ಮಾ. 13 ರಂದು ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಸಮಾವೇಶ: ಸಾರಿಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯ

ಕಲಬುರಗಿ:ಮಾ.12:ಕಲಬುರಗಿಯಲ್ಲಿ ಮಾರ್ಚ್ 13 ರಂದು ಜರುಗಲಿರುವ ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮಕ್ಕೆ ನಿಗಮದಿಂದ ಸುಮಾರು 143 ವಾಹನಗಳನ್ನು ಕರಾರು ಒಪ್ಪಂದದ ಮೇಲೆ ಒದಗಿಸಲಾಗುತ್ತಿರುವ ಪ್ರಯುಕ್ತ ಅಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸಾರಿಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಲಬುರಗಿ, ಆಳಂದ, ಜೇವರ್ಗಿ, ಯಡ್ರಾಮಿ, ಹಾಗೂ ಅಫಜಲಪೂರ ತಾಲೂಕುಗಳ ಸಾರ್ವಜನಿಕ ಪ್ರಯಾಣಿಕರು ಇದಕ್ಕೆ ಸಹಕರಿಸಬೇಕು.

ಮಧ್ಯಾಹ್ನದ ನಂತರ ಯಥಾಪ್ರಕಾರ ಸಾರಿಗೆ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.