ಮಾ.೫ ರಂದು‌  ಹೆಬ್ಬಾಳಿನಲ್ಲಿ ತಾಲ್ಲೂಕು ಕಸಾಪ ಸಮ್ಮೇಳನ


ಸಂಜೆವಾಣಿ ವಾರ್ತೆ
ದಾವಣಗೆರೆ. ಮಾ.4; ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾ.೫ ರಂದು ತಾಲ್ಲೂಕಿನ ಹೆಬ್ಬಾಳು ಗ್ರಾಮದಲ್ಲಿ ಲೇಖಕಿ ಬಿ.ಟಿ.ಜಾಹ್ನವಿಯವರ ಅಧ್ಯಕ್ಷತೆಯಲ್ಲಿ೧೦ ನೇ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ‌ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ತಾಲೂಕು ಪರಿಷತ್ತು ಅಧ್ಯಕ್ಷೆ ಸುಮತಿ ಜಯಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರುಮಾ.೫ ರಂದು ಬೆಳಗ್ಗೆ ೮ ಕ್ಕೆ ಧ್ವಜಾರೋಹಣ ನಡೆಯಲಿದೆ.ನಂತರ ಬೆಳಗ್ಗೆ ೯ ಕ್ಕೆ ಜರುಗುವ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ತಹಶೀಲ್ದಾರ್ ಡಾ.ಎಂ.ಬಿ ಅಶ್ವಥ್ ಚಾಲನೆ ನೀಡಲಿದ್ದಾರೆ.ಬೆಳಗ್ಗೆ ೧೦ ಕ್ಕೆ ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಜರುಗುವ ಸಮ್ಮೇಳನದ ಅಧ್ಯಕ್ಷತೆಯನ್ನು ಶಾಸಕ ಕೆ.ಎಸ್ ಬಸವಂತಪ್ಪ ವಹಿಸಿಕೊಳ್ಳಲಿದ್ದಾರೆ.ಶಾಸಕ ಶಾಮನೂರು ಶಿವಶಂಕರಪ್ಪ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಮಹಾದ್ವಾರ ಉದ್ಘಾಟಿಸಲಿದ್ದಾರೆ.ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಬಳ್ಳಾರಿ ಸಿದ್ದಮ್ಮ ಮಹಾಮಂಟಪ ಉದ್ಘಾಟಿಸಲಿದ್ದಾರೆ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಬಿ.ಇ ರಂಗಸ್ವಾಮಿ ಸಮ್ಮೇಳನದ ಉದ್ಘಾಟನೆ ಮಾಡಲಿದ್ದಾರೆಂದರು.ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಆಶಯ ನುಡಿಗಳನ್ನಾಡಲಿದ್ದಾರೆ.ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿ‌ಜಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಿ.ಎನ್ ಮಲ್ಲೇಶ್ ಕನ್ನಡಧ್ವಜ ಹಸ್ತಾಂತರ ಮಾಡಲಿದ್ದಾರೆ.ನಂತರ ಸಮ್ಮೇಳನಾಧ್ಯಕ್ಷರು ಕನ್ನಡ ಧ್ವಜ ಸ್ವೀಕಾರ ಮಾಡಲಿದ್ದಾರೆ.ತಾಲ್ಲೂಕು ಕಸಾಪ ಗೌರವಾಧ್ಯಕ್ಷ ದಾಗಿನಕಟ್ಟೆ ಪರಮೇಶ್ವರಪ್ಪ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಲಿದ್ದಾರೆ ಬಳಿಕ ಸಮ್ಮೇಳನಾಧ್ಯಕ್ಷರಾದ ಸಾಹಿತಿ ಬಿ.ಟಿ ಜಾಹ್ನವಿ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪರಿಷತ್ ಸದಸ್ಯ ವೈ.ಎ ನಾರಾಯಣಸ್ವಾಮಿ,ಸಿಇಓ ಸುರೇಶ್ ಬಿ ಹಿಟ್ನಾಳ್,ಅಣಬೇರು ರಾಜಣ್ಣ,ಪ್ರಭಾ ಮಲ್ಲಿಕಾರ್ಜುನ್ ಮತ್ತಿತರರು ಆಗಮಿಸಲಿದ್ದಾರೆಂದರು.ಮಧ್ಯಾಹ್ನ ೧ ಕ್ಕೆ ಸಾಹಿತ್ಯಗೋಷ್ಠಿ ನಡೆಯಲಿದ್ದು ಸಾಹಿತಿ ಎಂ.ಎಸ್ ರುದ್ರೇಶ್ವರ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.ವಚನ ಚಳುವಳಿಯಲ್ಲಿ ಸಾಮಾಜಿಕ ಚಿಂತನೆ ಕುರಿತು ಡಾ.ಎಂ ಮಂಜಣ್ಣ,ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ತಂತ್ರಜ್ಞಾನದ ಪಾತ್ರ ಕುರಿತು ಎಚ್ ಎಸ್ ದ್ಯಾಮೇಶ್ ಮಾತನಾಡಲಿದ್ದಾರೆ.ಸಂಜೆ ೪ ಕ್ಕೆ ಬಹಿರಂಗ ಅಧಿವೇಶನ ನಡೆಯಲಿದ್ದು ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.ಗೌರವ ಕೋಶಾಧ್ಯಕ್ಷರಾದ ಹೆಚ್.ಕೆ ಪಾಲಾಕ್ಷಪ್ಪ ಗೋಪನಾಳ್ ನಿರ್ಣಯಗಳ ಮಂಡಿಸಲಿದ್ದಾರೆಂದರು.ಸಂಜೆ ೫ ಕ್ಕೆ ನಡೆಯಲಿರುವ ಸಮಾರೋಪ‌ ಸಮಾರಂಭದಲ್ಲಿ‌  ಸಮ್ಮೇಳನಾಧ್ಯಕ್ಷರಾದ ಬಿ.ಟಿ‌.ಜಾಹ್ನವಿಯವರು‌ ಸಮೀಕ್ಷಾ ನುಡಿಗಳನ್ನಾಡಲಿದ್ದಾರೆ.ಸರ್ಕಾರಿ ಪ್ರಥಮ‌ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ದಾದಾಪೀರ್ ನವಿಲೇಹಾಳ್ ಸಮಾರೋಪ ನುಡಿಗಳನ್ನಾಡಲಿದ್ದಾರೆ.ಸಂಸದ ಜಿ.ಎಂ ಸಿದ್ದೇಶ್ವರ್ ಸಾಧಕರಿಗೆ ಸನ್ಮಾನ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕ ಬಸವರಾಜ್ ಶಿವಗಂಗಾ,ಬಿ.ಪಾಲಾಕ್ಷಿ,ಸಿ.ಟಿ ಮಹಾಂತೇಶ್,ಇ.ಎಂ ಮಂಜುನಾಥ್ ಏಕಬೋಟೆ,ಬಿ.ದಿಳ್ಯಪ್ಪ,ರೇವಣಸಿದ್ದಪ್ಪ ಅಂಗಡಿ,ಕೆ.ರಾಘವೇಂದ್ರ ನಾಯರಿ ಮತ್ತಿತರರು ಆಗಮಿಸಲಿದ್ದಾರೆ.ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕೆ.ಜಿ ಸಿದ್ದಪ್ಪ,ಎಸ್ ರತ್ನಮ್ಮ,ಕಬ್ಬಡ್ಡಿ ನಾಗರಾಜ್,ನರೇಂದ್ರ ಬಾಬು,ಹೆಚ್.ವಿ ದೇವಿಕಾ ಸುನೀಲ್,ಮಲ್ಲೇಶಪ್ಪ ಸೇರಿದಂತೆ ಹಲವರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು.ನಂತರ ಸಾಂಸ್ಕೃತಿಕ ಸಂಭ್ರಮ ಜರುಗಲಿದ್ದು ಬಂಜಾರ ಬಾಷಾ ಅಕಾಡೆಮಿಯ ಸದಸ್ಯ ಉಮೇಶ್ ನಾಯ್ಕ್ ಚಾಲನೆ‌ ನೀಡಲಿದ್ದಾರೆ‌ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಿ.ಜಿ. ಜಗದೀಶ್ ಕೂಲಂಬಿ, ಕೆ.ಜಿ.‌ ಸೌಭಾಗ್ಯ, ಬೇತೂರು ಎಂ. ಷಡಾಕ್ಷರಪ್ಪ, ದಾಗಿನಕಟ್ಟೆ ಪರಮೇಶ್ವರಪ್ಪ, ಡಾ. ಶಿವಯ್ಯ, ಕುರ್ಕಿ ಸಿದ್ದೇಶ್ ಇದ್ದರು.