ಮಾ.12 ಕ್ಕೆ ವಿಜಯಲಕ್ಷ್ಮೀ ಫೌಂಡೇಶನ್ ನಿಂದ ನೀರಾ ಆರ್ಯ ಗ್ಯಾಲಂಟ್ರಿ ಪ್ರಶಸ್ತಿ

ಹುಬ್ಬಳ್ಳಿ.ಮಾ.7; ವಿಜಯಲಕ್ಷ್ಮೀ ಫೌಂಡೇಶನ್ (ರಿ) ಹಾಗೂ ಕಾರಟಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇವರ  ಸಹಯೋಗದೊಂದಿಗೆ ಮಾ.12 ರಂದು ಸಂಜೆ 4 ಗಂಟೆಗೆ ನಗರದ ನೇತಾಜಿ ಕಾಲೋನಿಯಲ್ಲಿರುವ ಕಾರಟಗಿ ಆಸ್ಪತ್ರೆಯ ಸಭಾಂಗಣದಲ್ಲಿಅಂತರಾಷ್ಟ್ರೀಯ ಮಹಿಳಾ‌ ದಿನಾಚರಣೆ ಪ್ರಯುಕ್ತ ನೀರಾ ಆರ್ಯ ಗ್ಯಾಲಂಟ್ರಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ನ ಡಾ.ರಾಮಚಂದ್ರ ಕಾರಟಗಿ ತಿಳಿಸಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು  ನಿವೃತ್ತ ನ್ಯಾಯಾಧೀಶರಾದ ಅರಳಿನಾಗರಾಜ್‌ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕಿಮ್ಸ್
ಆಸ್ಪತ್ರೆಯ‌ ಅಸಿಸ್ಟೆಂಟ್ ಪ್ರೊಫೆಸರ್ ಡಾ.ವೀಣಾ ಕಾರಟಗಿ,ಖ್ಯಾತ ಅರವಳಿಕೆ ತಜ್ಞರಾದಡಾ.ಪವಿತ್ರ ದಂಡಿನ್,ಮಿಸಸ್ ಇಂಡಿಯಾ ಖ್ಯಾತಿಯ ರೇಷ್ಮಾ ಫರ್ನಾಂಡೀಸ್,ಬಿಜೆಪಿ ಮಹಿಳಾ ಅಧ್ಯಕ್ಷೆ ಮೇಘನಾ ಶಿಂಧೆ ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಗುವುದು ಎಂದರು ಅವರು ತಿಳಿಸಿದ್ದಾರೆ.