
ಕಲಬುರಗಿ,ಮಾ 24: ಅಳಂದ ತಾಲೂಕಿನ ಧೋತ್ತರಗಾಂವ ಗ್ರಾಮದಲ್ಲಿ ಮಾ.21 ರಿಂದ ಪ್ರಾರಂಭವಾದ ವೀರೇಶ್ವರ ಜಾತ್ರಾ ಮಹೋತ್ಸವ ಮಾ.27 ರವರೆಗೆ ನಡೆಯಲಿದೆ.
24 ಮತ್ತು 25 ರಂದು ರಾತ್ರಿ 9 ಗಂಟೆಗೆ ಪಲ್ಲಕ್ಕಿ ಉತ್ಸವ ನಂತರ ಹರದೇಶಿ ಮತ್ತು ನಾಗೇಶಿ ಗೀಗೀಪದಗಳ ಕಾರ್ಯಕ್ರಮವಿದೆ.26 ರಂದು ಸಂಜೆ 4 ಗಂಟೆಗೆ ಪೂಜ್ಯ ಉಜ್ಜಯನಿ ಜಗದ್ಗುರುಗಳಿಂದ ಮಹಾದ್ವಾರದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿದ ಕಲ್ಲಿನ ಮಂಟಪ ಉದ್ಘಾಟನೆ ನಂತರ ಧಾರ್ಮಿಕ ಸಭೆ.ಸಂಜೆ 6 ಗಂಟೆಗೆ ಲಕ್ಷ ದೀಪೋತ್ಸವ ಜುರುಗುವದು.27 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಗ್ರಾಮದ ರಾಜಬೀದಿಗಳಲ್ಲಿ ಪಲ್ಲಕ್ಕಿ ಮಹೋತ್ಸವ .ನಂತರ ಪೈಲ್ವಾನರಿಂದ ಜಂಗೀಕುಸ್ತಿ. ರಾತ್ರಿ 8 ಗಂಟೆಗೆ ವರ್ಣರಂಜಿತ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕೆ ಸರ್ವರೂ ಆಗಮಿಸಿ ವೀರೇಶ್ವರರ ದರ್ಶನಾಶೀರ್ವಾದ ಪಡೆಯಬೇಕೆಂದು ಶ್ರೀ ವೀರೇಶ್ವರ ದೇವಸ್ಥಾನ ಸಮಿತಿ ಹಾಗೂ ಸಕಲ ಸದ್ಭಕ್ತ ಮಂಡಳಿಯವರು ಮನವಿ ಮಾಡಿದ್ದಾರೆ.