ಮಾ. 18ರಿಂದ ಮೂಕಪ್ಪ ಸ್ವಾಮಿಗಳ ಜಾತ್ರಾ ಮಹೋತ್ಸವ

ಬ್ಯಾಡಗಿ,ಮಾ16: ತಾಲೂಕಿನ ಸುಕ್ಷೇತ್ರ ಗುಡ್ಡದಮಲ್ಲಾಪುರ ಗ್ರಾಮದ ಷ.ಬ್ರ. ಶ್ರೀ ಮೂಕಪ್ಪ ಸ್ವಾಮಿಗಳ ಜಾತ್ರಾ ಮಹೋತ್ಸವ, ಶಿವಾನುಭವ ಸಮ್ಮೇಳನ ಹಾಗೂ ಹಿರಿಯ ಮೂಕಪ್ಪ ಸ್ವಾಮಿಗಳ 11ನೇ ವರ್ಷದ ನಾಣ್ಯಗಳ ತುಲಾಭಾರ ಕಾರ್ಯಕ್ರಮವು ಇದೇ ದಿ. 18 ರಿಂದ 20 ರವರೆಗೆ ಜರುಗಲಿದೆ.

ದಿ.18ರಂದು ಬೆಳಿಗ್ಗೆ 8ಗಂಟೆಗೆ ಶ್ರೀಮದ್ ವೀರಶೈವ ಪಂಚಾಚಾರ್ಯ ಧ್ವಜಾರೋಹಣವನ್ನು ದಾಸೋಹಮಠದ ಧರ್ಮಾಧಿಕಾರಿ ವೇ.ಮೂ. ಹುಚ್ಚಯ್ಯಸ್ವಾಮಿಗಳು ನೆರವೇರಿಸುವರು. ಮೂಕಪ್ಪ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಷ.ಬ್ರ. ಶ್ರೀ ಗುರುಹುಚ್ಚೇಶ್ವರ ಶಿವಾಚಾರ್ಯ ಸ್ವಾಮೀಜಿ ಪುಣ್ಯತಿಥಿ ಅಂಗವಾಗಿ ಕರ್ತೃ ಗದ್ದುಗೆಗೆ 101ಆಕಳಿನ ಕ್ಷೀರಾಭಿಷೇಕ ನಡೆಯುವುದು. ಮಧ್ಯಾಹ್ನ ಮಹಾ ಗಣರಾಧನೆ ಪ್ರಸಾದ ವಿತರಣೆ ನಡೆಯಲಿದೆ.

ದಿ.19ರಂದು ಬೆಳಿಗ್ಗೆ 8ಗಂಟೆಗೆ ಹರಗುರು, ಚರಮೂರ್ತಿಗಳೊಂದಿಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಹಾಗೂ ಮೂಕಪ್ಪ ಶಿವಾಚಾರ್ಯ ಸ್ವಾಮಿಗಳ ಉತ್ಸವ, ಗುಗ್ಗುಳವು ಸಕಲ ಮಂಗಳ ವಾದ್ಯಗಳೊಂದಿಗೆ ನಡೆಯುವುದು. ಅಂದು ಸಂಜೆ 6ಗಂಟೆಗೆ ಮರಿಕಲ್ಯಾಣ ಭಾಗದ 67ನೇ ಶಿವಾನುಭವ ಸಮ್ಮೇಳನ ಹಾಗೂ ಷ ಬ್ರ. ಶ್ರೀ ಹಿರಿಯ ಮೂಕಪ್ಪ ಶಿವಾಚಾರ್ಯ ಸ್ವಾಮಿಗಳ 11ನೇ ವರ್ಷದ ನಾಣ್ಯಗಳ ತುಲಾಭಾರ ಕಾರ್ಯಕ್ರಮವು ಶ್ರೀಮಠದ ಸದ್ಭಕ್ತರಿಂದ ಜರುಗುವುದು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡೆನಂದಿಹಳ್ಳಿ ತಪೆÇೀಕ್ಷೇತ್ರದ ಷ.ಬ್ರ. ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೆರವೇರಿಸುವರು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಗಣ್ಯರು ಆಗಮಿಸುವರು ಎಂದು ಶ್ರೀಮಠದ ಧರ್ಮಾಧಿಕಾರಿ ವೇ.ಮೂ. ಹುಚ್ಚಯ್ಯ ಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.