ಮಾ.24-28 ವರೆಗೆ ರಂಗ ಉತ್ಸವ

ಮೈಸೂರು:ಮಾ:20: ಮೈಸೂರಿನ ನಿರಂತರ ಫೌಂಡೇಷನ್ ವತಿಯಿಂದ ಈ ತಿಂಗಳ 24 ರಿಂದ 28 ವರೆಗೆ ನಗರದ ರಾಮಕೃಷ್ಣನಗರ ಇ-ಎಫ್ ಬ್ಲಾಕ್‍ನಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ 5 ದಿನಗಳ ರಂಗ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದು ಖ್ಯಾತ ಛಾಯ ಚಿತ್ರಗ್ರಾಹಕ ಲೋಕೇಶ್‍ಮೊಸಳೆ ತಿಳಿಸಿದರು.
ಅವರು ಇಂದು ಬೆಳಿಗ್ಗೆ ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ಭಾರತೀಯ ಕಲಾ ಪರಂಪರೆಯಲ್ಲಿ ರಂಗಭೂಮಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಮೈಸೂರಿನಲ್ಲಿ ರಾಜ್ಯದ ಹಾಗೂ ಹೊರ ರಾಜ್ಯಗಳ ರಂಗಕ್ರಿಯೆಗಳನ್ನು, ಚಟುವಟಿಕೆಗಳನ್ನು ಆವಿರ್ಭಪಿಸಿಕೊಳ್ಳುವ ಒಂದು ಪ್ರಯತ್ನವಾಗಿ ಈ ರಂಗ ಉತ್ಸವವನ್ನು ಆಯೋಜಿಸಲಾಗಿದೆ ಎಂದರು.
ಮಾಚ್ 24 ರಿಂದ ಸಂಜೆ 6 ಗಂಟೆಗೆ ಉತ್ಸವ ಉದ್ಘಾಟನೆಗೊಳ್ಳಲಿದ್ದು, ಸಂಜೆ 7 ಗಂಟೆಗೆ ಶರಣ ಶ್ರೇಷ್ಠ ಬಸವಣ್ಣನವರ ವಚನಗಳನ್ನಾಧರಿಸಿದ ದೃಶ್ಯ ರೂಪಕ “ಕೂಡಲಸಂಗಮ” ಮಾರ್ಚ್ 25ರಂದು ರೋಹಿತ್ ಆರ್. ಬೈಕಾರ್ಥಿ ನಿರ್ದೇಶಿಸಿರುವ “ಕುದುರೆ ಬಂತು ಕುದುರೆ” ಮಾರ್ಚ್ 26ರಂದು ಜೀವನ್ ಕುಮಾರ್ ಹೆಗ್ಗೋಡು ನಿರ್ದೇಶಿಸಿರುವ “ಸೀತಾಸ್ವಯಂವರ” ಹಾಗೂ ಮಾರ್ಚ್ 27ರ ಸಂಜೆ ವೆಂಕಟೇಶ್ ಪ್ರಸಾದ್ ನಿರ್ದೇಶಿಸಿರುವ “ಕೋವಿಗೊಂದು ಕನ್ನಡ” ಎಂಬ ನಾಟಕಗಳು ಪ್ರದರ್ಶನಗೊಳ್ಳಲಿದೆ. ರಾತ್ರಿ 7 ಗಂಟೆಗೆ ಮಜುನಾಥ್ ಎಲ್. ಬಡಿಗೇರ ನಿರ್ದೇಶಿಸಿದರುವ “ಕಂತು” ನಾಟಕ ಪ್ರದರ್ಶನಗೊಳ್ಳಲಿದೆ. ಪ್ರತಿ ದಿನದ ನಾಟಕವನ್ನು ವೀಕ್ಷಿಸಲು ತಲಾ ಒಬ್ಬರಿಗೆ 100 ರೂ.ಗಳ ಪ್ರವೇಶ ದರವನ್ನು ನಿಗಧಿಪಡಿಸಲಾಗಿದೆ ಎಂದು ವಿವರ ನೀಡಿದ ಲೋಕೇಶ್ ಮೊಸಳೆ ನಗರದ ನಾಟಕಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಎಲ್ಲಾ ನಾಟಕಗಳನ್ನು ವೀಕ್ಷಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಸಾದ್‍ಕುಂದೂರ್, ನೇತ್ರರಾಜು, ನಿರಂತರ ಫೌಂಡೇಶನ್ ಅಧ್ಯಕ್ಷ ಎಂ.ಎನ್. ಸುಗುಣ, ಟ್ರಸ್ಟಿ ಶ್ರೀನಿವಾಸ್ ಪಾಲಳ್ಳಿ ಉಪಸ್ಥಿತರಿದ್ದರು.