ಮಾ. 27ಕ್ಕೆ ರೈತ ಮೋರ್ಚಾ ಸಮಾವೇಶ

ಕಾಳಗಿ :ಮಾ.19: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಟಿ ಉದ್ದೇಶಿಸಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಮಾಲಿಪಾಟೀಲ ಕಮಲಾಪೂರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ರೈತ ಪರ ಅಭಿವೃದ್ಧಿ ಕಾರ್ಯಗಳ ಕುರಿತು ರೈತಾಪಿಗಳಲ್ಲಿ ಜಾಗೃತಿ ಮೂಡಿಸಲು ಮಾರ್ಚ್ 26ರಂದು ಕಲಬುರಗಿ ಕೆಸರಟಗಿಯಲ್ಲಿ ಬೃಹತ್ ರೈತ ಮೋರ್ಚಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರತಿ ತಾಲೂಕು ಕೇಂದ್ರದಿಂದ ನಾಲ್ಕು ಸಾವಿರ ರೈತರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ರೈತ ಮೋರ್ಚಾ ಕಾರ್ಯಕರ್ತರು ಶ್ರಮಿಸಿದ್ದಾರೆ ಎಂದು ಹೇಳಿದರು.
ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ ಕಾಳಗಿ, ಅಲ್ಲಮಪ್ರಭು, ಶ್ರೀಶೈಲ ಪಾಟೀಲ, ಕಾಳಶೆಟ್ಟಿ ಪಡಶೆಟ್ಟಿ, ಅಣ್ಣರಾವ ಪೆದ್ದಿ, ಹಣಮಂತ ಶೆಗಾಂವಕಾರ, ಈರಣ್ಣಗೌಡ ಟೆಂಗಳಿ, ಸುನೀಲ್ ರಾಜಾಪೂರ, ನಾಗರಾಜ ಪಾಟೀಲ, ಶರಣಪ್ಪ ಮುಕರಂಬಿ , ನಾಗರಾಜ ಚಿಕ್ಕಮಠ ಇದ್ದರು.