ಮಾ.19 ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ

ಮಾಗಡಿ, ಮಾ,೧೦-ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಡಾ; ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಲೋಕಾರ್ಪಣೆ ಮಾಡಲು ತಾಲೂಕಿನ ಎಲ್ಲಾ ದಲಿತ ಸಮುದಾಯದ ಮುಖಂಡುಗಳ ಸಲಹೆ ಸೂಚನೆಗಳನ್ನು ಪಡೆಯಲು ಶಾಸಕ ಎ.ಮಂಜುನಾಥ್ ಅವರು ಸಭೆ ಕರೆದಿದ್ದು ಸಭೆಯಲ್ಲಿ ಶಾಸಕ ಎ. ಮಂಜುನಾಥ್ ಮಾತನಾಡಿ, ಇದೇ ೧೯ ರ ಭಾನುವಾರ ಡಾ: ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯನ್ನು ಲೋಕಾರ್ಪಣೆ ಗೊಳಿಸಿಲು ದಲಿತ ಮುಖಂಡರುಗಳು ತೀರ್ಮಾನಿಸಿದ್ದಾರೆ.ಮಾಗಡಿ ಪಟ್ಟಣದಲ್ಲಿ ಅಂಬೇಡ್ಕರ್ ಹಬ್ಬವನ್ನು ಮಾಡಲಾಗುವುದು ಎಂದ ಅವರು ದಲಿತ ಮುಖಂಡರ ಆಶಯದಂತೆ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಅವರ ಮರಿ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಸಹ ಆಹ್ವಾನಿಸಲಾಗುವುದು ಜೊತೆಗೆ ಕವಿ ಸಿದ್ದಲಿಂಗಯ್ಯ ಅವರ ಪತ್ನಿ, ಕೆ.ಬಿ. ಸಿದ್ದಯ್ಯ ಅವರ ಕುಟುಂಬದವರು, ಕೆ.ಶಿವರಾಂ, ಧ್ರುವನಾರಾಯಣ್,ಎಲ್ಲಾ ದಲಿತ ಸಮುದಾಯಗಳ ಗುರುಗಳನ್ನು ಹಬ್ಬಕ್ಕೆ ಆಹ್ವಾನಿಸುವುದರ ಜೊತೆಗೆ ಮಾಜಿ ಮುಖ್ಯಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ. ಮಾಜಿ ಉಪ ಮುಖ್ಯ ಮಂತ್ರಿಗಳಾದ.ಪರಮೇಶ್ವರ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಶಾಸಕರಾದ ಎಚ್.ಸಿ. ಬಾಲಕೃಷ್ಣ ಸೇರಿದಂತೆ ಇನ್ನು ಹತ್ತಾರು ಗಣ್ಯರು ವೇಧಿಕೆ ಹಂಚಿಕೊಳ್ಳಲಿದ್ದು ತಾಲೂಕಿನ ಜನತೆ ಪಕ್ಷಬೇಧ ಮರೆತು ಅಂಬೇಡ್ಕರ್ ಅವರ ಹಬ್ಬವನ್ನು ಆಚರಣೆ ಮಾಡೋಣ ಎಂದ ಅವರು ದಲಿತ ಮುಖಂಡರ ಮನವಿಯಂತೆ ಡಾ: ಬಾಬು ಜಗಜೀವನ ರಾಂ ಅವರ ಭವನ ನಿರ್ಮಾಣಕ್ಕೆ ನೀವೇಷನ ಬೇಕು ಎಂಬುದರ ಬಗ್ಗೆ ಮಾತನಾಡಿ ತಾಲೂಕು ಗ್ರಂಥಾಲಯದ ಪಕ್ಕದಲ್ಲಿರುವ ಬಾಲಕಿಯರ ವಸತಿನಿಲಯವನ್ನು ನಿಗಧಿ ಪಡಿಸಿ ಅಲ್ಲಿರುವ ವಿದ್ಯಾರ್ಥಿಗಳನ್ನು ಹೊಸಪೇಟೆ ಬಳಿಯಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿನಿಲಯಕ್ಕೆ ಸ್ಥಳಾಂತರಿಸಲಾಗುವುದು ಹಾಗೆಯೇ ಅಂಬೇಡ್ಕರ್ ಸಮುದಾಯ ಭವನವನ್ನು ದುರಸ್ಥಿಗೊಳಿಸುವಂತೆ ಸೂಚಿಸಿದ್ದು, ಡಾ: ಶಿವಕುಮಾರ ಸ್ವಾಮಿಜಿ ಆಡಿಟೋರಿಯಂ ಲೋಕಾರ್ಪಣೆ ಗೊಂಡ ನಂತರ ಅಂಬೇಡ್ಕರ್ ಭವನವನ್ನು ನೆಲಸಮ ಗೊಳಿಸಿ ನೂತನವಾದ ಭವನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಕಳೆದ ಒಂದುವರ್ಷ ದಿಂದ ದಲಿತರ ಗಮನ ಇಲ್ಲದ ಶಾಸಕರು ಚುನಾವಣೆ ಸಮೀಪವಾಗುತ್ತಿದ್ದಂತೆ ಪಟ್ಟಣದ ಪುರಸಭೆ ಮುಂಬಾಗದಲ್ಲಿ ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಮಾಡಿ ದಲಿತರ ಮತ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ದಲಿತ ಮುಖಂಡ ಸುಗ್ಗನಹಳ್ಳಿ ಕುಮಾರ್ ಆರೋಪಿಸಿದರು.
ಕೆಲವರು ನಾವು ಮಾಡುತ್ತಿರುವ ಅಭಿವೃದ್ಧಿಯನ್ನು ಸಹಿಸಲಾಗದವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ನಾನು ಯಾವುದೇ ಚುನಾವಣೆ ಮುಂದಿಟ್ಟುಕೊಂಡು ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡುತ್ತಿಲ್ಲ ಹಾಗೇಯೇ ಯಾವುದೇ ಸರಕಾರಿ ಅನುದಾನ ಬಳಕೆ ಮಾಡದೆ ನನ್ನ ವಯಕ್ತಿಕ ಖರ್ಚಿನಿಂದ ಕಾಮಗಾರಿ ಮಾಡಿಸುತ್ತಿದ್ದೇನೆ, ತಾಲೂಕಿನಲ್ಲಿ ಎಲ್ಲಿಯೂ ಅಂಬೇಡ್ಕರ್ ಅವರ ಪುತ್ಥಳಿ ಇಲ್ಲ ಹಾಗಾಗಿ ಪುರಸಭೆ ಮುಂಬಾಗದಲ್ಲಿ ಭಗವಂತನ ನಿರ್ಣಯದಿಂದ ನಾನು ಮಾಡುತ್ತಿದ್ದೇನೆ ಅಷ್ಟೇ, ಶಾಸಕ ಎ.ಮಂಜುನಾಥ್.
ಪೋಟೊ ೯ ಎಂಜಿಡಿ ೧: ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಡಾ: ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಬಗ್ಗೆ ಶಾಸಕ ಎ.ಮಂಜುನಾತ್ ನೇತ್ರತ್ವದಲ್ಲಿ ಆಯೋಜನೆ ಮಾಡಿದ್ದ ಸಭೆ.