ಮಾ. 1ರಿಂದ ಕಲ್ಯಾಣ ಕರ್ನಾಟಕ ಭಾಗದ ಶಾಲೆ ಬಿಟ್ಟ ಮಕ್ಕಳಿಗೆ ವಿಶೇಷ ತರಬೇತಿ: ಧನ್ನೂರ್

ಬೀದರ್:ಫೆ.16: ಮಾರ್ಚ್ 1ರಿಂದ ಮೇ.31ರ ವರೆಗೆ ಮೂರು ತಿಂಗಳ ಕಾಲ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ 50 ಜನ ಶಾಲೆ ಬಿಟ್ಟ ಬಾಲಕರಿಗೆ ಬೀದರ್‍ನ ಶಾಹಿನ್ ಶಿಕ್ಷಣ ಸಂಸ್ಥೆ ಅಡಿಯಲ್ಲಿ ರೋಟ್ರಿ ಕ್ಲಬ್ ಆಫ್ ಬೀದರ್ ವತಿಯಿಂದ ಎ.ಐ.ಸಿ.ಯು ಕೇಂದ್ರದ ಮೂಲಕ ವಿಶೇಷ ಉಚಿತ ತರಬೇತಿ, ಉಚಿತ ಊಟ, ವಸತಿ ಎಲ್ಲವೂ ನೀಡಿ ಜೂನ್ 1ರಂದು ತರಬೇತಿ ಪಡೆದ ಮಕ್ಕಳಿಗೆ ಎಸ್.ಎಸ್.ಎಲ್.ಸಿ ತರಗತಿಗೆ ಸರ್ಕಾರಿ ಶಾಲೆಗೆ ಸೇರಿಸಲಾಗುವುದೆಂದು ಏಳು ಕ್ರೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರೋಟ್ರಿ ಕ್ಲಬ್‍ನ ಅಧ್ಯಕ್ಷರಾದ ಬಸವರಾಜ ಧನ್ನೂರ್ ತಿಳಿಸಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ರೋಟ್ರಿ ಕ್ಲಬ್ ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಕೈ ಜೋಡಿಸಿ ಸುಮಾರು 15 ಸಾವಿರ ಕೋಟಿ ಖರ್ಚು ಮಾಡಿ 35 ವರ್ಷಗಳಿಂದ ವಿಶ್ವವನ್ನು ಪೋಲಿಯೋ ಮುಕ್ತ ವಿಶ್ವವನ್ನಾಗಿ ಪರಿವರ್ತಿಸುವ ಕಾರ್ಯ ಮಾಡಿದೆ. ಪಾಕಿಸ್ತಾನ ಹಾಗೂ ಅಪಘಾನಿಸ್ತಾನಗಳಲ್ಲಿ ಮಾತ್ರ ಒಂದೆರಡು ಪೋಲಿಯೋ ಕೇಸ್‍ಗಳು ಲಭ್ಯವಿರುವುದು ಬಿಟ್ಟರೆ ಭಾರತ ಸೇರಿದಂತೆ ಉಳಿದೆಡೆ ಪೋಲಿಯೋ ಮುಕ್ತ ವಿಶ್ವವಾಗಿ ಪರಿವರ್ತನೆಗೊಂಡಿದೆ. ನಂತರ ಕಾರ್ಯ ವಿಶ್ವವನ್ನು ಸಾಕ್ಷರವನ್ನಾಗಿ ಮಾಡುವ ಉದ್ದೇಶದಿಂದ ರೋಟ್ರಿ ಕ್ಲಬ್‍ಗಳು ಶಾಲೆಯಿಂದ ಯಾವ ಮಕ್ಕಳು ವಂಚಿತರಾಗಬಾರದೆಂಬ ಉದ್ದೇಶದಿಂದ ಈ ಯೋಜನೆಗೆ ಮುಂದಾಗಿದೆ. ಇದಕ್ಕೆ ಬೀದರ್ ಶಾಹಿನ್ ಕಾಲೇಜಿನಲ್ಲಿ ಈಗಾಗಲೇ ವಿಶೇಷ ನುರಿತ ಶಿಕ್ಷಕರು ಲಭ್ಯರಿದ್ದು, ಮೊದಲ ಬ್ಯಾಚ್ ಮಾರ್ಚ್ 1ರಿಂದ ಪ್ರಾರಂಭಿಸಲಾಗುವುದು. ಮೊದಲು ಕನ್ನಡ ಭಾಷೆ ಹಾಗೂ ಗಣಿತ ವಿಷಯಗಳಲ್ಲಿ ತರಬೇತಿ ನೀಡಲಾಗುವುದು. ಸದ್ಯ ಬರೀ 50 ಜನ ಬಾಲಕರಿಗೆ ಮಾತ್ರ ಈ ಉಚಿತ ತರಬೇತಿ ನೀಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಮಕ್ಕಳು ಇಲ್ಲಿ ಪ್ರವೇಶ ಪಡೆಯಲು ಮೊಬೈಲ್ ಮೂಲಕ ಸಪರ್ಕ ಮಾಡಬಹುದಾಗಿದೆ. ಹಾವಶೆಟ್ಟಿ ಪಾಟೀಲ:-9448125349, ಡಾ.ಉಲ್ಲಾಸ ಕಟ್ಟಿಮನಿ:- 9918524728, ನಿತೀನ ಕರ್ಪೂರ್:- 9845621852, ಚಂದ್ರಕಾಂತ ಕಾಡಾದಿ:= 9448114647 ಈ ದೂರವಾಣಿಗಳನ್ನು ಸಂಪರ್ಕಿಸಿ ಎ.ಐ.ಸಿ.ಯು ಕೇಂದ್ರದಲ್ಲಿ ಪ್ರವೇಶ ಪಡೆಯಬಹುದಾಗಿದೆ ಎಂದು ಧನ್ನೂರ್ ಹೇಳಿದರು.
ಶಾಹಿನ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾತನಾಡಿ, ಈಗಾಗಲೇ ಶಾಹಿನ್ ಸಮೂಹ ಶಿಕ್ಷಣ ಸಂಸ್ಥೆ ಕಳೆದ 15 ವರ್ಷಗಳಿಂದ ಡ್ರೌಪೌಟ್ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಈಗಾಗಲೇ 700ಕ್ಕೂ ಅಧಿಕ ಮಕ್ಕಳು ಈ ವಿಶೇಷ ತರಬೇತಿ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಭಾರತದ ಮೂಲೆ, ಮೂಲೆಗಳಿಂದ ಶಾಲೆ ಬಿಟ್ಟ ಮಕ್ಕಳು ನಮ್ಮಲ್ಲಿ ಬಂದು ಇಂತಹ ತರಬೇತಿ ಪಡೆಯುತ್ತಿರುವರು ಎಂದವರು ಹೇಳಿದರು.
ರೋಟ್ರಿ ಕ್ಲಬ್‍ನ ಹಿಂದಿನ ಅಧ್ಯಕ್ಷರಾದ ಹಾವಶೆಟ್ಟಿ ಪಾಟೀಲ, ಹಾಲಿ ಅಧ್ಯಕ್ಷರಾದ ಚಂದ್ರಕಾಂತ ಕಾಡಾದಿ, ಹಿರಿಯ ರೋಟ್ರಿಯನ್ ರವಿ ಮೂಲಗೆ, ಸದಸ್ಯರಾದ ಡಾ.ಉಲ್ಲಾಸ ಕಟ್ಟಿಮನಿ, ಡಾ.ಜಹಿರ್ ಅನ್ವರ್, ನಿತೀನ ಕರ್ಪೂರ್, ರೋಟ್ರಿ ಕ್ಲಬ್ ಆಫ್ ಪೋರ್ಟ್ ನ ಅಧ್ಯಕ್ಷ ಸಂಗಮೇಶ ಅಣದುರೆ, ಕಾರ್ಯದರ್ಶಿ ಗುಂಡಪ್ಪ ಗೋಧೆ ಸೇರಿದಂತೆ ಇತರರು ಉಪಸ್ಥಿತರಿದ್ದರು.