
ಮೈಸೂರು: ಮಾ.10:- ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾ.26ರಂದು ನಡೆಯಲಿರುವ ಪಂಚರತ್ನ ಸಮಾರೋಪ 10ಲಕ್ಷ ಮಂದಿ ಸೇರುವ ಮೂಲಕ ಐತಿಹಾಸಿಕ ದಾಖಲೆಯಾಗಲಿದೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಮೈಸೂರಿನ ತ್ರಿಪುರಸುಂದರಿ ಅಮ್ಮನವರ ದೇವಾಲಯದ ಸಮೀಪದ ಏಳಿಗೆಹುಂಡಿ ಗ್ರಾಮದ ಮೈದಾನದಲ್ಲಿ ಪಂಚರತ್ನ ಯಾತ್ರೆಯ ಸಮಾರೋಪದ ಬೃಹತ್ ವೇದಿಕೆ ನಿರ್ಮಾಣಕ್ಕೆ ಗುದ್ಧಲಿಪೂಜೆ ಮಾಡಿ ಸುದ್ದಿಗೋಷ್ಠಿ ನಡೆಸಿದರು. ಸುಮಾರು 10ಲಕ್ಷ ಜನ ಸೇರಿಸಲು ನಿರ್ಧರಿಸಿದ್ದೇವೆ. ರಾಜ್ಯದ್ಯಂತ ಕಾರ್ಯಕರ್ತರು ಆಗಮಿಸಲಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್ ಪ್ರಾಬಲ್ಯವಿದೆ. ಅದೇ ಕಾರಣಕ್ಕೆ ಮೈಸೂರಿನಲ್ಲಿ ಸಮಾರೋಪ ಆಯೋಜಿಸಿದ್ದೇವೆ.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಸಂದರ್ಭದಲ್ಲೆಲ್ಲ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಭಾರಿಯು ಬೃಹತ್ ಕಾರ್ಯಕ್ರಮ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯಲಿದೆ. ಸಮಾವೇಶದ ಹೊತ್ತಿಗೆ ಚುನಾವಣೆ ಘೋಷಣೆಯಾದರು ತೊಂದರೆಯಾಗುವುದಿಲ್ಲ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆಗದೆ ಇರುವುದರಿಂದ ಸಮಾರೋಪದ ಖರ್ಚನ್ನು ಪಕ್ಷದ ಹೆಸರಿನಲ್ಲಿ ತೋರಿಸಲು ಅವಕಾಶವಿದೆ ಎಂದರು.
ಶಾಸಕ ಸಿ.ಎಸ್.ಪುಟ್ಟರಾಜು ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಕ್ರೆಡಿಟ್ ವಾರ್ ವಿಚಾರವಾಗಿ ಪ್ರತಿಕ್ರಯಿಸಿ, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಜೆಡಿಎಸ್‍ನದ್ದು ಪಾಲಿದೆ. ಕೇಂದ್ರ ಸರ್ಕಾರ ಪ್ರತಾಪ್ ಸಿಂಹಗೆ ಹೆದ್ದಾರಿ ಯೋಜನೆ ಗುತ್ತಿಗೆ ಕೊಟ್ಟಿದ್ಯಾ?, ಇಡೀ ಯೋಜನೆ ನಾನೊಬ್ಬನೇ ಮಾಡಿಸಿದ್ದೇನೆ ಅಂತ ಓಡಾಡಿಕೊಂಡಿದ್ದಾರೆ. ನಾನು ಎಂಪಿ ಆಗಿದ್ದವನು. ದೆಹಲಿಯಲ್ಲಿ ಏನೆಲ್ಲಾ ಹೋರಾಟ ಮಾಡಿದ್ದೀನಿ ಅಂತ ಯಡಿಯೂರಪ್ಪ ಅವರ ಬಳಿ ಕೇಳಿ ತಿಳಿದುಕೊಳ್ಳಲ್ಲಿ. ಮೈತ್ರಿ ಸರ್ಕಾರ ಇದ್ದಾಗ ಕುಮಾರಸ್ವಾಮಿ ಯೋಜನೆಯ ಅಲೈನ್‍ಮೆಂಟ್ ಮಾಡಿ, ಅನುಮೋದನೆ ನೀಡದಿದ್ದರೆ ಹೆದ್ದಾರಿ ಹೇಗೆ ಆಗುತ್ತಿತ್ತು ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದಿದ್ದರೂ ಈ ಯೋಜನೆಗೆ ಸಹಕಾರ ಕೊಡಲೇಬೇಕಿತ್ತು. ಹೆದ್ದಾರಿ ಬಂದಿರುವುದರಿಂದ ಚನ್ನಪಟ್ಟಣ, ರಾಮನಗರ, ಮಂಡ್ಯ, ಶ್ರೀರಂಗಪಟ್ಟಣದ ನೂರಾರು ಕುಟುಂಬಗಳ ಬಾಯಿಗೆ ಮಣ್ಣು ಬಿದ್ದಿದೆ. ಪ್ರತಾಪಸಿಂಹ ಹೆಜ್ಜೆ ಹೆಜ್ಜೆಗೂ ಚೀಫ್ ಇಂಜಿನಿಯರ್ ಥರ ಆಡುತ್ತಿದ್ದಾರೆ. ಪ್ರಧಾನಿ ಮೋದಿ ಅಥವಾ ಅಮಿತ್ ಶಾನೇ ಬರಲಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‍ನದ್ದೇ ಪ್ರಾಬಲ್ಯ ಇರಲಿದೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆ ಪೈಪೆÇೀಟಿ ಇದೆ ಎಂದರು.
ಸುಮಲತಾ ಬಿಜೆಪಿ ಸೇರುತ್ತಾರೆ: ಕಳೆದ ಚುನಾವಣೆಯಲ್ಲಿ ನಿಖಿಲ್‍ಕುಮಾರಸ್ವಾಮಿ ಸೋಲಿಸಲು ಕಾಂಗ್ರೆಸ್, ಬಿಜೆಪಿ, ರೈತಸಂಘ ಒಗ್ಗೂಡಿದರು. ಈಗ ಸಂಸದೆ ಸುಮಲತಾ ಬಿಜೆಪಿ ಸೇರಿದರೆ ಅವರೆಲ್ಲಾ ಎನೂ ಮಾಡುತ್ತಾರೆ. ಜಿಲ್ಲೆಯಲ್ಲಿ ಬಿಜೆಪಿ, ರೈತ ಸಂಘ ಬಲಿಷ್ಠವಾದರೆ ಮತಗಳು ಹರಿದು ಹಂಚಿ ಹೋಗುತ್ತದೆ. ಇದರಿಂದ ನೇರವಾಗಿ ಜೆಡಿಎಸ್ ಗೆ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ನಮ್ಮ ಶಾಸಕರು ಬಲಿಷ್ಠವಾಗಿದ್ದು, ಬೇರೆಯವರ ಆಟ ನಡೆಯಲ್ಲ ಎಂದರು.
ಇನ್ನೂ ಮುಂಬರುವ ಸಂಸದರ ಅಭ್ಯರ್ಥಿ ಸಂಬಂಧ ಕೇಳಿದ ಪ್ರಶ್ನೆಗೆ ನಿಖಿಲ್ ಅವರನ್ನೇ ನಿಲ್ಲಿಸಿ ಉತ್ತರ ಕೊಡಿಸಬೇಕಾದ ಆಸೆಯಿದೆ. ಆದರೆ, ಅಂತಿಮವಾಗಿ ಸಮಯ ಬಂದಾಗ ಅಭ್ಯರ್ಥಿ ತಿಳಿಸುವುದು ಸಾಕಷ್ಟು ಮಂದಿ ಪ್ರಬಲ ಅಬ್ಯರ್ಥಿಗಳಿದ್ದಾರೆ. ಉರಿಗೌಡ, ನಂಜೇಗೌಡ ಯಾವ ಗೌಡರೂ ಗೊತ್ತಿಲ್ಲ. ನಮಗೆ ಗೊತ್ತಿರುವುದ ರೈತರ ಮಗ ದೇವೇಗೌಡರೊಬ್ಬರೇ ಗೊತ್ತಿರೋದು ಎಂದು ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದರು.
ಶಾಸಕರಾದ ಕೆ.ಮಹದೇವು, ಅಶ್ವಿನ್ ಕುಮಾರ್ ಮತ್ತು ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಕೆ.ವಿ.ಮಲ್ಲೇಶ್, ಎಚ್.ಡಿ.ಕೋಟೆ ಅಭ್ಯರ್ಥಿ ಜಯಪ್ರಕಾಶ್, ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ನಗರ ಅಧ್ಯಕ್ಷ ಕೆ.ಟಿ.ಚೆಲುವೆಗೌಡ, ಜಿಪಂ ಮಾಜಿ ಸದಸ್ಯೆ ರೂಪ ಲೋಕೇಶ್, ಮಾಜಿ ಮೇಯರ್ ಲಿಂಗಪ್ಪ, ನಗರಪಾಲಿಕೆ ಸದಸ್ಯರಾದ ಪ್ರೇಮಾಶಂಕರೇಗೌಡ, ಕೆ.ವಿ.ಶ್ರೀದರ್, ಎಸ್‍ಬಿಎಂ ಮಂಜು, ಅಶ್ವಿನಿ ಅನಂತು, ಜೆಡಿಎಸ್ ಮುಖಂಡ ಎಚ್.ಕೆ.ರಾಮು, ಯುವ ಜನತಾದಳದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ರಾಮು, ಕಾರ್ಯಾಧ್ಯಕ್ಷ ಪ್ರಶಾಂತ್, ಎನ್.ಆರ್.ಕ್ಷೇತ್ರದ ಅಧ್ಯಕ್ಷ ರಾಮು ಇನ್ನಿತರರು ಉಪಸ್ಥಿತರಿದ್ದರು.