ಮಾ.30 ರಂದು ವಚನ ಚಳವಳಿ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ

ಕಲಬುರಗಿ,ಮಾ.27- ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕಾಯಕದ ಶರಣರ ಜಯಂತ್ಯುತ್ಸವ ನಿಮಿತ್ತ ಕಾಯಕದ ಶರಣರು : ವಚನ ಚಳವಳಿ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಮಾ.30ರಂದು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ದಯಾನಂದ ಅಗಸರ್ ಉದ್ಘಾಟಿಸುವರು, ನಾಡಿನ ಖ್ಯಾತ ಸಾಹಿತಿಗಳಾದ ಡಾ. ಚನ್ನಪ್ಪ ಕಟ್ಟಿಯವರು ಆಶಯ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು, ಕಲಾನಿಕಾಯದ ಡೀನರಾದ ಪೆÇ್ರ. ಎಚ್.ಟಿ. ಪೆÇೀತೆ ಅವರು ವಹಿಸಲಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಗಂಗಾಧರ ನಾಯಕ, ವಿದ್ಯಾವಿಷಯಕ ಪರಿಷತ್ ಸದಸ್ಯರಾದ ಪೆÇ್ರ. ಬಿ.ಎಂ. ಕನ್ನಳ್ಳಿ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಶರಣಬಸಪ್ಪ ಕೋಟೆಪ್ಪಗೋಳ್ ಪಾಲ್ಗೊಳ್ಳಲಿದ್ದಾರೆ.
ಮಾ.30 ರಂದು ಎರಡು ಗೋಷ್ಠಿಗಳಲ್ಲಿ ಕಾಯಕ ಶರಣರಾದ ಬಸವಣ್ಣ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಜೇಡರ ದಾಸಿಮಯ್ಯ, ಹಡಪದ ಅಪ್ಪಣ್ಣ ದಂಪತಿಗಳು, ಮಡಿವಾಳ ಮಾಚಿದೇವ, ನುಲಿಯ ಚಂದಯ್ಯ, ಸಮಗಾರ ಹರಳಯ್ಯ, ಮಾದಾರ ಚನ್ನಯ್ಯ, ಆಯ್ದಕ್ಕಿ ಮಾರಯ್ಯ, ಮೋಳಿಗೆ ಮಾರಯ್ಯ ದಂಪತಿಗಳ ಕಾಯಕ ನಿಷ್ಠೆ, ಪ್ರಜ್ಞೆ ಕುರಿತು ನಾಡಿನ ಸಂಪನ್ಮೂಲ ವ್ಯಕ್ತಗಳಾದ ಪ್ರೊ. ಬಿ.ಬಿ. ಪೂಜಾರಿ, ಡಾ. ಶ್ರೀಶೈಲ ನಾಗರಾಳ, ಡಾ. ಅಮೃತಾ ಕಟಕೆ, ಡಾ. ಕಲ್ಯಾಣರಾವ ಜಿ. ಪಾಟೀಲ, ಡಾ. ಎಂ. ನಾಗರಾಜ, ಡಾ. ಸೂರ್ಯಕಾಂತ ಎಸ್. ಸುಜ್ಯಾತ್ ಪ್ರಬಂಧ ಮಂಡಿಸಲಿದ್ದಾರೆ.
ಸಾಯಂಕಾಲ 4:00 ಗಂಟೆಗೆ ಸಮಾರೋಪ ಸಮಾರಂಭ ಭಾಷಣವನ್ನು ಡಾ. ಸದಾನಂದ ಪೆರ್ಲಾ, ಕಾರ್ಯಕ್ರಮ ನಿರ್ವಾಹಕರು ಆಕಾಶವಾಣಿ ಕಲಬುರಗಿ ಮತ್ತು ಡಾ. ಟಿ.ಆರ್. ಗುರುಬಸಪ್ಪ ಸರ್ಕಾರಿ (ಸ್ವಾಯತ್ತ) ಮಹಾವಿದ್ಯಾಲಯ, ಕಲಬುರಗಿ ಪ್ರಾಧ್ಯಾಪಕರು ಮಾತನಾಡಲಿದ್ದಾರೆ.
12ನೇ ಶತಮಾನದ ಕಾಯಕ ಶರಣರ ಜೀವಪರ ಚಿಂತನೆ ಕಾಯಕ ಪ್ರಜ್ಞೆ ಕುರಿತು ಅನುರಣನ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಪೆÇ್ರ. ಎಚ್.ಟಿ. ಪೆÇೀತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ