಅವರಿಗೆ ಆಪ್ ಪಕ್ಷದ ಬಗ್ಗೆ ಆತಂಕವೇ ಇದಕ್ಕೆ ಕಾರಣ, ಮತ್ತು ಕಾಂಗ್ರೆಸ್ ಪಕ್ಷದ ಡಿ.ಕೆ.ಶಿವಕುಮಾರ್, ಜೆ.ಡಿ.ಎಸ್‌.ನ ಕುಮಾರಸ್ವಾಮಿ ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಮತದಾರರು ಇಂತ ಸುಳ್ಳು ಭರವಸೆಗಳನ್ನು ನಂಬದೆ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿ ಬಹುಮತ ನೀಡಬೇಕೆಂದರು.
ಪಕ್ಷದ ಮುಖಂಡ ವಿ.ಬಿ.ಮಲ್ಲಪ ದೆಹಲಿಯ ಉಪ ಮುಖ್ಯ ಮಂತ್ರಿ ಮನೀಶ್  ಸಿಸೋಡಿಯ ಅವರನ್ನು ಸಿಬಿಐ ಬಂಧನದ ಬಗ್ಗೆ ಪ್ರತಿಕ್ರಿಯೆ‌ ನೀಡಿ. ಸಿಸೋಡಿಯಾ ಅವರು ಶಿಕ್ಷಣದ ಬಗ್ಗೆ ತೋರಿರುವ ಪ್ರಗತಿಯನ್ನು ಸಹಿಸಲಾಗದೆ ಬಿಜೆಪಿ ಸಿಬಿಐ ಮೂಲಕ ಪಕ್ಷದ ಏಳಿಗೆಗೆ ಪೆಟ್ಟು ತರಲು ಪ್ರಯತ್ನ ನಡೆಸಿದೆ. ಇದರಿಂದಾಗಿ ದೆಹಲಿಯ 25 ಲಕ್ಷ ಮಕ್ಕಳ ಶಿಕ್ಷಣದ ಮೇಲೆ ಆಘಾತ ಉಂಟಾಗಲಿದೆ. ಯಾವುದೇ ಸಾಕ್ಷಾಧಾರ ಇಲ್ಲದೆ ಸುಳ್ಳು ಆರೋಪದಡಿ ಬಂಧಿಸಿದೆ ನಮ್ಮ ಪಕ್ಷ ಭ್ರಷ್ಟಾಚಾರವನ್ನು ಎಂದಿಗೂ ಸಹಿಸಲ್ಲ  ಎಂದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಕ್ರಾಂತಿಕುಮಾರ್, ಪ್ರಹ್ಲಾದ್ ರೆಡ್ಡಿ, ಮಹಮ್ಮದ್ ಆಸೀಮ್, ನಾಗಪ್ಪ ಯಾದವ್, ಖಲಂದರ್ ಮೊದಲಾದವರು ಇದ್ದರು.