ಮಾ.೩೧ ರೊಳಗೆ ರೈತರು ಸಾಲ ಮರುಪಾವತಿಸಲು ಮನವಿ

ರಾಯಚೂರು, ಮಾ.೨೩-ಪಿ.ಎಲ್.ಡಿ ಬ್ಯಾಂಕಿನಲ್ಲಿ ಸಾಲ ಪಡೆದವರು ೪ ವರ್ಷವಾದರೂ ಕೂಡ ರೈತರು ಸಾಲ ಮರುಪಾವತಿ ಮಾಡಿಲ್ಲ.ಮಾರ್ಚ್ ೩೧ ರೊಳಗೆ ಸಾಲ ಪಾವತಿಸಬೇಕುಎಂದು
ವ್ಯವಸ್ಥಾಪಕ ನಿರ್ದೇಶಕ ಎ.ಬಿ ವಿಜಯಕುಮಾರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರೈತರ ಆರ್ಥಿಕ ಸುಧಾರಣೆಗೆ ಮತ್ತು ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ವಿವಿಧ ಉದ್ದೇಶಗಳಿಗೆ ಸಾಲುಗಳನ್ನು ನೀಡುತ್ತಾ ಬ್ಯಾಂಕ್ ಬಂದಿದೆ.ಆದರೆ ರೈತರು ಸಾಲ ಮರುಪಾವತಿ ಮಾಡದೇ ಇರುವುದರಿಂದ ವರ್ಷದಿಂದ ವರ್ಷಕ್ಕೆ ಶಿಸ್ತು ಮೊಚ್ಚ ಹೆಚ್ಚಾಗಿ ಅನುತ್ಪದಕ ಆಸ್ತಿಗಳ ಪ್ರಮಾಣವು ಹೆಚ್ಚುತ್ತಿರುವ ಕಾರಣ ರಾಜ್ಯ ಬ್ಯಾಂಕ್ ಮತ್ತು ಪಿಕಾರ್ಡ್ ಬ್ಯಾಂಕ್ ಗಳ ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಉಂಟಾಗಿ ಹೊಸ ಸಾಲಗಳ ವಿತರಣೆಯ ಕುಂಠಿತಗೊಳ್ಳುತ್ತಿದೆ ಎಂದು ಎಂದರು.
ಕೃಷಿ ಮತ್ತು ಕೃಷಿಯೇತರ ಅನುತ್ಪಾದಕ ಸಾಲಗಳಾಗಿರುವ ಸಾಲದ ಖಾತೆಗಳನ್ನು ಏಕಕಾಲಿಕ ಸಾಲ ತೀರುವಳಿ ಯೋಜನೆಯ ಪ್ರಯೋಜನವನ್ನು ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಲಿಮಿಟೆಡ್‌ನಲ್ಲಿ ಸುಸ್ತಿದಾರ ರೈತರು ಪಡೆದುಕೊಳ್ಳಬೇಕೆಂದು.ರಾಯಚೂರು ಸೇರಿದಂತೆ ಜಿಲ್ಲೆಯ ೭ ಪೀಕಾರ್ಡ್ ಬ್ಯಾಂಕ್‌ಗಳಲ್ಲಿ ೨೦೦೦ ಕ್ಕೂ ಅಧಿಕ ಖಾತೆಗಳು ಸುಸ್ತಿದಾರರಾಗಿದ್ದು ಅವರೆಲ್ಲರೂ ಈ ಯೋಜನೆಯ ಪ್ರಯೋಜನ ಪಡೆಯುವುದರಿಂದ ಅವರಿಗೂ ಅನುಕೂಲ ಬ್ಯಾಂಕ್ ಸದೃಢತೆಗೆ ಅವಕಾಶವಾದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ರೈತರಿಗೆ ಸಾಲ ವಿತರಿಸಿದ ಬಡ್ಡಿ ದರ ಮತ್ತು ಈ ಯೋಜನೆಯಲ್ಲಿ ಸಮಿತಿ ನಿಗದಿಪಡಿಸಿರುವ ಬಡ್ಡಿ ದರ ಶೇ.೮.೭೫% ರ ಅಂತರ ಸಾಲಗಾರರಿಗೆ ನೀಡುವ ರಿಯಾಯಿತಿಯಾಗಿರುತ್ತದೆ. ಈ ಯೋಜನೆಯಡಿ ರೈತರಿಗೆ ನೀಡಿದ ಬಡ್ಡಿ ರಿಯಾಯಿತಿ ಮೊತ್ತವನ್ನು ರಾಜ್ಯ ಬಾಂಕ್ ಮತ್ತು ಪೀಕಾರ್ಡ್ ಬ್ಯಾಂಕ್ ೫೦:೫೦ ಅನುಪಾತದಲ್ಲಿ ಭರಿಸಿಕೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್ ನ ಅಧ್ಯಕ್ಷ ಬಸವರಾಜ ಅಲ್ಕುರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.