ಮಾ.16ರಂದು ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ.


ಸಂಜೆವಾಣಿ ವಾರ್ತೆ
 ಹರಪನಹಳ್ಳಿ.ಮಾ.13; ಬಿಜೆಪಿ ಮಂಡಲ ನೂತನ ಅಧ್ಯಕ್ಷ ಕೆ.ಲಕ್ಷ್ಮಣ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮಾ.16ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಬಿಜೆಪಿ ವಿಜಯನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜೀವರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದಿನ ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕ ಬೈರತಿ ಬಸವರಾಜ, ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ ರಾಜ್ಯ ನಾಯಕರು ಆಗಮಿಸುತ್ತಾರೆ, ಹರಪನಹಳ್ಳಿಯಲ್ಲಿ ಈವರೆಗೂ ನಿಲುಗಡೆಯಾಗಿದ್ದ ಪಕ್ಷದ ಚಟುವಟಿಕೆಗಳು ಪುನಾರಂಭವಾಗುತ್ತವೆ, ಈ ಕಾರ್ಯಕ್ರಮಕ್ಕೆ ಇಲ್ಲಿಯ ಮಾಜಿ ಶಾಸಕ ಜಿ.ಕರುಣಾಕರರೆಡ್ಡಿಯವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ವ್ಯತ್ಯಾಸ ಆಗಿರಬಹುದು, ಕೆಲವರಿಗೆ ನೋವು ಆಗಿರಬಹುದು, ಕೆಲವರಲ್ಲಿ ಭಿನ್ನಾಭಿಪ್ರಾಯವ ಇರಬಹುದು ಇವೆಲ್ಲಾ ಸರಿಪಡಿಸುವ ಕೆಲಸವನ್ನು ರಾಜ್ಯ ಮುಖಂಡರು ಮಾಡುತ್ತಾರೆ ಎಂದು ಹೇಳಿದರು.
ಗ್ರಾಮ ಚಲೋ ಅಭಿಯಾನ, ಬೂತ್‍ಗೆ ಒಬ್ಬ ಕಾರ್ಯಕರ್ತನ ನೇಮಕ, ಪ್ರತಿ ಗ್ರಾ.ಪಂಗೆ ವಾಟ್ಸಪ್ ಗ್ರೂಪ್ ರಚನೆ, ಗೋಡೆ ಬರಹ ಕೆಲಸದಲ್ಲಿ ಹರಪನಹಳ್ಳಿ ಮಂಡಲ ಘಟಕ ರಚನೆ ತಡವಾಯಿತು, ಇಂತಹ ಸಂದರ್ಭದಲ್ಲಿ ರಾಜ್ಯದ್ಯಾಕ್ಷರ ಸೂಚನೆ ಮೇರೇಗೆ ಕುಡುಚಿ ಮಾಜಿ ಶಾಸಕ ಪಿ.ರಾಜೀವ ಇಲ್ಲಿಗೆ ಬಂದು ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿ ರಾಜ್ಯದ್ಯಕ್ಷರ ಗಮನಕ್ಕೆ ತಂದರು ನಂತರ ಹರಪನಹಳ್ಳಿ ಮಂಡಲ ಅಧ್ಯಕ್ಷರನ್ನಾಗಿ ಕೆ.ಲಕ್ಷ್ಮಣ ಅವರನ್ನು ನೇಮಕ ಮಾಡಲಾಯಿತು ಎಂದು ಅಧ್ಯಕ್ಷರ ನೇಮಕ ಕುರಿತು ಮಾಹಿತಿ ನೀಡಿದರು.
ಗ್ಯಾರಂಟಿಗಳ ಹಾಗೂ ಸುಳ್ಳು ಭರವಸೆಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರಲ್ಲಿ ನಿರ್ಲಿಪ್ತಾ ಭಾವನೆ ಇತ್ತು, ಬಿ.ವೈ.ವಿಜಯೇಂದ್ರ ಪಕ್ಷದ ಚುಕ್ಕಾಣಿ ಹಿಡಿದ ನಂತರ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದು ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ ಎಂದು ಹೇಳಿದರು.
ರಾಜಿನಾಮೆ ಅಂಗೀಕಾರ: ಈಚೆಗೆ ನೂತನವಾಗಿ ರಚನೆಯಾಗಿದ್ದ ಇಲ್ಲಿಯ ಮಂಡಲ ಘಟಕದ ಹಾಗೂ ಜಿಲ್ಲಾ ಘಟಕಕ್ಕೆ ನೇಮಕವಾಗಿದ್ದ ಆರ್.ಲೋಕೇಶ, ಮತ್ತಿಹಳ್ಳಿ ಕೊಟ್ರೇಶ, ಮನೋಜ್ ತಳವಾರ, ಯು.ಎನ್.ಪ್ರವೀಣ ಅವರು ತಮ್ಮ ಸ್ಥಾನಗಳಿಗೆ ನೀಡಿದ ರಾಜಿನಾಮೆಗಳನ್ನು ಜಿಲ್ಲಾದ್ಯಕ್ಷರು ಅಂಗೀಕರಿಸಿದ್ದಾರೆ, ಶೀಘ್ರವೇ ಖಾಲಿಯಾದ ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡಲಾಗುವುದು ಎಂದರು.
ಬಿಜೆಪಿ ಮಂಡಲ ಘಟಕದ ನೂತನ ಅಧ್ಯಕ್ಷ ಕೆ.ಲಕ್ಷ್ಮಣ್ ಮಾತನಾಡಿ ಕಳೆದ 32 ವರ್ಷದಿಂದ ಬಿಜೆಪಿ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ, ನನ್ನ ಸೇವೆ ಗುರುತಿಸಿ ಕೊಟ್ಚ ಹುದ್ದೆಗಳನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದೇನೆ, ಈ ಹಿಂದೆ ಕಾರಣಾಂತರದಿಂದ ಅದ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದೆ, ಈಗ ಪುನಃ ಮಂಡಲ ಅಧ್ಯಕ್ಷ ಮಾಡಿದ್ದಾರೆ, ರಾಜ್ಯ, ಜಿಲ್ಲಾ ಹಾಗೂ ಸ್ಥಳೀಯ ಮುಖಂಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ಸಹಕಾರ ಬ್ಯಾಂಕ್ ಅಧ್ಯಕ್ಷ ಜಿ.ನಂಜನಗೌಡ, ಜಿಲ್ಲಾ ಪ್ರ.ಕಾರ್ಯದರ್ಶಿ ಕೆ.ರಾಘವೇಂದ್ರ, ಹರಪನಹಳ್ಳಿ ಉಸ್ತುವಾರಿ ಬಲ್‍ಹುಣಸಿ ರಾಮಣ್ಣ, ಜಿಲ್ಲಾ ಕಾರ್ಯದರ್ಶಿ ಕುಸುಮಾ, ಪುರಸಭಾ ಮಾಜಿ ಅಧ್ಯಕ್ಷ ಎಚ್.ಎಂ.ಅಶೋಕ, ಕಣವಿಹಳ್ಳಿ ಮಂಜುನಾಥ, ಮಂಜ್ಯನಾಯ್ಕ, ಮುತ್ತಿಗೆ ವಾಗೀಶ, ಬಿ.ವೈ.ವೆಂಕಟೇಶನಾಯ್ಕ, ಚೆನ್ನನಗೌಡ, ಉದಯಕುಮಾರ, ಸಿಂಗ್ರಿಹಳ್ಳಿ ಮರಿಯಪ್ಪ, ಎಂ.ದ್ಯಾಮಪ್ಪ, ಕಡತಿ ರಮೇಶ, ಜಟ್ಟೆಪ್ಪ, ಕಡಕೋಳ ಸಿದ್ದಣ್ಣ ಉಪಸ್ಥಿತರಿದ್ದರು.
13ಹೆಚ್‍ಆರ್‍ಪಿ1; ಹರಪನಹಳ್ಳಿ ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.