ಮಾ.28 ರ ಸಿರಿಗೇರಿಯ ಶ್ರೀನಾಗನಾಥೇಶ್ವರ ಜಾತ್ರೆ ಅಂಗವಾಗಿ ಶಾಂತಿಸಭೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ26. ಗ್ರಾಮದ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಮಾರ್ಚ್ 28 ರಂದು ಮಂಗಳವಾರ ನಡೆಯಲಿರುವ ಸಿರಿಗೇರಿಯ ಶ್ರೀನಾಗನಾಥೇಶ್ವರ ಜಾತ್ರೆಯ ಅಂಗವಾಗಿ ಶಾಂತಿ ಸಭೆಯನ್ನು ನಡೆಸಲಾಯಿತು. ಗ್ರಾಮದ ಎಲ್ಲಾ ಸಮುದಾಯಗಳ ಮುಖಂಡರು, ದೇವಸ್ಥಾನ ಸಮಿತಿಯವರು, ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದ ಸಭೆಯಲ್ಲಿ ಪಿಎಸ್‍ಐ ವೆಂಕಟೇಶ್‍ನಾಯಕ ಮಾತನಾಡಿ ಜಾತ್ರೆಯ ಮುಂಜಾಗ್ರತೆ ಕ್ರಮಗಳ ಕುರಿತು, ಶಾಂತಿ ಸುವ್ಯವಸ್ಥೆಗಳ ಕುರಿತು, ಮತ್ತು ಗ್ರಾಮದ ಮುಖಂಡರು ತೆಗೆದುಕೊಳ್ಳಬೇಕಾದ ಜವಾಬ್ದಾರಿಗಳ ಕುರಿತು ತಿಳಿಸಿದರು. ಸಮಿತಿಯ ಪದಾಧಿಕಾರಿಗಳು, ಮುಖಂಡರು ಜಾತ್ರೆಯ ಮುಂಜಾಗ್ರತಾ ಕ್ರಮಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಇಲಾಖೆಯಿಂದ ಹೆಚ್ಚಿನ ಸಿಬ್ಬಂದಿಯವರನ್ನು ನೇಮಿಸಿ ಬಂದೋಬಸ್ತ್ ನೀಡಬೇಕೆಂದು ಕೋರಿದರು. ಎಎಸ್‍ಐ ಎಚ್.ಗಂಗಣ್ಣ ಸ್ವಾಗತ ಕೋರಿದರು. ಸಿಬ್ಬಂದಿಯವರು ಸಭೆಯನ್ನು ನಿರ್ವಹಿಸಿದರು.