
ಚಿತ್ತಾಪೂರ:ಮಾ.13: ಸುಮಾರು 40 ವರ್ಷಗಳಿಂದ ಕೋಲಿ ಕಬ್ಬಲಿಗ ಸಮಾಜದ ಬೇಡಿಕೆಗಳು ಈಡೇರಿಸದ ಕೇಂದ್ರ ಸರ್ಕಾರ ವಿರುದ್ಧ ಮಾರ್ಚ.20 ರಂದು ಕಲಬುರಗಿ ಚಲೋ ಎಂಬ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೋಲಿ ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿ ಅಧ್ಯಕ್ಷ ಲಚ್ಚಪ್ಪ ಜಮಾದಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಎಸ್ ಟಿ ಹೋರಾಟ ಸಮಿತಿ ವತಿಯಿಂದ ಕೋಲಿ ಕಬ್ಬಲಿಗ ಜಾತಿಗಳಿಗೆ ಎಸ್ ಟಿ ಯಲ್ಲಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ “ಕಲಬುರಗಿ ಚಲೋ” ಬೃಹತ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಸಮಾಜದ ಕುಲ ಶಾಸ್ತ್ರೀಯ ಅಧ್ಯಯನ ಮುಗಿದರೂ ಅದನ್ನು ಇನ್ನೂ ಸಮಾಜವನ್ನು ಎಸ್ ಟಿಗೆ ಸೇರ್ಪಡೆಯಾಗಿಲ್ಲ ಕೇಂದ್ರ ಸರ್ಕಾರ ಗಣ್ಯರು ಬರಿ ಹರಕೆ ಉತ್ತರ ನೀಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾರ್ಚ್ 20ರಂದು ಜಗತ್ ವೃತ್ತದಿಂದ ತಿಮ್ಮಪುರ ವೃತ್ತದಿಂದ ಡಿಸಿ ಕಛೇರಿಯ ವರೆಗೆ ನಡೆಯಲಿರುವ ಕಲಬುರಗಿ ಚಲೋ ಎಂಬ ಬೃಹತ ಪ್ರತಿಭಟನೆಗೆ ಕೋಲಿ ಕಬ್ಬಲಿಗ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ,ರಾಮಲಿಂಗ ಬಾನರ್, ಹಣಮಂತ ಸಂಕನೂರ, ರಾಮಲಿಂಗ, ದೇವಿಂದ್ರ ಅರಣಕಲ್, ಭೀಮಣ್ಣ ಹೊತ್ತಿನಮಡಿ, ಚಂದ್ರು ಕಾಳಗಿ, ಶಿವಪ್ಪ, ನಾಗೇಂದ್ರ ಜೈಗಾಂಗ, ಮಹಾದೇವಪ್ಪ ಇಟಗಾ, ದೇವಿಂದ್ರ, ವಿಜಯಕುಮಾರ ಸಣ್ಣೂರ್, ಸೆರಿದಂತೆ ಇತರರು ಇದ್ದರು.