ಮಾ.30ರಂದು ದೇವಸಮುದ್ರ ಶ್ರೀ ಬಲುಕುಂದೇಶ್ವರ ಜಾತ್ರಾ ಮಹೋತ್ಸವ

ಕಂಪ್ಲಿ ಮಾ 28 : ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಇದೇ ಮಾ.30ರ ಮಂಗಳವಾರದಂದು ಗ್ರಾಮದ ಶಿವಶರಣ ಶ್ರೀ ಬಲುಕುಂದೇಶ್ವರ ತಾತಾನವರ ಜಾತ್ರಾ ಮಹೋತ್ಸವ ಧಾರ್ಮಿಕ ಕಾರ್ಯಕ್ರಮ ಜರುಗಲಿದ್ದು, ಭಕ್ತಾದಿಗಳೆಲ್ಲರೂ ಕೊರೋನಾ ನಿಯಂತ್ರಣ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ದೇವಸ್ಥಾನ ಸದ್ಭಕ್ತ ಮಂಡಳಿ ಪ್ರಕಟಣೆಯ ಮೂಲಕ ಸಾರ್ವಜನಿಕರಲ್ಲಿ ಕೋರಿದೆ.
ಜಾತ್ರಾ ಮಹೋತ್ಸವ ನಿಮಿತ್ತ ಮಾ.29ರಂದು ಬೆಳಗ್ಗೆ 5.30ಕ್ಕೆ ದೇವಸ್ಥಾನದಲ್ಲಿ ಮಹಾ ಅಭಿಷೇಕ, ಗಂಗೆಸ್ಥಳ ಪೂಜೆ, ಬೆಳಗ್ಗೆ 6 ಗಂಟೆಯಿಂದ ಮರುದಿನ 6 ಗಂಟೆವರೆಗೆ ಶಿವನಾಮ ಮಹಾ ಭಜನಾ ಕಾರ್ಯಕ್ರಮ ಜರುಗಲಿದೆ. ಮಾ.30ರ ಮಂಗಳವಾರ ಬೆಳಗ್ಗೆ 5.30ಕ್ಕೆ ಸಕಲ ವಾದ್ಯಗಳೊಂದಿಗೆ ಮಡಿತೇರು ಎಳೆವ ಕಾರ್ಯಕ್ರಮ, ಬೆಳಗ್ಗೆ 8 ಗಂಟೆಗೆ ಮಹಾರುದ್ರಾಭಿಷೇಕ, 9 ಗಂಟೆಗೆ ಗಂಗೆಸ್ಥಳ ಪೂಜಾ ಕಾರ್ಯಕ್ರಮ ಹಾಗು ಸಂಜೆ 5.30ಕ್ಕೆ ಮಹಾ ರಥೋತ್ಸವ, ಬಳಿಕ ಪಾಂಡು ವಿಜಯ ಅರ್ಥಾತ್ ಕೀಚಕನ ವಧೆ ಬಯಲಾಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ತನು, ಮನ, ಧನದಿಂದ ಸೇವೆ ಸಲ್ಲಿಸುವಂತೆ ಸರ್ವಸದ್ಭಕ್ತ ಮಂಡಳಿ ಸಾರ್ವಜನಿಕರಲ್ಲಿ ತಿಳಿಸಿದೆ.