ಮಾ. 26 ರಂದು ಶ್ರೀ ದೇವರ ದಾಸಿಮಯ್ಯಜಯಂತಿ ಅಂಗವಾಗಿ ಪೂರ್ವಭಾವಿ ಸಭೆ

ಕಲಬುರಗಿ:ಮಾ.18: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೇವರ ದಾಸಿಮಯ್ಯ ಜಯಂತಿಯನ್ನು ಇದೇ ಮಾರ್ಚ್ 26 ರಂದು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕಲಬುರಗಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರು ಹೇಳಿದರು.
ಅವರು ಗುರುವಾರದಂದು ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಂದು ನಡೆಯುವ ದಾಸಿಮಯ್ಯ ಅವರ ಮಾರ್ಚ್ 26 ರಂದು 11.30ಕ್ಕೆ ನಡೆಯುವ ಕಾರ್ಯಕ್ರಮ ಸಮಾಜ ಮುಖಂಡರು ಸರಿಯಾಗಿ ಸಮಯಕ್ಕೆ ಹಾಜರಿರಲು ಸೂಚಿಸಿದರು.
ಕಾರ್ಯಕ್ರಮಕ್ಕೆ ವೇದಿಕೆ ಅಲಂಕಾರ ಭಾವಚಿತ್ರಕ್ಕೆ ಪೂಜ್ಯ ಸಾಮಾಗ್ರಿಗಳನ್ನು ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವೇದಿಕೆ ಸ್ವಚ್ಪತೆ ಮಾಡಿಕೊಳ್ಳಲು ಮಹಾನಗರ ಪಾಲಿಕೆಗೆ ಅಧಿಕಾರಿಗಳಿಗೆ ಸೂಚಿಸಿದರು.
ಅಂದು ನಡೆಯುವ ಜಯಂತಿ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜುಗಳಲ್ಲಿ, ಸರ್ಕಾರಿ, ಅರೆ ಸರ್ಕಾರಿ ಬೆಳಿಗ್ಗೆ 9 ಗಂಟೆಗೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕೆಂದರು.
ಇದೇ ಸಂದರ್ಭದಲ್ಲಿ ವೇದಿಕೆ ಸಮಿತಿ ಒಬ್ಬ ಅಧ್ಯಕ್ಷರನ್ನು ಸೂಚಿಸಬೇಕು. ಒಬ್ಬ ಉಪನ್ಯಾಸಕರನ್ನು ಕರೆತರುವ ವ್ಯವಸ್ಥೆ ಮಾಡಬೇಕೆಂದರು.
ರಂಗಾಯಣ ಉಪನಿರ್ದೇಶಕಿ ಹಾಗೂ ಕನ್ನಡ ಸಂಸ್ಕøತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಅವರು ಮಾತನಾಡಿ, ಸಂಗೀತ, ಗಾಯನ, ನಾಡಗೀತ ಏರ್ಪಡಿಸಲಾಗುವುದು. 250 ಆಮಂತ್ರಣ ಪತ್ರಿಕೆಗಳು ಮುದ್ರಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಠಾಚಾರ ತಹಶೀಲ್ದಾರ ಸೈಯದ್ ನಿಸಾರ ಅಹ್ಮದ, ಜಿಲ್ಲಾ ನೇಕಾರರ ಒಕ್ಕೂಟದ ಸಮಾಜದ ಅಧ್ಯಕ್ಷ ಚಂದ್ರಶೇಖರ, ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ರುದ್ರಪ್ಪ ಗಂಜಿ, ದತ್ತಾತ್ರೇಯ ಸುಗೂರ, ನಾಗರಾಜ ಹುಲಿಮನಿ, ರೇವಣ್ಣಸಿದ್ದಪ್ಪ ಗಡ್ಡದ ಸೇರಿದಂತೆ ವಿವಿಧ ಸಮಾಜದ ಮುಖಂಡರು ಭಾಗವಹಿಸಿದರು.