ಮಾ. 04 ರಂದು ಔರಾದನಲ್ಲಿ ವಿಜಯ ಸಂಕಲ್ಪ ಯಾತ್ರೆ :ಪನ್ನಾಳೆ

(ಸಂಜೆವಾಣಿ ವಾರ್ತೆ)
ಔರಾದ:ಫೇ.25:ಮಾರ್ಚ್ 4ರಂದು ಔರಾದ್ ಪಟ್ಟಣದಲ್ಲಿ ವಿಜಯ ಸಂಕಲ್ಪ ರಥ ಯಾತ್ರೆ ರೋಡ್ ಶೋ ಅದ್ದೂರಿಯಾಗಿ ನೇರವೇರಲಿದೆ. ಈ ರೋಡ್ ಶೋ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಲು ಎಲ್ಲರು ಭಾಗವಹಿಸುವ ಅಗತ್ಯವಿದೆ ಎಂದು ಔರಾದ ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಹೇಳಿದರು.
ಗುರುವಾರ ಔರಾದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಜಯ ಸಂಕಲ್ಪ ರಥ ಯಾತ್ರೆ ರೋಡ್ ಶೋದಲ್ಲಿ ರಾಜ್ಯವಲ್ಲದೇ ಜಿಲ್ಲೆಯ ಮುಖಂಡರುಗಳು, ಪಕ್ಷದ ವರಿಷ್ಠರು, ಕಾರ್ಯಕರ್ತರು ಭಾಗಿಯಾಗಿಯಾಗುತ್ತಿದ್ದಾರೆ. ಆದಕಾರಣ ಮತ್ತೇ ಔರಾದ್ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿ ತಾಲೂಕಿನ ಎಲ್ಲ ಜನತೆ ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆ ತರಬೇಕಾಗಿದೆ ಎಂದರು.
ಪಶು ಸಂಗೋಪನಾ ಇಲಾಖೆಯಲ್ಲಿ 200 ಕೋಟಿ ಹಗರಣ ನಡೆದಿದೆ ಎಂದು ಮಾನ್ಯ ರವೀಂದ್ರ ಸ್ವಾಮಿ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ಮಾತು, ರವೀಂದ್ರ ಸ್ವಾಮಿ ಅವರು 2018ರಲ್ಲಿ ಎನ್.ಸಿಪಿ ಪಕ್ಚದಿಂದ ಸ್ಪರ್ಧಿಸಲು ನಾಮ ನಿರ್ದೇಶನ ಹಾಕಿದ್ದರು, ನಂತರ ಅದು ತಿರಸ್ಕಾರಗೊಂಡಿದೆ, ಅಂದಿನಿಂದ ಈ ವರೆಗೆ ಬಿಜೆಪಿ ಪಕ್ಷದಲ್ಲಿ ಯಾವುದೆ ಸಭೆ ಸಮಾರಂಭಗಳಲ್ಲಿ ಅವರು ಪಾಲ್ಗೊಂಡಿರುವುದಿಲ್ಲ, ಹಿಗಾದರೆ ಇವರು ಬಿಜೆಪಿ ಪಕ್ಷದಲ್ಲಿ ಇರಲು ಹೇಗೆ ಸಾದ್ಯ ಎಂದು ರಾಮಶೆಟ್ಟಿ ಪನ್ನಾಳೆ ಪ್ರಶ್ನೆ ಮಾಡಿದ್ದಾರೆ. ವಿನಾಕಾರಣ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಹಗರಣ ನಡೆದ ದಾಖಲೆ ಇದ್ದರೆ ಪ್ರಸ್ತುತಪಡಿಸಲಿ ಎಂದರು. ಈ ಸಂದರ್ಭದಲ್ಲಿ ಖಂಡೋಬಾ ಕಂಗ್ಟೆ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.