ಮಾ. 30 ರಂದು “ಲಿಂಗ ಮತ್ತು ಜಾತಿ ಸಂವೇದನೆ” ಕಾರ್ಯಾಗಾರ

ಕಲಬುರಗಿ.ಮಾ,26:ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ (ರಿ) ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಘಟಕ ಇವರ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ “ಲಿಂಗ ಮತ್ತು ಜಾತಿ ಸಂವೇದನೆ” ಕುರಿತು ಒಂದು ದಿನದ ಕಾರ್ಯಾಗಾರವನ್ನು ಇದೇ ಮಾರ್ಚ್ 30 ರಂದು ಬೆಳಿಗ್ಗೆ 10.30 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕಲಬುರಗಿ ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ. ದಯಾನಂದ ಅಗಸರ್ ಅವರು ಈ ಕಾರ್ಯಾಗಾರವನ್ನು ಉದ್ಘಾಟಿಸುವರು. ಪೂಣೆಯ ಪ್ರಖ್ಯಾತ ಸ್ತ್ರೀ ಬರಹಗಾರರು ಹಾಗೂ ಸಾಮಾಜಿಕ ಕಾರ್ರ್ಯಕರ್ತೆ ಪಲ್ಲವಿ ಹರ್ಷೆ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಪ.ಜಾ./ ಪ.ಪಂ. ಘಟಕದ ನಿರ್ದೇಶಕ ಪ್ರೊ. ವ್ಹಿ.ಟಿ. ಕಾಂಬಳೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.