ಮಾ.೩ ರಿಂದ ಮುಕ್ತಗುಚ್ಚ ಬೃಹನ್ಮಠ ಕಲ್ಮಠದ ವತಿಯಿಂದ ಗಾರಿಗೆ ಜಾತ್ರೆ ಮಹೋತ್ಸವ

ಸಂಜೆವಾಣಿ ವಾರ್ತೆ
ಮಾನ್ವಿ.ಮಾ.೦೨- ಪಟ್ಟಣದ ಮುಕ್ತಗುಚ್ಚ ಬೃಹನ್ಮಠ ಕಲ್ಮಠದ ವತಿಯಿಂದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ನೀಲಗಲ್ ಬೃಹನ್ಮಠದ ಶ್ರೀ ರೇಣುಕ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಪ್ರತಿ ವರ್ಷ ಶಿವರಾತ್ರಿ ಅಂಗವಾಗಿ ನಡೆಯುವ ಗಾರಿಗೆ ಜಾತ್ರೆಯು ಮಾ.೩ ರಿಂದ ೮ರವರೆಗೆ ನಡೆಯಲಿದ್ದು ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ಮಾ.೩ ರಂದು ಧ್ಯಾನ ಮಂದಿರದ ಆವರಣದಲ್ಲಿ ಬೆಳಿಗ್ಗೆ ೮-೩೦ಕ್ಕೆ ನೀಲಗಲ್ ಸಂಸ್ಥಾನ ಬೃಹನ್ಮಠ ಶ್ರೀ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಂತರ ಮಾತಾನಾಡಿ ಸಂಜೆ ೬-೩೦ಕ್ಕೆ ಕೈವಲ್ಯದರ್ಶನ ಪ್ರವಚನ ಕಾರ್ಯಕ್ರಮವನ್ನು ಸಣ್ಣ ನೀರಾವರಿ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಉದ್ಗಾಟಿಸಲಿದ್ದಾರೆ. ದಿವ್ಯಾ ಸಾನಿಧ್ಯವನ್ನು ರಾಯಚೂರಿನ ಮಂಗಳವಾರಪೇಟೆ ಹಿರೇಮಠದ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅರಳಹಳ್ಳಿಯ ರಾಜೇಶ್ವರಿಮಠದ ಶ್ರೀ ಶರಣಬಸವ ದೇವರು ವಹಿಸಲಿದ್ದು. ಶಾಸಕ ಹಂಪಯ್ಯನಾಯಕ, ಮಾಜಿಶಾಸಕರಾದ ಬಸವನಗೌಡ ಬ್ಯಾಗವಾಟ್, ರಾಜಾ ವೆಂಕಟಪ್ಪನಾಯಕ, ಗಂಗಾಧರನಾಯಕ,ಮಾಜಿ ಸಂಸದ ಬಿ.ವಿ.ನಾಯಕ, ಕರ್ನಾಟಕ ರಾಜ್ಯ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಎಂ.ಈರಣ್ಣ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು.
ಪ್ರವಚಾನವನ್ನು ಬ್ಯಾಡಗಿಹಾಳ್‌ನ ಶ್ರೀ ಸಿದ್ದರಾಮ ಶಾಸ್ತ್ರಿಗಳು ಹಿರೇಮಠ ನೀಡಲಿದ್ದಾರೆ. ನಂತರ ನೇತಾಜಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ.೪ ರಂದು ಬೆಳಿಗ್ಗೆ ೧೦-೩೦ಕ್ಕೆ ಕುಂಚಕಲರವ-೨೦೨೪ ಚಿತ್ರಕಲಾ ಸ್ಪರ್ಧೆಯನ್ನು ಖ್ಯಾತ ಚಿತ್ರಕಲಾವಿದರಾದ ವಾಜೀದ್ ಸಾಜೀದ್ ಸಹೋದರರು ಉದ್ಘಾಟಿಸಲಿದ್ದಾರೆ. ಸಂಜೆ ೬-೩೦ಕ್ಕೆ ಕೈವಲ್ಯ ದರ್ಶನ ಪ್ರವಚನದಲ್ಲಿ ನಾಡಿನ ವಿವಿಧ ಮಠಗಳ ಶ್ರೀಗಳು ಭಾಗವಹಿಸಲಿದ್ದಾರೆ. ರಾತ್ರಿ ೯ಕ್ಕೆ ಶ್ರೀ ಉಮಾಪತಿ ಪಾಟೀಲ್ ಮೆಮೋರಿಯಲ್ ಮಾಂಟೆಸರಿ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ಮಾ.೫ ರಂದು ಬೆಳಿಗ್ಗೆ ೧೦-೩೦ಕ್ಕೆ ಮಹಿಳಾ ದೇಶಿಕ್ರೀಡೆಗಳನ್ನು ಪದ್ಮಾವತಿ ಬಿ.ವಿ.ರೆಡ್ಡಿ, ವಿಜಯಲಕ್ಷ್ಮಿ, ಕೆ.ಈ.ನರಸಿಂಹ ಉದ್ಘಾಟಿಸಲಿದ್ದಾರೆ. ಸಂಜೆ ೬-೩೦ಕ್ಕೆ ಕೈವಲ್ಯ ದರ್ಶನ ಪ್ರವಚನದಲ್ಲಿ ನಾಡಿನ ವಿವಿಧ ಮಠಗಳ ಶ್ರೀಗಳು ಹಾಗೂ ಕೊಪ್ಪಳದ ಅಂತರಾಷ್ಟ್ರೀಯ ಜಾನಪದ ಕಲಾವಿದರಾದ ಜೀವನ್ ಸಾಬ್ ಭಾಗವಹಿಸಲಿದ್ದಾರೆ.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನ ಪ್ರದಾನ. ರಾತ್ರಿ ೯ಕ್ಕೆ ಶ್ರೀ ಪಂಪಾ ವಿರೂಪಾಕ್ಷೇಶ್ವರ ಅನುದಾನಿತ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು.
ಮಾ.೬ ರಂದು ಬೆಳಿಗ್ಗೆ ೧೦-೩೦ಕ್ಕೆ ಪುರುಷರ ದೇಶಿಕ್ರೀಡೆಗಳನ್ನು ಶರಣಪ್ಪಗೌಡ ನಕ್ಕುಂದಿ ಉದ್ಘಾಟಿಸಲಿದ್ದಾರೆ. ಸಂಜೆ ೬-೩೦ ಕ್ಕೆ ಕೈವಲ್ಯ ದರ್ಶನ ಪ್ರವಚನದಲ್ಲಿ ನಾಡಿನ ವಿವಿಧ ಮಠಗಳ ಶ್ರೀಗಳು ಭಾಗವಹಿಸಲಿದ್ದಾರೆ.
ರಾತ್ರಿ ೮-೩೦ಕ್ಕೆ ೨೦೨೪-೨೫ ನೇ ಸಾಲಿನ ರಾಜ್ಯಮಟ್ಟದ ಶ್ರೀ ವಿರೂಪಾಕ್ಷೇಶ್ವರ ಕೃಪಾ ಭೂಷಣ ಪ್ರಶಸ್ತಿಯನ್ನು ಮಸ್ಕಿಯ ಅಭಿನಂದನ್ ಶಿಕ್ಷಣ ಹಾಗೂ ಅಭಿವೃದ್ದಿ ಸಂಸ್ಥೆಗೆ ಪ್ರದಾನ ಮಾಡಲಾಗುವುದು. ರಾತ್ರಿ ೯ಕ್ಕೆ ಮಿಲ್ಟನ್ ಪಬ್ಲಿಕ್ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ಮಾ.೭ ರಂದು ಸಂಜೆ ೬-೩೦ಕ್ಕೆ ಕೈವಲ್ಯ ದರ್ಶನ ಪ್ರವಚನದ ಸಮಾರೋಪ ಸಮಾರಂಭ ಹಾಗೂ ಪೌರಕಾರ್ಮಿಕರ ಸಮಾವೇಶ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಗಳ ಶ್ರೀಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿಗಳ ವಿತರಣೆ ಬಿ.ವಿ.ಆರ್. ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು.
ಮಾ.೮ ರಂದು ಮಹಾಶಿವರಾತ್ರಿ ಕಾರ್ಯಕ್ರಮಗಳು ಹಾಗೂ ಬೆ.೯-೩೦ಕ್ಕೆ ನೀಲಗಲ್ ಸಂಸ್ಥಾನ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹಗಳುನಡೆಯಲಿವೆ.
ಸಂಜೆ ೪ಕ್ಕೆ ಪಟ್ಟಣದಲ್ಲಿನ ಕಲ್ಮಠದಿಂದ ಧ್ಯಾನ ಮಂದಿರದವರೆಗೆ ಲಿಂ.ಶ್ರೀ ಗುರು ವಿರೂಪಾಕ್ಷೇಶ್ವರ ಪಲ್ಲಕ್ಕಿ ಉತ್ಸವ ನಡೆಯಲಿದೆ
ಸಂಜೆ ೬-೩೦ಕ್ಕೆ ಧ್ಯಾನ ಮಂದಿರದ ಆವರಣದಲ್ಲಿ ನಡೆಯುವ ರಥೋತ್ಸವ ಗಾರಿಗೆ ಜಾತ್ರೆಯನ್ನು ಬೆಂಗಳೂರಿನ ಬೆಳಕು ಅಕಾಡೆಮಿಯ ಅಧ್ಯಕ್ಷರಾದ ಆಶ್ವಿನಿ ಅಂಗಡಿರವರು ಚಾಲನೆ ನೀಡಲಿದ್ದಾರೆ.
ಮಹಾಶಿವರಾತ್ರಿ ಅಂಗವಾಗಿ ಸಂಜೆ ೭ಕ್ಕೆ ಮಹಾಪ್ರಸಾದ ರಾತ್ರಿ ೮ಕ್ಕೆ ನೃತ್ಯ ಕಲಾ ವೈಭವ ನೃತ್ಯಸ್ಪರ್ಧೆ ನಡೆಯಲಿದ್ದೆ. ಎಂದು ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.