
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.08: ಈ ತಿಂಗಳ21 ರಂದು ಇಲ್ಲಿನ ಪಾಲಿಕೆಯ ಎರಡನೇ ಅವಧಿಯ ಮೇಯರ್ ಚುನಾವಣೆ ನಿಗಧಿಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಬಗ್ಗೆ ಪಾಲಿಕೆಯ ಸದಸ್ಯರಿಗೆ ಸದಸ್ಯದಲ್ಲೇ ನೋಟೀಸ್ ಸರ್ವ್ ಆಗಲಿದೆ
ಮೇಯರ್ ಸ್ಥಾನ ಎಸ್ಸಿ ಸಾಮಾನ್ಯ ಮತ್ತು ಉಪ ಮೇಯರ್ ಎಸ್ಟಿ ಮಹಿಳೆಗೆ ಮೀಸಲಿದೆ. ಮೊದಲ ಅವಧಿಗೆ ಆಯ್ಕೆಯಾದವರ ಅವಧಿ ಈ ತಿಂಗಳ 18 ಕ್ಕೆ ಮುಗಿಯುತ್ತಿದೆ. ಕಳೆದ ಬಾರಿ ಮೇಯರ್ ಸ್ಥಾನ ಸಾಮನ್ಯವಾಗಿತ್ತು. ಆದರೂ ಮಹಿಳೆ ರಾಜೇಶ್ವರಿ ಸುಬ್ಬರಾಯಡು ಅವರನ್ನು ಕಾಂಗ್ರೆಸ್ ಪಕ್ಷ ಸೂಚಿಸಿತು. ಆಕಾಂಕ್ಷಿಗಳಾಗಿದ್ದ ಆಸಿಫ್ ಮತ್ತು ಮುಲ್ಲಂಗಿ ನಂದೀಶ್ ಬೇಸರಗೊಂಡಿದ್ದರು.
ಈಗಲೂ ಎಸ್ಸಿ ಸಾಮನ್ಯವಾಗಿರುವುದರಿಂದ ಎಸ್ಸಿ ಮಹಿಳೆಯರೂ ಸ್ಪರ್ಧೆ ಮಾಡಬಹುದಾಗಿದೆ. ಹಾಗಾದರೆ ಎಸ್ಸಿ ಸಾಮಾನ್ಯದಡಿ 38 ನೇ ವಾರ್ಡಿನ ವಿ.ಕುಬೇರ, 35 ನೇ ವಾರ್ಡಿನ ಶ್ರೀನಿವಾಸುಲು ಮಿಂಚು, ಮಹಿಳಾ ಕೋಟಾದಡಿ ಮಾಜಿ ಉಪ ಮೇಯರ್ 7 ನೇ ವಾರ್ಡಿನ ಉಮದೇವಿ ಶಿವರಾಜ್, 4 ನೇ ವಾರ್ಡಿನ ಡಿ.ತ್ರಿವೇಣಿ, 29 ನೇ ವಾರ್ಡಿನ
ಶಿಲ್ಪ, 31ನೇ ವಾರ್ಡಿನ ಶ್ವೇತ ಅವರು ಸ್ಪರ್ಧೆ ಮಾಡಬಹುದಾಗಿದೆ.
ಈ ಬಾರಿಯೂ ಮಹಿಳೆಯರಿಗೇ ಕೊಡುವುದು ಸರಿಯಲ್ಲ ಎಂದು ನಿರ್ಧರಿಸಿದರೆ. ಪುರುಷರ ಲೆಕ್ಕಾ ಚಾರಕ್ಕೆ ಬಂದರೆ ಪಕ್ಷೇತರರಾಗಿ ಗೆದ್ದಿರುವ ಶ್ರೀನಿವಾಸುಲು ಮಿಂಚು, ಕಾಂಗ್ರೆಸ್ ನಿಂದ ಗೆದ್ದಿರುವ ಮಿಂಚು ಸಹೋದರ ವಿ.ಕುಬೇರ್ ಅವರು ಮಾತ್ರ ಅರ್ಹರಿದ್ದು. ಬಹುತೇಖ ಕುಬೇರ ಅವರ ಆಯ್ಕೆ ಖಚಿತವಾಗಬಹುದು.