
(ಸಂಜೆವಾಣಿ ವಾರ್ತೆ)
ಹುಮನಾಬಾದ್: ಫೆ.27:ಮಾರ್ಚ 03 ರಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾಹ್ ಅವರು ವಿಜಯ ಸಂಕಲ್ಪ ರಥ ಯಾತ್ರೆ ಪ್ರಯುಕ್ತ ಹುಮನಾಬಾದ ಪಟ್ಟಣಕ್ಕೆ ಆಗಮಿಸುತ್ತಿದ್ದು. ಹಳ್ಳಖೇಡ.ಬಿ ಪಟ್ಟಣದ ಸ್ಥಳೀಯ ಮುಖಂಡರ ಹಾಗೂ ಮಹಾಶಕ್ತಿ ಶಕ್ತಿ ಕೇಂದ್ರ, ಬೂತ್ ಮಟ್ಟದ ಕಾರ್ಯಕರ್ತರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರದ ಬಿ.ಜೆ.ಪಿ ಮುಖಂಡರಾದ ಡಾ. ಸಿದ್ದಲಿಂಗಪ್ಪಾ (ಸಿದ್ದು) ಪಾಟೀಲ ರವರು ಪಾಲ್ಗೊಂಡು, ಸಭೆಯ ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಎಸ್ ಟಿ ಮೋರ್ಚಾ ಕಾರ್ಯದರ್ಶಿ ಅರುಣ ಬಾವಗಿ, ಪಿ.ಕೆ.ಪಿ.ಎಸ್ ಅಧ್ಯಕ್ಷರಾದ ರಾಜು ಪಾಟೀಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಓಂ ಪ್ರಕಾಶ ಪ್ರಭಾ, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪ್ರಭಾ, ಪ್ರಕಾಶ ತಿಬಶೆಟ್ಟಿ, ನೆಹರು ಬಾವಗಿ, ಮುರಳಿ, ನರಸಿಂಗ ಸಾಗರ, ಜಗನಾಥ ಸಂಗೋಳಗಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ರಾಕೇಶ ಪಾಟೀಲ, ಮಂಡಲದ ಕಾರ್ಯದರ್ಶಿ ಮಧುಕರ ಹೀಲಾಲಪೂರ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರಕಾಶ ತಿಬಶೆಟ್ಟಿ, ಶಕ್ತಿ ಕೇಂದ್ರ ಅಧ್ಯಕ್ಷರಾದ ಸುನೀಲ ಚನ್ನಶೆಟ್ಟಿ, ರಾಜೇಶ ಪಸರ್ಗಿ, ಶಂಕರ ಸ್ವಂತ, ವೇದಪ್ರಕಾಶ ಹಲಶೆಟ್ಟಿ, ಸಂತೋಷ ಹಡಪದ, ಸಂತೋಷ ಜಮಾದಾರ, ಪ್ರಕಾಶ ಬಾಳುಕರ್, ಮುಂತಾದ ಪಕ್ಷದ ಮುಖಂಡ ಕಾರ್ಯಕರ್ತರು ಉಪಸ್ಥಿತರಿದ್ದರು.