ಮಾ 18 ರಿಂದ ಮೂರ್ತಿ ಪ್ರತಿಷ್ಠಾಪನೆ, ಜಾತ್ರಾ ಮಹೋತ್ಸವ ಕಾರ್ಯಕ್ರಮ

ಹುಬ್ಬಳ್ಳಿ,ಮಾ13: ನಗರದ ಯಲ್ಲಾಪುರ ಓಣಿಯಲ್ಲಿ ಗ್ರಾಮ ದೇವತೆಯ ಉತ್ಸವ ಸಮಿತಿಯಿಂದ ಗ್ರಾಮದೇವಿಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾಮಹೋತ್ಸವ ಅಂಗವಾಗಿ ಮಾ. 18 ರಿಂದ 23 ರವರ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಪರ್ವತಪ್ಪ ಬಳಗಂಣ್ಣವರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 14 ರಿಂದ 17 ರ ವರೆಗೆ ನಿತ್ಯ ಸಂಜೆ 5.30 ಕ್ಕೆ ಮಣಕವಾಡದ ಅಭಿನವ ಮೃತ್ಯಂಜಯ ಸ್ವಾಮೀಜಿ ಪ್ರವಚ ನಡೆಸಲಿದ್ದಾರೆ. ಮಾ. 18 ರಂದು ಬೆಳಿಗ್ಗೆ 9 ಗಂಟೆಗೆ ಶೋಭಾಯಾತ್ರೆ ನೆರವೇರಲಿದ್ದು, ಪೆÇಲೀಸ್ ಆಯುಕ್ತ ರಮನ್ ಗುಪ್ತಾ ಚಾಲನೆ ನೀಡುವರು. ವಿವಿಧ ಕಲಾ ತಂಡ ಶೋಭಾಯಾತ್ರೆಯಲ್ಲಿ ಭಾಗವಹಿಸುವರು ಎಂದರು.
ಅಂದು ಸಂಜೆ 5.30 ಕ್ಕೆ ಜಾತ್ರಾಮಹೋತ್ಸವ ವೇದಿಕೆ ಸಮಾರಂಭ ನಡೆಯಲಿದೆ. ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ, ಆರ್.ಎಸ್.ಎಸ್. ಹಿರಿಯ ಪ್ರಚಾರಕ ಸು. ರಾಮಣ್ಣ, ಅತಿಥಿಯಾಗಿ ಸಾಹೇಬಗೌಡ ಪೆÇಲೀಸ್ ಪಾಟೀಲ, ರಮೇಶ ಜಿ.ಕೆ ಭಾಗವಹಿಸುವರು. ಮಾ.19 ರಂದು ಸಂಜೆ 5.30 ಕ್ಕೆ ದಿವ್ಯ ಸಾನಿಧ್ಯ ಎರೆತ್ತಿನ ಮಠದ ಸಿದ್ಧಲಿಂಗ ಸ್ವಾಮೀಜಿ, ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ರಮೇಶ ಬಾಫಣಾ ಭಾಗವಹಿಸುವರು ಎಂದರು.
ಮಾ. 19 ರಂದು ಬೆಳಿಗ್ಗೆ 9 ಗಂಟೆಗೆ ದೇವಿಯರ ಶುದ್ಧಿಕರಣ, ಹೋಮ ಹವನ ಹಾಗೂ ಪೂಜಾ ವಿಧಿವಿಧಾನ, ಸಂಜೆ 5.30 ಕ್ಕೆ ಪ್ರವಚನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಮಾರಂಭ ನಡೆಯಲಿದೆ. ಮಾ. 20 ರಂದು ಬೆಳಿಗ್ಗೆ 5.30 ಕ್ಕೆ ಉಡಿತುಂಬುವ ಕಾರ್ಯ, ಮಾ. 21 ರಂದು ಮಧ್ಯಾಹ್ನ 2 ಕ್ಕೆದೇವಿಯರ ಭವ್ಯ ಮೂರ್ತಿ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಮಾ.22 ರಂದು ಯುಗಾದಿ ಪಾಡ್ಯದಂದು ಬೆಳಿಗ್ಗೆ 4 ಗಂಟೆಗೆ ಚಂಡಿಕಾ ಹೋಮ, ಬೆಳಿಗ್ಗೆ 5.30 ಕ್ಕೆ ದೇವಿ ಮೂರ್ತಿ ಪ್ರತಿಷ್ಠಾಪನೆ ರವೀಂದ್ರ ಆಚಾರ್ಯ ಹಾಗೂ ಸಂಗಡಿಗರಿಂದ ನಡೆಯಲಿದೆ. ರಾಜಶೇಖರ ಶಿವಾಚಾರ್ಯ ಭಾಗವಹಿಸುವರು.
ಬಸವರಾಜ ಚನ್ನೋಜಿ, ಬಸವರಾಜ ಕುಂದನಹಳ್ಳಿ, ಈರಣ್ಣ ಇಂಗಳಹಳ್ಳಿಮಠ, ಸಂದೀಪ ಶಿರಸಂಗಿ ಇದ್ದರು.