ಮಾ. 10ರಂದು “ಕಾಯಕದ ನಿಜ ನಾಯಕ” ಗ್ರಂಥ ಲೋಕಾರ್ಪಣೆ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಶಹಾಪುರ:ಮಾ.7: ಕರ್ನಾಟಕದ ಅಪರೂಪದ ರಾಜಕಾರಣಿ ಹಾಗೂ ಹೆಮ್ಮೆಯ ಜನನಾಯಕ, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರ ಬದುಕು ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲುವ, ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್ ಅವರ ಸಂಪಾದಿತ “ಕಾಯಕದ ನಿಜ ನಾಯಕ ಶರಣಬಸಪ್ಪಗೌಡ ದರ್ಶನಾಪುರ” ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಮಾರ್ಚ 10, ಶುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ಆರಬೋಳ ಕಲ್ಯಾಣ ಮಂಟಪದಲ್ಲಿ ಶರಣಬಸಪ್ಪಗೌಡ ದರ್ಶನಾಪುರ ಅವರ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಮುಖಂಡ ಸಣ್ಣನಿಂಗಪ್ಪ ನಾಯ್ಕೊಡಿ ಅವರು ತಿಳಿಸಿದರು.
ನಗರದ ಅಶ್ವಿನಿ ಸಭಾಂಗಣದಲ್ಲಿ ಶರಣಬಸಪ್ಪಗೌಡ ದರ್ಶನಾಪುರ ಅವರ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಪತ್ರಿಕಾ ಗೊಷ್ಠಿಯಲ್ಲಿ ಮಾತನಾಡಿದ ಅವರು ಪ್ರಚಾರ ಬಯಸದ ಅಭಿವೃದ್ಧಿ ಕಾರ್ಯಗಳಿಂದ, ತಮ್ಮ ಕೆಲಸಗಳಿಂದ ತಾಲ್ಲೂಕಿನ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿರುವ ಜನನಾಯಕ ಶರಣಬಸಪ್ಪಗೌಡ ದರ್ಶನಾಪುರ ಅವರು ಕಲ್ಯಾಣ ಕರ್ನಾಟಕದಲ್ಲಿ ಮಾದರಿ ರಾಜಕಾರಣಿಯಾಗಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಬಸವರಾಜ ಹಿರೇಮಠ ಅವರು ಮಾತನಾಡಿ ತಾಲ್ಲೂಕಿನ ಸರ್ವ ಸಮುದಾಯಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಮೂಲಕ ಶಹಾಪುರ ಕ್ಷೇತ್ರವನ್ನು ನಾಡಿಗೆ ಮಾದರಿಯಾಗಿ ಮಾಡಿರುವ ಬಹುಮುಖ ಪ್ರತಿಭೆಯ ರಾಜಕಾರಣಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕೃತಿಯ ಸಂಪಾದಕ ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್ ಅವರು ಮಾತನಾಡಿ ನಾಡಿನ ಕೆಲವೆ ಜನೋಪಯೋಗಿ ಶಾಸಕರಲ್ಲಿ ಶರಣಬಸಪ್ಪಗೌಡ ದರ್ಶನಾಪುರ ಅವರು ಒಬ್ಬರಾಗಿದ್ದಾರೆ. ಸಂಪಾದಿತ ಕಾಯಕದ ನಿಜ ನಾಯಕ ಗ್ರಂಥದಲ್ಲಿ ದರ್ಶನಾಪುರ ಅವರ ವ್ಯಕ್ತಿತ್ವ, ಜೀವಪರ ಕಾರ್ಯಗಳು, ಅಭಿವೃದ್ಧಿಯ ಚಟುವಟಿಕೆಗಳು ಮುಂತಾದವುಗಳ ಮೇಲೆ ಬೆಳಕು ಚೆಲ್ಲುವ ಲೇಖನಗಳು ನಾಡಿನ ಅನೇಕ ಸಾಹಿತಿಗಳು, ಹಿರಿಯ ರಾಜಕೀಯ ಮುತ್ಸದ್ಧಿಗಳು, ವಿಚಾರವಂತರು, ಬರಹಗಾರರು ನೀಡಿದ್ದಾರೆ ಎಂದು ತಿಳಿಸಿದರು.
ಹಿರಿಯ ಮುಖಂಡರಾದ ಕೆಂಚಪ್ಪ ನಗನೂರ, ರುದ್ರಣ ಚಟ್ರಕಿ, ಮುಂತಾದವರು ಗ್ರಂಥ ಬಿಡುಗಡೆಯ ಸಮಾರಂಭವನ್ನು ಕುರಿತು ತಿಳಿಸಿದರು. ಮುಖಂಡರಾದ ರೇವಣಸಿದ್ಧಪ್ಪ ಕಲಬುರ್ಗಿ, ಗುರು ಮಣಿಕಂಠ, ಮೌನೇಶ ನಾಟೇಕಾರ, ವಿಶ್ವನಾಥರಡ್ಡಿ ದರ್ಶನಾಪುರ, ಎಮ್ ನಾರಾಯಣ, ರಾಜು ಆನೆಗುಂದಿ, ದೇವೆಂದ್ರಪ್ಪ ಕನ್ಯಾಕೋಳೂರು, ಶಂಕರಗೌಡ ಮುಂತಾದವರು ಉಪಸ್ಥಿತರಿದ್ದರು.
ಮಾರ್ಚ 10ರಂದು ನಡೆಯುವ “ಕಾಯಕದ ನಿಜ ನಾಯಕ ಶರಣಬಸಪ್ಪಗೌಡ ದರ್ಶನಾಪುರ” ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ನಾಲವರದ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಹಾಗೂ ಅಬ್ಬೆತುಮಕೂರಿನ ಡಾ. ಗಂಗಾಧರ ಮಹಾಸ್ವಾಮಿಗಳು ಉದ್ಘಾಟಿಸುವರು. ವಿಶ್ರಾಂತ ಪ್ರಾಧ್ಯಾಪಕರಾದ ಅಜೇಂದ್ರ ಮಹಾಸ್ವಾಮಿಗಳು ಕೃತಿಯ ಕೃತಿ ಮಾತನಾಡುವರು. ಶಾಂತಮಲ್ಲಿಕಾರ್ಜುನ ಶಿವಾಚಾರ್ಯರು ಕೃತಿಯ ಲೋಕಾರ್ಪಣೆ ಮಾಡುವರು. ಹಿರಿಯ ರಾಜಕೀಯ ದುರೀಣ ಬಸವರಾಜಪ್ಪಗೌಡ ದರ್ಶನಾಪುರ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ನಾಡಿನ ಅನೇಕ ಪೂಜ್ಯರು ದಿವ್ಯ ಸಾನಿಧ್ಯ ವಹಿಸುವರು. ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದಾರೆ ಎಂದು ಅಭಿಮಾನಿಗಳ ಬಳಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.