ಮಾ.12ರಂದು ನೀರಾ ಆರ್ಯ ಗ್ಯಾಲೆಂಟರಿ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ,ಮಾ10: ವಿಜಯ ಲಕ್ಷ್ಮೀ ಫೌಂಡೇಶನ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ನಗರದ ನೇತಾಜಿ ಕಾಲನಿಯಲ್ಲಿರುವ ಕಾರಟಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿರುವ ಕಾರಟಗಿ ಸಭಾಂಗಣದಲ್ಲಿ ಮಾ. 12 ರಂದು ಸಂಜೆ 4 ಗಂಟೆಗೆ ನೀರಾ ಆರ್ಯ (ಗ್ಯಾಲೆಂಟರಿ) ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ನ ಸಂಸ್ಥಾಪಕ ಡಾ. ರಾಮಚಂದ್ರ ಕಾರಟಗಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡದ ಅತ್ತಿವೇರಿಯ ಬಸವಧಾಮದ ಬಸವೇಶ್ವರಿ ಮಾತಾಜಿಯವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ನಿವೃತ್ತ ನಾಯಾಧೀಶ ಅರಳಿ ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಿಮ್ಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ. ವೀಣಾ ಕಾರಟಗಿ, ಅರಿವಳಿಕೆ ತಜ್ಞೆ ಡಾ. ಪವಿತ್ರ ದಂಡಿನ, ಗ್ಲೂಕೋಮಾ ತಜ್ಞೆ ಡಾ. ವಿಜಯಲಕ್ಷ್ಮೀ ಕೋರಿ, ಪ್ರಮುಖರಾದ ಮೇಘನಾ ಶಿಂಧೆ, ರೇಷ್ಮಾ ಫರ್ನಾಂಡೀಸ್ ಆಗಮಿಸಲಿದ್ದಾರೆ. ಜಾನಪದ ತಜ್ಞ ಡಾ. ರಾಮು ಮೂಲಗಿ ಅವರಿಂದ ಜನಪದ ಸಾಹಿತ್ಯದಲ್ಲಿ ಮಹಿಳೆ ಕಾರ್ಯ ಕಾರ್ಯಕ್ರಮ ಜರುಗಲಿದೆ. ನಂತರ ಅಕ್ಷತಾ ತಂಡದವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು.
ನೀರಾ ಆರ್ಯ ನೇತಾಜಿ ಸುಭಾಷ್ ಚಂದ್ರ ಬೋಸರ ಆಪ್ತರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಅವರ ಹೆಸರಿನಲ್ಲಿ ಶೌರ್ಯ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಮೊದಲ ಬಾರಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. 9 ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್ ನ ಆಡತಾಧಿಕಾರಿ ದಿನೇಶ್ ಜೈನ್, ಸಂಯೋಜಕಿ ಸಹನಾ ಸೂಡಿ ಇದ್ದರು.