ಮಾ.30 ರಿಂದ ಏ.6 ರವರೆಗೆ ಮಣ್ಣಿನ ಸತ್ಯಾಗ್ರಹ

ಕಲಬುರಗಿ ಮಾ 25: ರೈತ ಹೋರಾಟದ ಸ್ಥಳಗಳಲ್ಲಿ ಹುತಾತ್ಮರಾದ ರೈತರನ್ನು ಸ್ಮರಿಸಿ ಅವರ ಗೌರವಾರ್ಥ ಸ್ತಂಭಗಳನ್ನು ನಿರ್ಮಿಸಲು ಮಾ.30 ರಿಂದ ಏ. 6 ರವರೆಗೆ ದೇಶದಾದ್ಯಂತ ಮಣ್ಣಿನ ಸತ್ಯಾಗ್ರಹದ ಎರಡನೆಯ ಘಟ್ಟ ನಡೆಯಲಿದೆ ಎಂದು ಮಾಜಿ ಶಾಸಕ ,ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಬಿ.ಆರ್ ಪಾಟೀಲ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿಂಘು,ಟಿಕ್ರಿ,ಘಾಜಿಪುರ,ಶಹಜಹಾನಪುರಗಳಲ್ಲಿ ಸ್ಮಾರಕ ಸ್ತಂಭ ನಿರ್ಮಿಸಲಾಗುವದು. ದೇಶದ ವಿಭಿನ್ನ ಭಾಗಗಳಿಂದ ಸಂಗ್ರಹಿಸಲಾದ ಮಣ್ಣು ತು
ಂಬಿದ ಕುಡಿಕೆಗಳನ್ನು ಕಳಸದ ರೂಪದಲ್ಲಿ ಅಲಂಕರಿಸಿ, ದೆಹಲಿಯ ಹೊರವಲಯದಲ್ಲಿ ಹೋರಾಟ ನಿರತರಾಗಿರುವ ರೈತಾಪಿಗಳ ಸಂಘರ್ಷದ ಭೂಮಿಗೆ ಕೊಂಡೊಯ್ಯಲಾಗುವದು.ಮಾರ್ಚ 30 ರಂದು ಒಂದು ಮಹಾಯಾತ್ರೆ ಮುಂಬೈಯಿಂದ ದಂಡಿ ಮಾರ್ಗವಾಗಿ ರಾಜಸ್ಥಾನ, ಪಂಜಾಬ,ಹರಿಯಾಣ ಮೂಲಕ ಹಾದು ಏ. 5 ರಂದು ಸಿಂಘು ಗಡಿ ತಲುಪಲಿದೆ.ಇಂಥ ಹಲವು ಯಾತ್ರೆಗಳು ದೇಶದವಿವಿಧ ಕಡೆಗಳಿಂದ ದೆಹಲಿ ತಲುಪಲಿವೆ.ಏಪ್ರಿಲ್ 6 ರಂದು 100 ವರ್ಷಗಳ ಹಿಂದಿನ ದಂಡಿ ಸತ್ಯಾಗ್ರಹ ಸ್ಮರಣೆಯಲ್ಲಿಟ್ಟುಕೊಂಡು ಕೃಷಿ ಕಾನೂನು ಧಿಕ್ಕರಿಸುವ ಪ್ರತಿಜ್ಞೆ ಕೈಗೊಳ್ಳಲಿದ್ದೇವೆ ಎಂದರು.
ಕಾನೂನು ಮೊರೆ:
ರೈತ ಹೋರಾಟಗಾರ ರಾಕೇಶ ಟಿಕಾಯತ್ ವಿರುದ್ದ ರಾಜದ್ರೋಹ ಪ್ರಕರಣ ದಾಖಲಾಗಿದ್ದು,ಇದರ ವಿರುದ್ದ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವದು.
ಹೋರಾಟವನ್ನು ಹತ್ತಿಕ್ಕುವ ಯತ್ನವನ್ನು ಖಂಡಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶೌಕತ್ ಅಲಿ ಆಲೂರ,ಬಸವರಾಜ ಜವಳಿ ಉಪಸ್ಥಿತರಿದ್ದರು.