ಮಾ. 30, 31ರಂದು 13ನೇ ‘ವಿಜಯಪುರ ಸಾಂಸ್ಕøತಿಕ ಜನೋತ್ಸವ’

ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.27:ಮಾ. 30 ಮತ್ತು 31 ರಂದು 13ನೇ ‘ವಿಜಾಪುರ ಸಾಂಸ್ಕøತಿಕ ಜನೋತ್ಸವ’ ಕಾರ್ಯಕ್ರಮವನ್ನು ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ.
ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಎಐಎಂಎಸ್‍ಎಸ್ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡಗೂಳಿ ಅವರು ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
‘ಆವಿಷ್ಕಾರ’ ಪ್ರಗತಿಪರ ಸಾಂಸ್ಕøತಿಕ ವೇದಿಕೆ, ಎಐಡಿಎಸ್‍ಓ, ಎಐಎಮ್‍ಎಸ್‍ಎಸ್ ಹಾಗೂ ಎಐಡಿವೈಓ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಮಾ.30ರಂದು ಸಂಜೆ 5-30ಕ್ಕೆ ಲೇಖಕರು ಹಾಗೂ ಸಾಮಾಜಿಕ ಹೋರಾಟಗಾರ್ತಿ ರೂಪ ಹಾಸನ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಇಂದು ಮಾನವ ಸಂಬಂಧಗಳು ಆಯಷ್ಯ ಮುಗಿದ ನೂಲಿನೆಳೆಯಂತಾಗಿವೆ. ಇಂಥಹ ಕಲುಷಿತ ವಾತಾವರಣದ ಮಧ್ಯದಲ್ಲಿ ನಾನು ಮಾತ್ರ ನನ್ನ ಪಾಡಿಗೆ, ನೆಮ್ಮದಿ ಮತ್ತು ಸಂತೋಷದಿಂದ ಬದುಕಬಲ್ಲೆ ಎಂದು ಭಾವಿಸಿದರೆ ಅದು ಸಾಧ್ಯವಾಗದು. ಇವೆಲ್ಲ ಒಂದು ಮನೆಯ ಅಥವಾ ಒಬ್ಬ ವ್ಯಕ್ತಿಯ ವೈಯಕ್ತಿಕ ಸಮಸ್ಯೆಗಳಂತೆ ಕಂಡರೂ ಇದರ ಮೂಲ ಅಡಗಿರುವುದು ಮಾತ್ರ ಇಡೀ ಸಾಮಾಜಿಕ ವ್ಯವಸ್ಥೆಯಲ್ಲಿ. ಅಂತಹ ವ್ಯವಸ್ಥೆಯನ್ನು ಬದಲಾಯಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಎಲ್ಲಾ ಕಾಲದಲ್ಲಿ ಎಲ್ಲ ರೀತಿಯ ಕಲ್ಮಷಗಳನ್ನು ಹೊಡೆದು ಹಾಕಿ ಮನುಷ್ಯನ ಮತ್ತು ಮನುಕುಲದ ಬದುಕನ್ನು ಸ್ವಚ್ಛ, ಸುಂದರ ಹಾಗೂ ಶ್ರೇಷ್ಠತೆಯತ್ತ ಕೊಂಡೊಯ್ಯಲು ಸಾಧ್ಯವಿರುವುದು ಒಂದು ಉದಾತ್ತ ಮತ್ತು ಪ್ರಗತಿಪರ ಸಾಂಸ್ಕøತಿಕ ಚಳುವಳಿಗೆ ಮಾತ್ರ ಎಂದು ಇತಿಹಾಸ ನಮಗೆ ಕಲಿಸಿಕೊಟ್ಟ ಪಾಠ ಎಂದು ನುಡಿದರು.
ಆದ್ದರಿಂದ ಸಾಂಸ್ಕøತಿಕ ಚಳುವಳಿಯನ್ನು ಪೋಷಿಸುತ್ತಿರುವ ನಮ್ಮ ಸಂಘಟನೆಗಳಾದ ‘ಆವಿಷ್ಕಾರ’ (ಪ್ರಗತಿಪರ ಸಾಂಸ್ಕøತಿಕ ವೇದಿಕೆ), ಎಐಡಿವೈಓ (ಆಲ್ ಇಂಡಿಯಾ ಡೆಮಾಕ್ರೆಟಿಕ್À ಯೂತ್ ಆರ್ಗನ್ಯೆಸೇಷನ್), ಎಐಎಮ್‍ಎಸ್‍ಎಸ್ (ಆಲ್ ಇಂಡಿಯಾ ಮಹಿಳಾ ಸಾಂಸ್ಕøತಿಕ ಸಂಘಟನೆ) ಹಾಗೂ ಎಐಡಿಎಸ್‍ಓ (ಆಲ್ ಇಂಡಿಯಾ ಡೆಮಾಕ್ರೆಟಿಕ್À ಸ್ಟೂಡೆಂಟ್ಸ್ ಆರ್ಗನ್ಯೆಸೇಷನ್)ಗಳ ಸಂಯುಕ್ತಾಶ್ರಯದಲ್ಲಿ 13ನೇ ‘ವಿಜಯಪುರ ಸಾಂಸ್ಕøತಿಕ ಜನೋತ್ಸವ’ವನ್ನು ಸಂಘಟಿಸಲಾಗಿದೆ. ಈ ಕಾರ್ಯಕ್ರಮವನ್ನು ಮಹಾನ್ ಕ್ರಾಂತಿಕಾರಿ ಭಗತ್‍ಸಿಂಗ್‍ರವರ ಹುತಾತ್ಮ ದಿನಕ್ಕೆ ಸಮರ್ಪಿಸಲಾಗಿದೆ. ಇಲ್ಲಿ ಹಲವಾರು ಕಲಾವಿದರಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ವಿವರಿಸಿದರು.
ಕಥೆಗಾರರು ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನೂತನ ಅಧ್ಯಕ್ಷÀ ಡಾ. ಚೆನ್ನಪ್ಪ ಕಟ್ಟಿ ಮತ್ತು ಎಐಡಿಎಸ್‍ಓನ ಅಖಿಲ ಭಾರತ ಉಪಾಧ್ಯಕ್ಷÀ ಡಾ. ಎನ್. ಪ್ರಮೋದ ಅವರು ಉದ್ಘಾಟನೆ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಾಸ್ತಾವಿಕವಾಗಿ ಆವಿಷ್ಕಾರದ ಮುಖಂಡ ಅಶೋಕ ದೇಸಾಯಿ ಅವರು ಮಾತನಾಡುವರು. ಎ.ಐ.ಡಿ.ವೈ.ಓ. ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ನಂತರ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯಿಂದ ಸಮೂಹ ಗಾಯನ. ಗೀತಾಂಜಲಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಂದ ಸಮೂಹ ನೃತ್ಯ, ಕಲಾವಿದರಾದ ಸಿದ್ದಣ್ಣ ಬಿಜ್ಜರಗಿ ಅವರಿಂದ ತತ್ವ ಪದಗಳು, ವಿದೂಷಿ ಲಕ್ಷ್ಮೀ ತೇರದಾಳಮಠ ಅವರ ನಾಟ್ಯಕಲಾ ಡಾನ್ಸ್ ಕ್ಲಾಸ್‍ನವರಿಂದ ನೃತ್ಯ ರೂಪಕ, ಹಾಗೂ ಕಾವ್ಯ-ಕುಂಚ-ನೃತ್ಯ ಎಂಬ ವಿಶಿಷ್ಠ ಕಾರ್ಯಕ್ರಮದಲ್ಲಿ ಕ.ರಾ.ಅ.ಮ.ವಿ. ವಿಜಯಪುರದ ಸಂಗೀತ ಉಪನ್ಯಾಸಕರಾದ ಹರೀಶ ಹೆಗಡೆ ಮತ್ತು ತಂಡದವರಿಂದ ಕಾವ್ಯ, ಮಹಾಲ(ಐನಾಪುರ)ನ ಚಿತ್ರ ಕಲಾವಿದರಾದ ಪರಶುರಾಮ ಇಂಚಗೇರಿ ಹಾಗೂ ನಂದ್ಯಾಳ ಗ್ರಾಮದ ಚಿತ್ರ ಕಲಾವಿದರಾದ ಮಲ್ಲು ಹಡಪದ ಅವರಿಂದ ಕುಂಚ ಹಾಗೂ ಬಳ್ಳಾರಿಯ ಜಾನಪದ ಕಲಾವಿದರಾದ ತಿರುಮಲ ಡಿ. ಜಿ. ಮತ್ತು ವಿಜಯಪುರದ ಸ್ಮಿತಾ ರೂಡಗಿ ಅವರಿಂದ ನೃತ್ಯ ಕಾಯಕ್ರಮಗಳು ಜರುಗಲಿವೆ ಎಂದರು.
ನಂತರ ಹೆನ್ರಿಕ್ ಇಬ್ಸೆನ್ ಅವರ ನಾಟಕವನ್ನು ಆಧÀರಿಸಿ ಎಸ್. ಸುರೇಂದ್ರನಾಥ ಅವರು ರಚಿಸಿ, ನಿರ್ದೇಶಿಸಿರುವ ಜನ ಶತ್ರು ಎಂಬ ನಾಟಕವನ್ನು ಚಾಮರಾಜನಗರದ ಶಾಂತಲಾ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ ಎಂದು ಹೇಳಿದರು.
ಮಾ. 31ರಂದು ಬೆಳಿಗ್ಗೆ 11 ಗಂಟೆಗೆ ‘ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಪಾತ್ರ’ ಎಂಬ ವಿಷಯದ ಕುರಿತು ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಚರ್ಚೆಯನ್ನು ಲೇಖಕಿ ರೂಪ ಹಾಸನ ಅವರು ನಡೆಸಿಕೊಡುವರು. ಎಐಡಿಎಸ್
ಒನ ಜಿಲ್ಲಾಧ್ಯಕ್ಷೆ ಸುರೇಖಾ ಕಡಪಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುವರು. ಎಐಎಮ್‍ಎಸ್‍ಎಸ್‍ನ ಜಿಲ್ಲಾ ಸಹಸಂಚಾಲಕಿ ಗೀತಾ ಎಚ್. ಅವರು ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸಿನೆಮಾ ಪ್ರದರ್ಶನ ಮತ್ತು ಸಂವಾದ : 31 ರಂದು ಸಂಜೆ 5-30 ಗಂಟೆಗೆ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಸಿನೆಮಾ ‘ಡೇರ್ ಡೆವಿಲ್ ಮುಸ್ತಫಾ’ದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ಸಿನೆಮಾವನ್ನು ಶಶಾಂಕ ಸೋಗಲ್ ಅವರು ನಿರ್ದೇಶಿಸಿದ್ದು, 100 ಜನ ತೇಜಸ್ವಿಯವರ ಅಭಿಮಾನಿಗಳು ಸೇರಿ ನಿರ್ಮಿಸಿದ್ದಾರೆ. ಸಿನೆಮಾ ಪ್ರದರ್ಶನದ ನಂತರ ನಿರ್ದೇಶಕÀ ಶಶಾಂಕ ಸೋಗಲ್ ಅವರು ಸಿನೆಮಾ ಕುರಿತು ಸಂವಾದವನ್ನು ನಡೆಸಿಕೊಡುವರು. ನಾಯಕ ನಟ ಶಿಶಿರ ಬೈಕಾಡಿಯವರೂ ಉಪಸ್ಥಿತರಿರುವರು. ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತರವರು ಪ್ರಾಸ್ತಾವಿಕವಾಗಿ ಮಾತನಾಡುವರು. ಎಐಎಮ್‍ಎಸ್‍ಎಸ್‍ನ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡಗೂಳಿ ಅವರು ಅಧ್ಯಕ್ಷತೆ ವಹಿಸುವರು ಎಂದರು.
ಎರಡೂ ದಿನ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ಈ ಎಲ್ಲಾ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ ಇರುತ್ತದೆ. ಹಾಗೂ ಬೆಳಿಗ್ಗೆ 11 ರಿಂದ ಸಂಜೆ 9 ಗಂಟೆಯವರೆಗೆ ರಂಗಮಂದಿರದ ಆವರಣದಲ್ಲಿ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ ಮತ್ತು ಸಾಹಿತ್ಯ ಮಾರಾಟವನ್ನು ಹಮ್ಮಿಕೊಳ್ಳಲಾಗುವುದು. ಮಾರ್ಚ್ 30 ಮತ್ತು 31ರಂದು ನಡೆಯಲಿರುವ ಈ ಸಾಂಸ್ಕøತಿಕ ಜನೋತ್ಸವಕ್ಕೆ ಜಿಲ್ಲೆಯ ವಿದ್ಯಾರ್ಥಿ, ಯುವಜನ, ಮಹಿಳೆಯರು ಸೇರಿದಂತೆ ಎಲ್ಲ ಸಹೃದಯಿ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅವರು ಕೇಳಿಕೊಂಡರು.
‘ಆವಿಷ್ಕಾರ’ ಜಿಲ್ಲಾ ಸಂಚಾಲಕ ಎಚ್.ಟಿ. ಭರತ್‍ಕುಮಾರ, ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, ಎಐಡಿವೈಒ ಜಿಲ್ಲಾ ಕಾಯ
ದರ್ಶಿ ಸಿದ್ರಾಮ ಹಿರೇಮಠ, ಎಐಡಿವೈಒ ಜಿಲ್ಲಾಧ್ಯಕ್ಷÀ ಶ್ರೀಕಾಂತ ಕೆ., ಎಐಡಿಎಸ್‍ಒ ಜಿಲ್ಲಾಧ್ಯಕ್ಷೆ ಸುರೇಖಾ ಕಡಪಟ್ಟಿ, ಎಐಎಮ್‍ಎಸ್‍ಎಸ್ ಸಂಘಟನಾಕಾರರಾದ ಶಿವರಂಜನಿ ಇದ್ದರು.