ಮಾ. 24 ರಂದು ಕರವೇ ಬೆಳ್ಳಿಹಬ್ಬದ ಸಂಭ್ರಮ ಬೆಂಗಳೂರು ಅರಮನೆ ಮೈದಾನದಲ್ಲಿ ಸಮಾರಂಭ; ಟಿಎನ್ ಭೀಮುನಾಯಕ

ಯಾದಗಿರಿ, ಮಾ. 15: ಕರ್ನಾಟಕ ರಕ್ಷಣಾ ವೇದಿಕೆ ಬೆಳ್ಳಿಹಬ್ಬದ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಮಾ. 24- ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಳ್ಳಿಹಬ್ಬ ಸಂಭ್ರಮಾಚರಣೆ ಮಾಡಲಾಗುತ್ತಿದ್ದು, ಇದರಲ್ಲಿ ಎಲ್ಲ ಕನ್ನಡದ ಹೋರಾಟಗಾರರು ಭಾಗಿಯಾಗಬೇಕೆಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಮನವಿ ಮಾಡಿಕೊಂಡರು.

ನಗರದ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ಜರುಗಿದ ಪೂರ್ವಭಾವಿಸಭೆಯಲ್ಲಿ ಮಾತನಾಡಿದ ಅವರು, ಕಳೆದ ಶತಮಾನದ 1998 ರಲ್ಲಿ ಸ್ಥಾಪನೆಗೊಂಡ ಕರವೇ ಗೆ ಈಗ ಬೆಳ್ಳಿಹಬ್ಬದ ಸಂಭ್ರಮ ಕಾಣುತ್ತಿದೆ. ಕಳೆದ 25 ವರ್ಷಗಳಲ್ಲಿ ಅನೇಕ ನಾಡು ನುಡಿ ನೆಲ ಜಲ ಸಮಸ್ಯೆ ಬಂದಾಗ ಮುಂಚೂಣಿಯಲ್ಲಿ ಕರವೇ ಹೋರಾಟ ನಡೆಸಿದೆ. ಹೋರಾಟಗಳಲ್ಲಿಯೇ 25 ವಸಂತಗಳನ್ನು ಕಂಡಿದೆ ಎಂದು ಅವರು ಹೇಳಿದರು.

ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಾಗಲೆಲ್ಲ ರಾಜ್ಯಾದ್ಯಕ್ಷ ನಾರಾಯಣಗೌಡರು ಮೊದಲು ದನಿ ಎತ್ತುವ ಮೂಲಕ ಕನ್ನಡದ ಹಿತ ಕಾಪಾಡುವಲ್ಲಿ ಅವರ ನೇತೃತ್ವದ ಕರವೇ ಯಾವಾಗಲೂ ಹೋರಾಟಕ್ಕೆ ಮುಂದಡಿ ಇಟ್ಟಿದೆ ಎಂದು ಹೇಳಿದರು.

ಇಂತಹ ಸುದೀರ್ಘ ಇತಿಹಾಸ ಹೊಂದಿರುವ ಕರವೇ ಹೋರಾಟಕ್ಕೆ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದು, ನಾಡಿನ ಗಣ್ಯಾತಿ ಗಣ್ಯಮಾನ್ಯರು, ಸ್ವಾಮೀಜಿಗಳು ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ ಈ ಸಮಾರಂಭಕ್ಕೆ ಜಿಲ್ಲೆ, ತಾಲ್ಲೂಕು ಹೋಬಳಿ ಮಟ್ಟದ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಜನ ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲಾ ಘಟಕಕ್ಕೆ ನೇಮಕ: ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳ ನೇಮಕ ಮಾಡಲಾಯಿತು ಎಂದು ಅವರು ಪ್ರಕಟಿಸಿದರು.

ಭೀಮರಾಯ ರಾಮಸಮುದ್ರ (ಪ್ರಧಾನ ಸಂಚಾಲಕರು), ಮಂಜುನಾಥ ರಾಂಪುರಹಳ್ಳಿ (ಸಂಚಾಲಕರು), ಚಂದ್ರಶೇಖರ ಗೋಪಳಾಪುರ (ಕಾನೂನು ಸಲಹೆಗಾರರು) ಇವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು. ಕರವೇ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕನ್ನಡ ಭುವನೇಶ್ವರಿಯ ಸೇವೆ ಮಾಡಬೇಕೆಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಅಂಬ್ರೇಷ್ ಹತ್ತಿಮನಿ, ಅರ್ಜುನ ಪವಾರ, ಸಾಹೇಬಗೌಡ ನಾಯಕ, ಶಹಾಪೂರ ಅಧ್ಯಕ್ಷ ಅಬ್ದುಲ್ ಹಾದಿಮನಿ, ಸುರಪುರ ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ, ಸಿದ್ದಪ್ಪ ಕೊಯಿಲೂರ, ಸಿದ್ದಪ್ಪ ಕ್ಯಾಸಪನಳ್ಳಿ, ವಡಗೇರಿ ತಾಲ್ಲಕು ಅಧ್ಯಕ್ಷ ಅಬ್ದುಲ್ ಚಿಗಾನೂರ, ವೆಂಕಟೇಶ ರಾಠೋಡ, ದೀಪಕ ಒಡೆಯರ್, ಸುರೇಶ ಬೆಳಗುಂದಿ, ವಿಶ್ವರಾಜ ಹೊನಿಗೇರಿ, ಕಾಶಿನಾಥ ನಾನೇಕ, ಹಣಮಂತ ಸುರಪುರ, ಮೌನೇಶ ಮಾಧ್ವಾರ, ಮರೆಪ್ಪ ನಾಯಕ, ಬಸರೆಡ್ಡಿಗೌಡ ಅಭಿಶಾಳ, ಶರಣು ಗೊಂದೆನೂರ ಸೇರಿದಂತೆ ಅನೇಕರು ಭಾಗಿಯಾದರು.