ಮಾ 19ಕ್ಕೆ ಮಹಿಳಾ ದಿನಾಚರಣೆ


ನರೇಗಲ್ಲ,ಮಾ.18: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಎಂಸಿಎಸ್ ಶಾಲೆಯ ಆವರಣದಲ್ಲಿ ಮಾ.19 ರಂದು ಭಾನುವಾರ ಸಂಜೆ 4ಗಂಟೆಗೆ ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಚಲವಾದಿ ಹೇಳಿದರು `ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ ಭಾನುವಾರ ಸಂಜೆ ನಡೆಯುವ ಮಹಿಳಾ: ದಿನಾಚರಣೆ ಕಾರ್ಯಕ್ರವನ್ನು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಮಂಜುಳಾ ಅನಿಲರಾದ ಉದ್ಘಾಟಿಸಲಿದ್ದಾರೆ. ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಚಲವಾದಿ ಅಧ್ಯಕ್ಷತೆ ವಹಿಸುವರು, ಸಂಯುಕ್ತಾ . ಬಂಡಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು, ಸುಜಾತಾ ಸಂಗನಾಳಮಠ, ಅರ್ಚನಾ ಕೊಂಡಿ, ನಿರ್ಮಲಾ ನವಲಗುಂದ, ಲೀಲಾವತಿ ಹೊನ್ನಲ, ಉಮಾ ಮ್ಯಾಕಲ್, ಲೀಲಾ ಸವಣೂರ, ಕವಿತಾ, ಗುರುವಡೆಯರ, ದೇವಮ್ಮ ಹೊನ್ನಪ್ಪಗೌಡ, ಲಲಿತಾ ಪಲ್ಲೇದ, ಫಕೀರವ್ವ ವಾಲ್ಮೀಕಿ, ಕಸ್ತೂರಿಬಾಯಿ ಪಾಟೀಲ, ಲಕ್ಷ್ಮವ್ವ , ಬಂದಪ್ಪಗೌಡ, ಅಭಿಲಾಶಾ ಚಿಕ್ಕೊಪ್ಪ, ಬಸಮ್ಮ ಮಾಲಗಿತ್ತಿಮಠ, ಸುಮಂಗಲಾ ಅಯ್ಯನಗೌಡ್ರ,ಮಹಾದೇವಿ ಮಲ್ಲನಗೌಡ್ರ, ಅರ್ಷಿತಾ ಕೊಪ್ಪದ, ವಿಜಯಲಕ್ಷ್ಮಿ, ದಿಂಡೂರ, ರೇಖಾ. ವೀರಾಪೂರ, ಅನ್ನಪೂರ್ಣ ನಾಯ್ಕರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಾಧಕರಿಗೆ ಸನ್ಮಾನ, ಮಹಾನ ಪಾಟೀಲ .ತಂಡದಿಂದ ಸಂಗೀತ, ಈ ಕನ್ನಡ ಕಾಮೀಡಿ ಕೀಟಗಳ ಉಮೇಶ ಕಿನ್ನಾಳ ತಂಡದ ವತಿಯಿಂದ ಹಾಸ್ಯ, ಬೆಂಗಳೂರಿನ ಹೆಜ್ಜೆನಾದ ತಂಡದಿಂದ ನೃತ್ಯ, ಗೋಪಿ: ಅವರಿಂದ ಮಿಮಿಕ್ರಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವದು, ಎಲ್ಲರೂ ಪಾಲ್ಗೊಂಡು ಕಾರ್ಯಾವನ್ನು ಯಶಸ್ವಿ ಮಾಡಬೇಕು ಎಂದರು. ಈ ಸಂಧರ್ಭದ ಜ್ಯೋತಿ ರಾಯಪ್ಪಗೌಡ, ವಿಶಾಲಾಕ್ಷಿ ಹೊಸಮನಿ ಸುಮಿತ್ರಾ, ಕಮಲಾಪೂರ, ಮಂಜುಳಾ, ಹುರುಳಿ, ಬಸೀರಾಭಾನು ಸದಾಫ ¸ ಇದ್ದರು.