
ಯಡ್ರಾಮಿ:ಮಾ.6:ಪಟ್ಟಣದ ಕೆಪಿ ಎಸ್ ಆವರಣದಲ್ಲಿ ಮಾರ್ಚ್ 12 ರಂದು ತಾಲೂಕ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ) ಬಣ ವತಿಯಿಂದ ಸಗರ ನಾಡು ಕೋಗಿಲೆ ಆಡಿಷನ್ ನಡೆಯಲಿದೆ ಎಂದು ವೇದಿಕೆ ಮುಖಂಡ ವಿಶ್ವನಾಥ ಜಿ ಪಾಟೀಲ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು ತಮ್ಮ ಹೆಸರಗಳು ನೋಂದಾಯಿಸಲು ಇದೆ ಮಾರ್ಚ್ 10 ರಂದು ಕೊನೆಯ ದಿನಾಂಕ ಆಗಿರುತ್ತೆ. ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರದಂತಾ ಗಾಯಕರು ಭಾಗವಹಿಸಲಿದ್ದಾರೆ.ಆಸಕ್ತರು ಭಾಗವಹಿಸಬೇಕೆಂದು ತಿಳಿಸಿದ್ದಾರೆ.