ಮಾ.೩ ರಂದು ದಾವಣಗೆರೆ ಚಿತ್ರಸಂತೆ-೨೦೨೪

ಸಂಜೆವಾಣಿ ವಾರ್ತೆ

ದಾವಣಗೆರೆ.: ದಾವಣಗೆರೆಯ ಎ.ವಿ.‌ಕಮಲಮ್ಮ ಮಹಿಳಾ ಕಾಲೇಜು ರಸ್ತೆಯಲ್ಲಿ ಮಾ. 3 ರಂದು ಮೂರನೇ ವರ್ಷದ ದಾವಣಗೆರೆ ಚಿತ್ರಸಂತೆ-2024 ನಡೆಯಲಿದೆ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಚಿತ್ರಕಲಾ ಪರಿಷತ್ತು ಕಾರ್ಯದರ್ಶಿ ಡಿ. ಶೇಷಾಚಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದಾವಣಗೆರೆಯ ಸ್ಥಳೀಯ ಚಿತ್ರಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಚಿತ್ರಸಂತೆ ನಡೆಸಿಕೊಂಡು ಬರಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆ ಗಿಂತಲೂ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.ಮಾ.೩ ರಂದು  ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಿತ್ರಸಂತೆ ಉದ್ಘಾ ಟಿಸುವರು. ಚಿತ್ರಕಲಾ ಪರಿಷತ್ತು ಅಧ್ಯಕ್ಷ ಡಿ.ಸಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ಶಾಸಕಾದ  ಶಾಮನೂರು ಶಿವಶಂಕರಪ್ಪ, ಡಿ.ಜಿ. ಶಾಂತನಗೌಡ, ಕೆ.ಎಸ್. ಬಸವಂತಪ್ಪ, ಬಿ. ದೇವೇಂದ್ರಪ್ಪ, ಮೇಯರ್ ವಿನಾಯಕ ಪೈಲ್ವಾನ್, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಮಹಾನಗರ ಪಾಲಿಕೆ ಆಯುಕ್ತೆ ಜಿ. ರೇಣುಕಾ ಇತರರು ಭಾಗವಹಿಸುವರು ಎಂದು ತಿಳಿಸಿದರು.ಸಂಜೆ 5.15ಕ್ಕೆ ನಡೆಯುವ ಸಮಾರೋಪದಲ್ಲಿ ಸಂಸದ ಡಾ.ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ.‌ಹರೀಶ್, ಬಸವ ರಾಜ ಶಿವಗಂಗಾ, ಮಾಜಿ ಶಾಸಕ ಎಚ್.ಎಸ್. ಶಿವ ಶಂಕರ್, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ , ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಡಾ.‌ ಸುರೇಶ್ ಬಿ. ಇಟ್ನಾಳ್ ಇತರರು ಭಾಗವಹಿಸುವರು ಎಂದು ತಿಳಿಸಿದರು.ಮಾ.೩ ಬೆಳಗ್ಗೆ 8 ರಿಂದ ಸಂಜೆ 7 ರ ವರೆಗೆ ಚಿತ್ರಸಂತೆ ನಡೆಯಲಿದೆ. ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ, ಆಂಧ್ರಪ್ರದೇಶ, ಕರ್ನಾಟಕದ ವಿವಿಧ ಭಾಗದ 150 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸುವರು. ಹೊರಗಡೆಯಿಂದ ಬಂದಂತಹ ವರಿಗೆ ಉಚಿತವಾಗಿ ವಸತಿ ಇತರೆ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ಪ್ರಮಾಣಪತ್ರ,  ಪ್ರತಿಭಾವಂತ ಕಲಾವಿದರು, ಉತ್ತಮ ಮಳಿಗೆ  ಸಿದ್ದಪಡಿಸಿಕೊಂಡವರಿಗೆ 9 ನಗದು ಬಹುಮಾನ ನೀಡ ಲಾಗುವುದು ಎಂದು ತಿಳಿಸಿದರು.ಪರಿಷತ್ತು ಅಧ್ಯಕ್ಷ ಡಿ.ಸಿ.‌ ಶ್ರೀನಿವಾಸ್, ಸದಾನಂದ ಹೆಗಡೆ, ಶಾಂತಯ್ಯ ಪರಡಿಮಠ್, ಎಂ. ಅಶೋಕ್, ಎಂ.ಎಸ್. ಚೇತನ್, ಎ. ಶಿವಕುಮಾರ್ ಇತರರು ಇದ್ದರು.