ಮಾ.14ಕ್ಕೆ ಕಿಸಾನ್ ಮಜೂರ್ ಸಮಾವೇಶ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.06:- ಕೇಂದ್ರ ಸರಕಾರ ರೈತರ ಮೇಲೆ ನಡೆಸಿರುವ ದೌರ್ಜನ್ಯವನ್ನು ಖಂಡಿಸಿ ಮತ್ತು ಕೊಟ್ಟ ಮಾತಿನಂತೆ ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಪಿ. ನಿಗದಿ ಮಾಡಿ ಅದನ್ನು ಕಾನೂನು ಖಾತ್ರಿಗೊಳಿಸುವಂತೆ ಆಗ್ರಹಿಸಿ ಮಾ. 14ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಬೃಹತ್ ಕಿಸಾನ್ ಮಜೂರ್ ಪಂಚಾಯ್ತಿ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು. ರಾಜ್ಯದಿಂದ 2 ಸಾವಿರ ರೈತರು ನವದೆಹಲಿಗೆ ತೆರಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ನಗರದ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ನರೇಂದ್ರ ಮೋದಿಯವರ ಆಡಳಿತ 10 ವರ್ಷವನ್ನು ಸಧ್ಯದಲ್ಲೇ ಪೂರೈಸುತ್ತದೆ. ರೈತರು ದುಡಿಯುವ ವರ್ಗವನ್ನು ರಕ್ಷಿಸದೆ ಅವರ ವಿರುದ್ಧ ನೀತಿಗಳನ್ನು ರೂಪಿಸಿ ಜಾರಿಗೆ ತರುತ್ತಾ ಬೆರಳೆಣಿಕೆ ಬಂಡವಾಳ ಶಾಯಿಗಳಿಗೆ ಮಣೆ ಹಾಕಿದೆ. ನರೇಂದ್ರ ಮೋದಿಯವರ ಆಡಳಿತದಲ್ಲಿ ಇದುವರೆವಿಗೂ 1.50 ಲಕ್ಷ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020ರಿಂದ 2021ರ ನವೆಂಬರ್ ವರೆಗೆ ಕೃಷಿ ರೈತ ವಿರೋಧಿ ಮಸೂದೆಗಳ ವಿರುದ್ಧ ಹೋರಾಟವನ್ನು ಹತ್ತಿಕ್ಕಲು ಮಾಡಬಾರದ ಕೆಲಸಗಳನ್ನು ಮಾಡಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗೆ ಒಳಗಾಗಿದೆ. ಈಗ ನಡೆಯುತ್ತಿರುವ ಚಳುವಳಿಯನ್ನು ಹತ್ತಿಕ್ಕಲು ರೈತರ ಮೇಲೆ ಡೋಣ್ ದಾಳಿ ನಡೆಸಿ ಕ್ರೂರತೆ ಮೆರೆದಿದೆ. 6 ಜನರನ್ನು ಬಲಿ ತೆಗೆದುಕೊಂಡು, ನೂರಾರು ಜನಕ್ಕೆ ಗಾಯ ಉಂಟು ಮಾಡಿದೆ. ಹಿಂದೆ ನಡೆದ ಚಳುವಳಿಯಲ್ಲಿ 782 ಜನ ರೈತರ ಸಾವಿಗೆ ಕಾರಣವಾಗಿದೆ ಎಂದರು.
ಎರಡೂವರೆ ವರ್ಷಗಳ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸದೆ ರೈತರನ್ನು ವಂಚಿಸಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿ ಓಟು ಪಡೆದು ಆ ಬಗ್ಗೆ ಕಿಂಚಿತ್ತು ತಲೆ ಕೆಡಿಸಿಕೊಳ್ಳದೆ ಕೃಷಿ ಉತ್ಪನ್ನಗಳ ವೆಚ್ಚವನ್ನು ದ್ವಿಗುಣಗೊಳಿಸಿದೆ. ಉತ್ತರಪ್ರದೇಶದ ಲಖಮ್ ಪುರ ಖೇರಿಯಲ್ಲಿ ಚಳುವಳಿ ನಿರತ ರೈತರ ಮೇಲೆ ವಾಹನಹರಿಸಿ ರೈತರನ್ನು ಬಲಿ ತೆಗೆದುಕೊಂಡು ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿರುವ ಅಜಯ್ ಮಿಶ್ರಾ ತೇನಿಗೆ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲು ಮುಂದಾಗಿದೆ ಎಂದು ಹೇಳಿದರು.
ಗ್ರಾಮೀಣ ಜನರಿಗೆ 100 ದಿನ ಉದ್ಯೋಗ ಖಾತ್ರಿಗೊಳಿಸಲು ರೂಪಿಸಿದ್ದ “ಮಹಾತ್ಮಗಾಂಧಿ ನರೇಗ ಯೋಜನೆ”ಯ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿತ ಮಾಡಿ ಕೇವಲ 44 ದಿನಗಳಿಗೆ ಇಳಿಸಿ ದುಡಿಯುವ ಜನರ ಉದ್ಯೋಗವನ್ನು ಕಿತ್ತಿಕೊಂಡಿದೆ. ದುಡಿದ ಜನರಿಗೆ ನೀಡಬೇಕಾದ ಹಣವನ್ನು ನೀಡಲು ಸತಾಯಿಸುತ್ತಿದೆ. ದುಡಿಯುವ ರೈತರ ಸಾಲವನ್ನು ಮನ್ನಾ ಮಾಡಿದರೆ ಖಜಾನೆ ಖಾಲಿಯಾಗುತ್ತದೆ ಎಂದು ಹೇಳುವ ನರೇಂದ್ರ ಮೋದಿಯವರು ತಮ್ಮ 10 ವರ್ಷದ ಆಡಳಿತದಲ್ಲಿ ಕಾಪೆರ್Çೀರೇಟ್ ಕುಳಗಳ ಸುಮಾರು 20 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಮಾ. 6ರಂದು ಚಿತ್ರದುರ್ಗದಲ್ಲಿ ಕಿಸಾನ್ ಮನ್ಸೂರ್ ಪಂಚಾಯ್ ದೆಹಲಿ ಹೋರಾಟವನ್ನು ಬೆಂಬಲಿಸಿ ಮಾ. 16ರಂದು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯು ಚಿತ್ರದುರ್ಗದಲ್ಲಿ ಕಿಸಾನ್ ಮಜೂರ್ ಪಂಚಾಯ್ ಆಯೋಜಿಸಿದೆ ಎಂದರು.
ಹೊಸಕೋಟೆ ಬಸವರಾಜು, ಪ್ರಸನ್ನ ಎನ್ ಗೌಡ, ಪಿ.ಮರಂಕಯ್ಯ ಇನ್ನಿತರರು ಉಪಸ್ಥಿತರಿದ್ದರು.