ಮಾ. 27 ರಂದು ವಿಶ್ವ ರಂಗಭೂಮಿ ದಿನಾಚರಣೆ

ಕಲಬುರಗಿ.ಮಾ.25:ಕಲಬುರಗಿ ರಂಗಾಯಣದಿಂದ ಶನಿವಾರ ಮಾರ್ಚ್ 27 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ರಂಗಾಯಣದ ಆಡಿಟೋರಿಯಂ ಆವರಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕಲಬುರಗಿಯ ಹಿರಿಯ ರಂಗಕರ್ಮಿ ಅಮರ ಪ್ರೀಯ ಹಿರೇಮಠ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ರಂಗ ಕಲಾವಿದೆ ಆಶಾ ಚಿತ್ರಶೇಖರ ಕಂಠಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಕಾರ್ಯಕ್ರಮದಲ್ಲಿ ಕಲಬುರಗಿಯ ಹಿರಿಯ ನಾಟಕಕಾರ ಸುಬ್ರಾವ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುತ್ತದೆ. ಕಲಬುರಗಿ ರಂಗಾಯಣದ ಕಲಾವಿದರಿಂದ ರಂಗ ಗಾಯನ ಕಾರ್ಯಕ್ರಮ ಜರುಗಲಿದೆ.