
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.10: ಇದೇ ತಿಂಗಳ 13ರಂದು ಬಳ್ಳಾರಿ ಜಿಲ್ಲೆಗೆ ವಿಜಯ ಸಂಕಲ್ಪಯಾತ್ರೆ ಪ್ರಾರಂಭವಾಗಲಿದ್ದು ಮೂರು ದಿನಗಳ ಕಾಲ ಅಂದರೆ ಮಾ.13, 14, ಮತ್ತು 15ರ ವರೆಗೆ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಜಯಸಂಕಲ್ಪಯಾತ್ರೆಯಲ್ಲಿ ಪ್ರಮುಖರಾಗಿ ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ್, ಶ್ರೀರಾಮುಲು, ಭಗವಂತ್ ಖೂಬಾ, ಪ್ರಭು ಚೌಹಾಣ್, ಹಾಲಪ್ಪ ಆಚಾರ್, ಅನಂದ್ ಸಿಂಗ್, ಅರವಿಂದ್ ಲಿಂಬಾವಳಿ, ಬಾಬುರಾವ್ ಚಿಂಚನಸೂರು, ಮಲಿಕೇಯ್ಯ ಗುತ್ತೇದಾರ್, ಸಿದ್ದರಾಜು, ಮಾರುತಿರಾವ್ ಮೂಳೆ ಭಾಗವಹಿಸಲಿದ್ದಾರೆ. ಇವರೊಂದಿಗೆ ಸಹ ಪ್ರಮುಖರಾದ ರಘುನಾಥ್ ರಾವ್ ಮಾಲ್ಕಾಪುರೆ, ಅಮರ್ ನಾಥ್ ಪಾಟೀಲ್, ಸಿದ್ದೇಶ್ ಯಾದವ್, ಆಗಮಿಸಲಿದ್ದಾರೆ.
ಯಾತ್ರಾ ಜಿಲ್ಲಾ ಪ್ರಮುಖರಾಗಿ ಕೆ.ರಾಮಲಿಂಗಪ್ಪ, ಕೆ.ಎಸ್.ಅಶೋಕ್ ಕುಮಾರ್, ಮಲ್ಲನಗೌಡ ಸಿರಿಗೇರಿ ಉಪಸ್ಥಿತರಿರಲಿದ್ದಾರೆ ಎಂದರು.
ಮಾ.13 ರಂದು
ಮಾ.13ರಂದು ವಿಜಯಸಂಕಲ್ಪಯಾತ್ರೆಯೂ ಗಂಗಾವತಿಯಿಂದ ಸಿರುಗುಪ್ಪ ವಿಧಾನ ಸಭಾ ಕ್ಷೇತ್ರದ ಹಿಬ್ರಾಹಿಂಪುರ ಗ್ರಾಮಕ್ಕೆ ಆಗಮಿಸಲಿದೆ. ಅಂದು ಸಂಜೆ 5 ರಿಂದ 6 ಗಂಟೆ ಸಮಯದಲ್ಲಿ ಹಿಬ್ರಾಹಿಂಪುರ ಗ್ರಾಮದಲ್ಲಿ ದಿಂದ ಸಿರುಗುಪ್ಪವರೆಗೆ ಬೈಕ್ ಱ್ಯಾಲಿಯಲ್ಲಿ ಸ್ವಾಗತಿಸಲಾಗುವುದು. 6 ಗಂಟೆಗೆ ಸಿರುಗುಪ್ಪದಲ್ಲಿ ಸಾರ್ವಜನಿಕ ಸಭೆ ಜರುಗುವುದು. ನಂತರ ಅಲ್ಲಿಯೇ ವಾಸ್ತವ್ಯ ಇರಲಿದೆ.
ಮಾ.14ರಂದು
ಮಾ.14ರಂದು ಬೆಳಿಗ್ಗೆ 9 ಗಂಟೆಗೆ ತೆಕ್ಕಲಕೋಟೆಯಲ್ಲಿ ಉಪಹಾರ, ನಂತರ ಪತ್ರಿಕಾಗೋಷ್ಠಿ ಜರುಗಲಿದೆ. ಬೆಳಿಗ್ಗೆ 10.15ರಿಂದ ಕುರುಗೋಡು ಕಡೆಗೆ ಪ್ರಯಾಣ ಸಾಗಲಿದೆ. ಬೆಳಿಗ್ಗೆ 11.30ಕ್ಕೆ ಕೋಳೂರು ಕ್ರಾಸ್ ನಿಂದ ಕುರುಗೋಡುವರೆಗೆ ಬೈಕ್ ಱ್ಯಾಲಿ ನಂತರ ಕುರುಗೋಡಿನಲ್ಲಿ ರೋಡ್ ಶೋ ಜರುಗುವುದು. ಮಧ್ಯಾಹ್ನ 12.30ಕ್ಕೆ ಕುರುಗೋಡು ದೇವಸ್ಥಾನಕ್ಕೆ ಭೇಟಿ ನಂತರ ಭೋಜನ, ಮಧ್ಯಾಹ್ನ 2 ರಿಂದ ಪ್ರಯಾಣ ಮುಂದುವರೆಯಲಿದ್ದು, ಕೊಳಗಲ್ಲು ಗ್ರಾಮವನ್ನು ತಲುಪಲಿದೆ. ಮಧ್ಯಾಹ್ನ 3.30ಕ್ಕೆ ಕೊಳಗಲ್ಲು ಗ್ರಾಮದಲ್ಲಿ ರೋಡ್ ಶೋ, ಸಾಯಂಕಾಲ 4.15ಕ್ಕೆ ಬಳ್ಳಾರಿಯಲ್ಲಿ ರೋಡ್ ಶೋ ಜರುಗಲಿದೆ. ಅಂದೆ ಸಾಯಂಕಾಲ 5.30ರಿಂದ ದುರ್ಗಮ್ಮ ದೇವಸ್ಥಾನದಿಂದ ರಾಯಲ್ ವೃತ್ತದವರೆಗೆ ರೋಡ್ ಶೋ ಜರುವುದು.
ಮಾ.15ರಂದು
ಬೆಳಿಗ್ಗೆ ಉಪಹಾರದ ನಂತರ ವಾಜಪೇಯಿ ಲೇಔಟ್ ನ ಕಡೆಗೆ ಪ್ರಯಾಣ ಸಾಗಲಿದ್ದು, ಬೆಳಿಗ್ಗೆ 9.30ಕ್ಕೆ ವಾಜಪೇಯಿ ಲೇಔಟ್ ನ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಜರುಗಲಿದೆ. ನಂತರ ಸಂಡೂರು ವಿಧಾನಸಭಾ ಕ್ಷೇತ್ರದತ್ತ ಪ್ರಯಾಣ ಬೆಳೆಸುವುದು. ಬೆಳಿಗ್ಗೆ 10.00 ಗಂಟೆಗೆ ಕುಡುತಿನಿಗೆ ಆಗಮಿಸುವ ಯಾತ್ರೆಯು ನಂತರ ತೋರಣಗಲ್ಲಿನಲ್ಲಿ ರೋಡ್ ಶೋ ನಡೆಸಲಿದೆ. ಆ ನಂತರ ಯಶವಂತ ನಗರ ಮೇನ್ ರೋಡ್ ಗೆ ಬಂದು ಅಲ್ಲಿಂದ ವಿಜಯನಗರ ಜಿಲ್ಲೆ ಕೂಡ್ಲಿಗಿಗೆ ಸಾಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ಜಿಲ್ಲಾ ಸಂಚಾಲಕ ರಾಮಲಿಂಗಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೀರಶೇಖರರೆಡ್ಡಿ, ಮಾಧ್ಯಮ ವಿಭಾಗದ ಸಹ ಸಂಚಾಲಕ ರಾಜು ತೊಗರಿ, ಮತ್ತಿತರರು ಉಪಸ್ಥಿರಿದ್ದರು.
One attachment • Scanned by Gmail